ದೇಶದ ಪ್ರಧಾನಿ ನರೇಂದ್ರ ಮೋದಿಯವರ ವಿಷೇಷ ಚಿಂತನೆಯಲ್ಲಿ ಪ್ರಾರಂಭಗೊಂಡ ಪ್ರಧಾನ ಮಂತ್ರಿ ಮುದ್ರಾಯೋಜನೆ ದೇಶದ ಯುವ ಜನತೆ ಉದ್ಯೋಗ ಸೃಷ್ಟಿ ಕರ್ತರಾಗಬೇಕೇ ಹೊರತು ಉದ್ಯೋಗವನ್ನು ಅರಿಸಿ ಅಲೆಯಬಾರದು ಎನ್ನುವ ಧ್ಯೇಯದೊಂದಿಗೆ ಮುದ್ರಾ ಯೋಜನೆ ರೂಪುಗೊಂಡಿದ್ದು ಯುವ ಜನತೆ ಹಾಗು ಅದರಲ್ಲೂ ಗ್ರಾಮೀಣ ಭಾಗದಲ್ಲಿ ಇದರ ಫಲವಂತಿಕೆಯನ್ನು ಪಡೆದುಕೊಂಡವರು ಹೆಚ್ಚು. ಸಣ್ಣ ಸಣ್ಣ ಉದ್ಯಮದಿಂದ ದೊಡ್ಡ ಉದ್ಯಮದವರೆಗೂ ಕೂಡ ಫಲಾನುಭವಿಗಳು ಅಡಮಾನವಿಲ್ಲದೇ ಸಾಲ ಸೌಲಭ್ಯ ದೊರಕುತ್ತಿದ್ದು ಈ ಯೋಜನೆಯಿಂದ ಸಾಕಷ್ಟು ಜನರು ಬದುಕು ಕಟ್ಟಿಕೊಂಡಿದ್ದಾರೆ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಭಿಮನೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರನಗದ್ದೆ ಒಂದು ಪುಟ್ಟ ಗ್ರಾಮ ಈ ಗ್ರಾಮದಲ್ಲಿ ಲಾವಣ್ಯ ಎಂಬ ಮಹಿಳೆ ತಲ ತಲಾಂತರದಿಂದ ನಡೆಸಿಕೊಂಡು ಬರುತ್ತಿದ್ದ ಉದ್ಯಮಕ್ಕೆ ಆಧುನಿಕತೆಯ ಲೇಪನ ನೀಡಿ ಉದ್ಯಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದಾರೆ. ಇವರು ಅಚ್ಚುಗಳಿಂದ ತಯಾರಿಸುವ ದೇವರ ವಿಗ್ರಹಗಳು ಕಲಾಕೃತಿಗಳು ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲೆಡೆ ಬಹು ಬೇಡಿಕೆಯಿಂದ ಕೂಡಿದೆ.
ತಮ್ಮ ಮಾವ, ಪತಿ ನಡೆಸಿಕೊಂಡು ಬರುತ್ತಿದ್ದ ಉದ್ಯಮ ಕಳೆದ ಮೂರು ವರುಷದ ಹಿಂದೆ ತನ್ನ ಪತಿಯ ಆಕಸ್ಮಿಕ ಮರಣ ನಂತರ ಈ ಉದ್ಯಮವನ್ನು ಮುನ್ನೆಡೆಸುವುದು ಹೇಗೆ ಎನ್ನುವ ಸವಾಲನ್ನು ಎದುರಿಸುವ ಆತಂಕದಲ್ಲಿದ್ದ ಲಾವಣ್ಯ ಉದ್ಯಮವನ್ನು ತನ್ನ ಕುಟುಂಬ ಹಾಗು ಹಿರಿಯವ ಮಾರ್ಗದರ್ಶನ. ಪಡೆದು ಉದ್ಯಮಕ್ಕೆ ಇನ್ನೂ ಹೆಚ್ಚಿನ ಜೀವ ತುಂಬವ ಉದ್ದೇಶದಿಂದ ಕೇಂದ್ರ ಸರಕಾರದ ಮುದ್ರಾ ಯೋಜನೆಯ ವಿವರ ಪಡೆದ ಲಾವಣ್ಯ ಹತ್ತಿರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಭೀಮನೇರಿ ಶಾಖೆಯಲ್ಲಿ ಹತ್ತು ಲಕ್ಷ ಹಣಕಾಸಿನ ನೆರವನ್ನು ಪಡೆದುಕೊಂಡು ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕೌಶಲ್ಯವಿದ್ದರೂ ಬಂಡವಾಳ ಇರುವುದಿಲ್ಲ ಬಂಡವಾಳ ಕೌಶಲ್ಯ ಎರಡೂ ಜೊತೆಗೂಡಿದರೆ ಬದುಕಿನ ಸಾರ್ಥಕತೆ ಹೇಗೆ ಹಸನಾಗುತ್ತದೆ ಎನ್ನುವುದಕ್ಕೆ ಲಾವಣ್ಯ ಅವರೇ ದೊಡ್ಡ ಉದಾಹರಣೆ. ಕುಟುಂಬದ ಮಾರ್ಗದರ್ಶನ ಮುದ್ರಾಯೋಜನೆಯ ಸಹಕಾರದಿಂದ ವ್ಯವಸ್ಥಿತವಾಗಿ ಉದ್ಯಮವನ್ನು ಕಟ್ಟಿದ್ದಾರೆ. ಇವರು ನಡೆಸುತ್ತಿರುವ ಉದ್ಯಮದಲ್ಲಿ ಸಾಕಷ್ಟು ಸ್ಥಳೀಯರಿಗೆ ಉದ್ಯೋಗವಕಾಶವನ್ನು ಕಲ್ಪಿಸಿದ್ದು ಸುಮಾರು 15ರಿಂದ 20 ಜನ ಇಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ತಾವು ಕೂಡ ಬದುಕು ಕಟ್ಟಿಕೊಂಡು ಸ್ಥಳೀಯರಿಗೂ ಕೂಡ ಕೆಲಸವನ್ನು ಕೊಟ್ಟು ಉದ್ಯಮಿಯಾಗಿ ಯಶಸ್ವಿಯಾಗಿದ್ದಾರೆ.
