ವಿದ್ಯಾದೀಪ ಎಜುಕೇಶನ್ ಟ್ರಸ್ಟ್(ರಿ) ನ ಕ್ರಿಯೇಟಿವ್ ಕಿಡ್ಡೂಸ್ ಕಲಿಕಾ ಪೂರ್ವದ (Pre school) ವಿದ್ಯಾಸಂಸ್ಥೆಯು ಇಂದು ಶಿಕ್ಷಕ ಹಾಗೂ ಪೋಷಕರ ಸಾಂಸ್ಕೃತಿಕ ಸಂಜೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು.

ಕ್ರಿಯೇಟಿವ್ ಕಿಡ್ಡೂಸ್ ಕಲಿಕಾ ಪೂರ್ವದ (Pre school) ವಿದ್ಯಾಸಂಸ್ಥೆಯು ಶಿಕ್ಷಕ ಹಾಗೂ ಪೋಷಕರ ಸಾಂಸ್ಕೃತಿಕ ಸಂಜೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಡಾಕ್ಟರ್ ಎ ಸತೀಶ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಾ. ಸತೀಶ್ ಕುಮಾರ್ ಶೆಟ್ಟಿ ಪೋಷಕರು ಹಾಗೂ ಶಿಕ್ಷಕರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಶಾಲೆ ಎಂದರೆ ಬರೀ ಪಠ್ಯಕ್ರಮದ ಶಿಕ್ಷಣ ಮಾತ್ರವಲ್ಲ ವಿಸ್ತಾರವಾಗಿರಬೇಕು ವಿಸ್ತಾರವಾದ ಶಿಕ್ಷಣವನ್ನು ವ್ಯಾಖ್ಯಾನಿಸುವುದು ತುಂಬಾ ಕಷ್ಟ ಹಲವು ಅದಾರ್ಶನಿಕರು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನವನ್ನು ಮಾಡಿರುತ್ತಾರೆ ನೆಲ್ಸನ್ ಮಂಡೇಲಾ ಹೇಳುತ್ತಾರೆ ಈ ಜಗತ್ತನ್ನ ಬದಲಿಸುವ ಶಕ್ತಿ ಹಾಗೂ ಆಳತಕ್ಕಂತಹ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ ಸ್ವಾಮಿ ವಿವೇಕಾನಂದರು ಹೇಳುತ್ತಾರೆ ತನ್ನೊಳಗಿರುವ ಪ್ರತಿಭೆಯನ್ನು ಹೊರ ಹಾಕುವುದೇ ಶಿಕ್ಷಣ ಎಂದು ಕರೆಯುತ್ತಾರೆ ಬಿ ಎಂ ಶ್ರೀ ಹೇಳುವಂತೆ ಕತ್ತರಿನಿಂದ ಬೆಳಕಿಗೆ ಕೊಂಡೊಯ್ಯುವುದೇ ಶಿಕ್ಷಣ ಸಂಸ್ಕಾರ ಮತ್ತು ಸಂಸ್ಕೃತಿ ಒಟ್ಟುಗೂಡಿಸುವುದೇ ಶಿಕ್ಷಣ ಶಿಕ್ಷಣವನ್ನು ಕೊಡುವುದರಲ್ಲಿ ಶಿಕ್ಷಕರ ಪಾತ್ರ ತುಂಬಾ ದೊಡ್ಡದು ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳು ಆಯಿತು ಅಗಾಧವಾದ ಬದಲಾವಣೆಯನ್ನು ದೇಶ ಕಂಡಿದೆ ಪ್ರಪಂಚದಲ್ಲಿ ಎಲ್ಲರ ದೃಷ್ಟಿ ಭಾರತದ ಕಡೆ ಇದೆ ಇದಕ್ಕೆ ಕಾರಣ ಯಾರು ಎಂದು ವಿಶ್ಲೇಷಣೆಯನ್ನು ಮಾಡಲು ಹೊರಟರೆ ಅಲ್ಲಿ ಸಿಗುವ ಉತ್ತರ ಶಿಕ್ಷಣ ಮತ್ತು ಶಿಕ್ಷಕರು ಸ್ವಾತಂತ್ರ್ಯ ಪೂರ್ವದಲ್ಲಿ ಸಾಕ್ಷರತಾ ಪ್ರಮಾಣ ಕೇವಲ 10 ರಿಂದ 12 ಶೇಕಡವಾರು ಇತ್ತು ಇಂದು ಸಾಕ್ಷರತೆಯ ಶೇಕಡಾ 72 ಪ್ರಮಾಣ ಇದು ನಿಜವಾಗಿಯೂ ಅಗಾಧವಾದ ಸಾಧನೆ ಪ್ರತಿ ಮನೆ ಮನೆಯಲ್ಲಿ ಶಿಕ್ಷಣ ಹೊಕ್ಕಿದೆ ಈ ಅಗಾಧವಾದ ಬದಲಾವಣೆಯ ಹಿಂದೆ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಶಿಕ್ಷಕರ ಅಪಾರವಾದ ಪರಿಶ್ರಮ ಹಾಗೂ ಪ್ರತಿಭೆಯಿಂದ ಭಾರತ ಇಂದು ಪ್ರಪಂಚದ ಮುಂಚೂಣಿ ದೇಶಗಳಲ್ಲಿ ಒಂದು ಎನ್ನುವ ಹೆಸರನ್ನು ಮಾಡಿಕೊಂಡಿದೆ

