ಶಿವಮೊಗ: ದೇಶದಲ್ಲಿ ಮೊಬೈಲ್ ಬಳಕೆಯು ಒಂದು ದೊಡ್ಡ ವ್ಯಸನವಾಗಿದೆ. ಇದೆ ರೀತಿಯಲ್ಲಿವಮುಂದುವರಿದರೆ ದೊಡ್ಡ ಅಪಾಯವಾಗಿ ಪರಿಣಮಿಸಲಿದೆ ಎಂದು ಪಾಸಿಟಿವ್ ಮೈಂಡ್ ಆಸ್ಪತ್ರೆಯ ಮನೋವೈದ್ಯ ಡಾ. ಅರವಿಂದ್ ಅವರು ಆತಂಕವನ್ನು ವ್ಯಕ್ತಪಡಿಸಿದರು.

ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಎರಡನೇ ದಿನದ ನವ ಮಾಧ್ಯಮದ ಬಿಕ್ಕಟ್ಟುಗಳು ಕುರಿತು ಗೋಷ್ಠಿಯಲ್ಲಿ ಮೊಬೈಲ್ ಮತ್ತು ಯುವ ಮನಸ್ಸು ಕುರಿತು ಮಾತನಾಡಿದ ಅವರು ಜಗತ್ತಿನಲ್ಲಿ ಭಾರತ ಮೊಬೈಲ್ ಉತ್ಪಾದನೆಯಲ್ಲಿ 2 ನೇ ಸ್ಥಾನವನ್ನು ಪಡೆದಿದೆ ನೀಲಿ ಚೀತ್ರ ವೀಕ್ಷಿಸುವ ಸಂಖ್ಯೆ ಭಾರತದಲ್ಲಿ ಅತೀ ಹೆಚ್ಚಾಗಿದೆ ಶೇ.93% ಮಕ್ಕಳ ಮೊಬೈಕ್ ಗೇಮ್ ವ್ಯಸನಿಗಳಾಗಿದ್ದಾರೆ ಮುಂಬೈ ಸರ್ವೆ ಒಂದರ ಪ್ರಕಾರ ಶೇ. 59% ರಷ್ಟು 1 3 ರಿಂದ 18 ವರ್ಷದ ಮಕ್ಕಳು ಪ್ರತಿದಿನ 3 ಗಂಟೆ ಮೊಬೈಲ್ ವ್ಯಸನಿಗಳಾಗಿದೆ ಶೇ. 77% ಮಕ್ಕಳು ಊಟ ಮಾಡಲು ಮೊಬೈಲ್ ಬೇಕು‌. ಇಲ್ಲವಾದರೆ ಊಟ ಮಾಡುವುದಿಲ್ಲ ಪ್ರತಿ ಗಂಟೆಗೆ 200 ಬಾರಿ ಮೊಬೈಲ್ ನೋಡುತ್ತಾರೆ‌ ಸದಾಕಾಲ ಮೊಬೈಲ್ ವ್ಯಸನಿಗಳಾಗಿದ್ದಾರೆ.
ಅತೀ ಚಿಕ್ಕ ವಯಸ್ಸಿನಲ್ಲಿ ಅಶ್ಲೀಲ ಚಿತ್ರಗಳ ವೀಕ್ಷಿಸುತ್ತಿದ್ದಾರೆ. ಇದು ಅತ್ಯಂತ‌ ದುಷ್ಪರಿಣಾಮವಾಗಿದೆ ಮನೋವೈದ್ಯಕೀಯದಲ್ಲಿ ಇದು ಒಂದು ಹೊಸ ಕಾಯಿಲೆಯಾಗಿ‌ದ್ದು ವ್ಯಸನಿಗಳಿಗೆ ವ್ಯಸನಮುಕ್ತ ಮಾಡಲು‌ ಹೇಗೆ ಚಿಕಿತ್ಸೆ ನೀಡಲಾಗುತ್ತದೆ‌ ಅದೇ ರೀತಿ ನಿಮ್ಹಾನ್ಸ್ ನಲ್ಲಿ ಮೊಬೈಲ್ ಬಿಡಿಸಲು ಹೊಸ ವಿಭಾಗ ತೆರೆಯಲಾಗಿದೆ ಎಂದರು.

