ಕೇಂದ್ರಿಯ ಚುನಾವಣಾ ಸಮಿತಿಯು ಶನಿವಾರ ಸಂಜೆ ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಶಿವಮೊಗ್ಗದ ಹೆಸರಾಂತ ಮಕ್ಕಳ ತಜ್ಞ ಡಾ. ಧನಂಜಯ ಸರ್ಜಿ ಅವರ ಹೆಸರನ್ನು ಘೋಷಿಸಿದ ಹಿನ್ನೆಲೆಯಲ್ಲಿ ಡಾ.ಧನಂಜಯ ಸರ್ಜಿ ದಂಪತಿಗಳು ಜನಪ್ರಿಯ ಸಂಸದರಾದ ಬಿ.ವೈ.ರಾಘವೇಂದ್ರ ಅವರ ವಿನೋಬನಗರ ನಿವಾಸಕ್ಕೆ ತೆರಳಿ ಸಂತಸ ಹಂಚಿಕೊಂಡರು. ಈ ಸಂದರ್ಭ ಬಿ.ವೈ.ರಾಘವೇಂದ್ರ ಅವರು ಸಿಹಿ ತಿನ್ನಿಸಿ ಶುಭಾಶಯ ಕೋರಿದರು. ಪಕ್ಷದ ಯುವ ಮುಖಂಡ ಮಂಗೋಟೆ ರುದ್ರೇಶ್, ವಿರೂಪಾಕ್ಷಪ್ಪ, ಬಾಳೆಕಾಯಿ ಮೋಹನ್, ತಮ್ಮಡಿಹಳ್ಳಿ ನಾಗರಾಜ್, ಡಿ.ಎಂ.ಶಂಕರಪ್ಪ,ಅಶೋಕ್ ಮತ್ತಿತರರು ಹಾಜರಿದ್ದರು,