ಮುಖ್ಯವಾಗಿ ಪ್ರಿ ಸ್ಕೂಲ್ ನಲ್ಲಿ ಶಿಕ್ಷಕರನ್ನು ತಾಯಂದಿರು ಎಂದು ಕರೆಯುತ್ತಾರೆ ಯಾವಾಗ ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ ಆಗ ಮಗುವಿಗೆ ಶಿಕ್ಷಕರಲ್ಲಿ ತಾಯಿಯ ಮಮತೆ ಸಿಗುತ್ತದೆ ಶಾಲೆಯಲ್ಲಿ ಸಿಗುವ ಪಠ್ಯಕ್ರಮದ ಶಿಕ್ಷಣ ಸಂಸ್ಕಾರದ ಹಾಗೂ ಸಂಸ್ಕೃತಿಯ ಶಿಕ್ಷಣ ಹೇಳಿಕೊಡಲಾಗುತ್ತದೆ ಅಲ್ಲಿಗೆ ಮಾತ್ರ ಸೀಮಿತವಾಗಬಾರದು ಮಕ್ಕಳನ್ನು ಸಂಸ್ಕಾರ ಹಾಗೂ ಸಮಾಜಮುಖಿಯಾಗಿ ಬೆಳೆಸೋಣ

ನೀರು ಸಂಸ್ಕಾರಗೊಂಡರೆ ತೀರ್ಥವಾಗುತ್ತದೆ ಅನ್ನ ಸಂಸ್ಕಾರಗೊಂಡರೆ ಪ್ರಸಾದವಾಗುತ್ತದೆ ಕಲ್ಲು ಸಂಸ್ಕಾರಗೊಂಡರೆ ವಿಗ್ರಹವಾಗುತ್ತದೆ ಮನುಷ್ಯ ಕೂಡ ಮತ್ತು ನಡತೆಗಳಿಂದ ಸಂಸ್ಕಾರಗೊಂಡರೆ ಸುಸಂಸ್ಕೃತನಾಗುತ್ತಾನೆ ಎಂದು ದಾರ್ಶನಿಕರು ಹೇಳುತ್ತಾರೆ

ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ಪೋಷಕರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು ಶಿಕ್ಷಕರು ಹಾಗೂ ಪೋಷಕರು ನೃತ್ಯ, ಪೊಪೆಟ್ ಶೋ, ಮಿಮಿಕ್ರಿ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು ನಂತರ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ ಪೋಷಕರು ಹಾಗೂ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು

ಕಾರ್ಯಕ್ರಮದಲ್ಲಿ ವಿದ್ಯಾದೀಪ ವಿದ್ಯಾದೀಪ ಎಜುಕೇಶನ್ ಟ್ರಸ್ಟ್(ರಿ) ನ ಕಾರ್ಯದರ್ಶಿ ರಾಮಕೃಷ್ಣ ಶೆಟ್ಟಿ, ಕ್ರಿಯೇಟಿವ್ ಕಿಡ್ಡೂಸ್ ಕಲಿಕಾ ಪೂರ್ವದ (Pre school) ವಿದ್ಯಾಸಂಸ್ಥೆಯ ಪ್ರಾಶುಪಾಲರಾದ ದೀಪ್ತಿ ಆರ್ ಶೆಟ್ಟಿ ಹಾಗು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

error: Content is protected !!