ಈ‌ಸಮಸ್ಯೆಗಳಿಗೆ ಪರಿಹಾರ ಮನೆಗೆ ಮೊದಲು ಪೋಷಕರು
ಮಕ್ಕಳಿಗೆ ಮೊಬೈಲ್‌ ಕೊಡದಂತೆ ಎಚ್ಚರ ವಹಿಸಬೇಕು ಮೊಬೈಲ್ ನೀಡಿದರು ಕೂಡ ಅವರು ಅದನ್ನು ಹೇಗೆ‌‌‌ ಬಳಸುತ್ತಿದ್ದಾರೆ ಎಂಬುದು ತಿಳಿದುಕೊಳ್ಳವುದು ಅಗತ್ಯ
ಮೊಬೈಲ್‌ ನಲ್ಲಿ ಆಶ್ಲಿಲ ಚಿತ್ರಗಳು ವಿಕ್ಷಿಸಿದಂತೆ ಸೆಂಟಿಂಗ್ ಮಾಡಿಕೊಳ್ಳುವುದು ಮೊಬೈಲ್ ಗೀಳು ಕಡಿಮೆ ಮಾಡಲು
ಆಪ್ತ ಸಮಾಲೋಚನೆ ಮಾಡಿಸಬೇಕು ಮೊಬೈಲ್ ನಿಂದ ಜಗತ್ತಿನಲ್ಲಿ ಪ್ರತಿ 42 ನಿಮಿಷಕ್ಕೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ‌ ಶೇ.70% ಯುವ ಜನತೆ ಆತ್ಮಹತ್ಯೆ ಪ್ರಕರಣ ಜಾಸ್ತಿಯಾಗಿದೆ.

ಪ್ರತಿ ಶಾಲಾ ಕಾಲೇಜು ಮಟ್ಟದಲ್ಲಿ ಮೊಬೈಲ್ ದುಷ್ಪರಿಣಾಮಗಳ ಕುರಿತು ಜಾಗೃತಿ ಅಗತ್ಯ ತಂದೆ ತಾಯಿ ಮಕ್ಕಳಿಗೆ ಮೊದಲು ಉತ್ತಮವಾಗ ಸಂಸ್ಕಾರ ಮಾರ್ಗದರ್ಶನ ನೀಡಬೇಕು ಉತ್ತಮವಾದ ಸಮಾಜ‌ ನಿರ್ಮಾಣ ಆದರ್ಶ ಜೀವನ‌ ಪೋಷಕರಿಂದ‌‌ ಸಾಧ್ಯ ಮಾನಸಿಕ ಆರೋಗ್ಯ ಉದಾಸೀನ ಆಗಬಾರದು ಎಂದರು.

ವಿದ್ಯಾರ್ಥಿ ವಿಭಾಗದಲ್ಲಿ ಸನಿಕಾ ಹೆಗಡೆ ಮಾತನಾಡಿ,
2019 ಕೋವಿಡ್‌ ನಿಂದ ಆನ್ಲೈನ್ ತರಗತಿ ಆರಂಭವಾಯಿತು‌ ಅದರೆ ಕೋವಿಡ್ ನಂತದ ಮೊಬೈಲ್ ಬಳಕೆ ಮಕ್ಕಳು ಮುಂದುವರಿಸಿದ್ದಾರೆ ವಿದ್ಯಾರ್ಥಿಗಳು ಮೊಬೈಕ್ ವ್ಯಸನಿಗಳಾಗಿದ್ದಾರೆ‌ ಇದು ನವ ಮಾಧ್ಯಮದ ಬಿಕ್ಕಟ್ಟು ಆಗಿದ್ದು ಮಕ್ಕಳ ಜೀವನ ಹಾಳಗಿದೆ‌ ಸಂಬಂಧಗಳ ಮೌಲ್ಯಗಳು ಉಳಿದಿಲ್ಲ ಮೊಬೈಲ್ ಸದ್ಬಳಕೆಯಾಗಬೇಕು ಹೊರತು ದುರುಪಯೋಗ ಆಗಬಾರದು ಯುವ‌ ಜನತೆಯ ಸಾವಿಗೆ ಮೊಬೈಲ್ ಕಾರಣವಾಗಿದೆ ಮಾಧ್ಯಮ ಜೊತೆಗೆ ಸಾಹಿತ್ಯ ಕಥೆ, ಪುಸ್ತಕ ಓದುವುದು ಈಗೆ ಅನೇಕ ರೀತಿಯ ಬದಲಾವಣೆ ಅಗತ್ಯವಾಗಿದೆ ಎಂದರು‌.

ಪೋಷಕ ವಿಭಾಗದಲ್ಲಿ ಶೋಭಾ ವೆಂಕಟರಮಣ ಮಾತನಾಡಿ,
ಮಕ್ಕಳನ್ನು ಬೆಳಸುವುದರಲ್ಲಿ ಪೋಷಕ ಪಾತ್ರ ಅಪಾರವಾಗಿದೆ ಮೊಬೈಲ್ ಬಳಕೆಯಲ್ಲಿ ಸರಿ ತಪ್ಪು ಗೊತ್ತಿಲ್ಲ ವಯಸ್ಸಿನಲ್ಲಿ ಹಾದಿ ತಪ್ಪದಂತೆ ಪೋಷಕರು ಮಕ್ಕಳನ್ನು ಗಮನಿಸುವುದು ಅಗತ್ಯ

ಗೌರವ ಘನತೆ ಹೆಸರಿನಲ್ಲಿ ಪೋಷಕರು ರೂ.10 ಸಾವಿರ 15 ಸಾವಿರ, ಲಕ್ಷಾಂತರ ಬೆಲೆಯ ಮೊಬೈಲ್ ಕೊಡಿಸಿ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ತಂದೆತಾಯಿಗಳಾದ ನಾವು ಮೊದಲು ಸರಿ ದಾರಿಯಲ್ಲಿ ನಡೆಯಬೇಕು. ಆಗ ಮಾತ್ರ ಮಕ್ಕಳನ್ನು ತಿದ್ದಲು ಸಾಧ್ಯ
ಪೋಷಕರು ಮಕ್ಕಳ ಮೇಲೆ ಕುರುಡು ಪ್ರೀತಿ ಬಿಡಿ ನನ್ನ ಮಕ್ಕಳು ಮಾತ್ರ ತಪ್ಪು ಮಾಡೊದಿಲ್ಲ ಎಂದು ಕುರುಡು ಪ್ರೀತಿ ಬೇಡ. ತಪ್ಪು ಏನಿದ್ದರೂ ತಿದ್ದಿ ಹದಿಹರೆಯದ ವಯಸ್ಸಿನಲ್ಲಿ ಮಕ್ಕಳ ಮನಸ್ಸು ವಿಚಲಿತವಾಗುವುದು ಸಹಜ ದಾರಿತಪ್ಪದಂತೆ ಪೋಷಕರು ಜವಾಬ್ದಾರಿ ಮುಖ್ಯ ಎಂದರು‌.

ಶಿಕ್ಷಕರರ ವಿಭಾಗದಿಂದ ಬಿ ಪಾಪಯ್ಯ ಮಾತನಾಡಿ
ಮಗುವಿಗೆ ಮೊಬೈಲ್‌ ನೀಡಲು ಆರಂಭಿಸಿದ್ದು ತಂದೆ ತಾಯಿಗಳು .ತಾಯಿ ಗರ್ಭಿಣಿಯ ಸಂದರ್ಭ ಮಬೈಲ್ ಬಳಕೆ ಹಾಗೂ ಧಾರವಾಹಿ ಸಿನಿಮಾ ಹಾಗೂ ಮನೋರಂಜನೆ ಕಾರ್ಯಕ್ರಮ ನೊಡುವುದರಿಂದ ಮಕ್ಕಳು ಕೂಡ ಹಾಗೆ ಆಗುತ್ತಾರೆ. ಅದೇ ರೀತಿ ಹಿಂದೆ ಮಹಿಳೆಯರು ಗರ್ಭಿಣಿ ‌ಸಂದರ್ಭ ಕಥೆ ರಾಮಾಯಣ, ಧರ್ಮ ಸಂಸ್ಕಾರದಿಂದ ನಡೆದುಕೊಳ್ಳುತ್ತಿದ್ದರು. ಮಕ್ಕಳನ್ನು ಬೆಳೆಸುವುದು ಪೋಷಕರ ಜವಬ್ದಾರಿ. ಮೊದಲು ಪೋಷಕರು ತಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಬೇಕು ಆಗ ಮಾತ್ರ ಮಕ್ಕಳನ್ನು ತಿದ್ದಲು ಸಾಧ್ಯ ಎಂದರು.

ಈ ಕಾರ್ಯಕ್ರಮದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರಾದ ಪದ್ಮಪ್ರಸಾದ್, ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಡಾ.ಶ್ರೀಧರ್ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ ಮಂಜುನಾಥ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಸ್ ಹುಚ್ಚರಾಯಪ್ಪ ಉಪಸ್ಥಿತರಿದ್ದರು.

error: Content is protected !!