ಉದ್ಯಮಿ ಲಾವಣ್ಯ: ಕಳೆದ 20 ವರುಷಗಳಿಂದ ನನ್ನ ಕುಟುಂದ ಹಿರಿಯರು ಹಾಗು ನನ್ನ ಪತಿ ನಡೆಸಿಕೊಂಡು ಬರುತ್ತಿದ್ದ ಈ ಉದ್ಯಮ ಅವರ ಅಕಾಲಿಕ ಮರಣದಿಂದ ನನಗೆ ಈ ಉದ್ಯಮವನ್ನು ನಡೆಸುವುದು ಕಷ್ಟ ಸಾಧ್ಯವಾಯಿತು ಆಗ ಕುಟುಂಬದ ಹಿರಿಯರ ಮಾರ್ಗದರ್ಶನ ಹಾಗು ಮುದ್ರಾ ಯೋಜನೆಯ ಆರ್ಥಿಕ ಸಹಕಾರ ಇವೆರಡೂ ಕೂಡ ನಾನು ಯಶಸ್ವಿ ಉದ್ಯಮಿಯಾಗಿ ಬೆಳೆಯಲು ಸಾಧ್ಯವಾಯಿತು.ಇವರೆಲ್ಲರ ಮಾರ್ಗದರ್ಶನ ಸಹಕಾರಕ್ಕೆ ಅಭಾರಿಯಾಗಿದ್ದೇನೆ.
ಮುಸ್ತಾಕಿ ಮನ್ಸಾರಿ, ವ್ಯವಸ್ಥಾಪಕರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ನಮ್ಮಲ್ಲಿ ಲಾವಣ್ಯ ಅವರು ಕೆಂದ್ರ ಸರಕಾರದ ಮುದ್ರಾ ಯೋಜನೆಯಲ್ಲಿ 10 ಲಕ್ಷ ರೂಗಳ ಸಾಲವನ್ನು ಪಡೆದು ಅತ್ಯಂತ ವ್ಯವಸ್ತಿತವಾಗಿ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ.ಕೇಂದ್ರ ಸರಕಾರದ ಈ ಯೋಜನೆಯನ್ನುನಮ್ಮ ಬ್ಯಾಂಕ್ ಮೂಲಕ ಬಳಸಿಕೊಂಡು ಉದ್ಯಮವನ್ನು ನಡೆಸುತ್ತಿದ್ದಾರೆ.
ಹೆಚ್ ಆರ್ ಸಚಿನ್ ಸಹಾಯಕ ವ್ಯವಸ್ಥಾಪಕರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ನಮ್ಮ ಗ್ರಾಮೀಣ ಶಾಖೆಯಲ್ಲಿ ಲಾವಣ್ಯವರು ಮುದ್ರಾ ಯೋಜನೆಯ ಸಾಲವನ್ನು ಪಡೆದುಕೊಂಡು ಉದ್ಯಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇವರ ಈ ಉದ್ಯಮ ಇತರರಿಗೆ ಮಾದರಿಯಾಗಿದೆ. ನಮ್ಮ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಉದ್ಯಮಗಳನ್ನು ನಡೆಸಲು ಗ್ರಾಮೀಣ ಜನತೆಗೆ ಸಹಕಾರ ನೀಡುತ್ತಾ ಬಂದಿದ್ದೇವೆ.
ಉದ್ಯಮದಲ್ಲಿ ವೃತ್ತಿ ನಿರತರಾಗಿರುವ ಪ್ರವಿಣ್ : ನಾನು ಕೆಲಸ ಮಾಡುತ್ತಿರುವ ಈ ಉದ್ಯಮ ತುಂಬಾ ಉತ್ತಮವಾಗಿ ನಡೆಯುತ್ತಿದೆ ನಾನು ಪದವಿದರನಾಗಿದ್ದು ಉದ್ಯೋಗಕ್ಕಾಗಿ ಅರಸಿ ಪಟ್ಟಣವನ್ನು ಸೇರಬೇಕಾಗಿತ್ತು ಸ್ಥಳೀಯವಾಗೇ ಉದ್ಯೋಗ ನನಗೆ ಮಾಡುತ್ತಿರುವುದು ನನಗೆ ಖುಷಿ ತಂದಿದೆ ಈ ರೀತಿಯ ಉದ್ಯಮಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾದರೆ ಉದ್ಯೋಗಕ್ಕಾಗಿ ಪಟ್ಟಣ ಸೇರುವ ಯುವ ಜನತೆ ಸ್ಥಳೀಯವಾಗಿ ಉದ್ಯೋಗವನ್ನು ಮಾಡಲು ಅನುಕೂಲವಾಗುತ್ತದೆ.
ರಶ್ಮಿ ಸಾಗರ: ಲಾವಣ್ಯ ಅವರು ಅಚ್ಚುಗಳ ಮೂಲಕ ಕಲಾಕೃತಿಗಳನ್ನು ನಿರ್ಮಿಸುವ ಉದ್ಯಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸುತ್ತಿದ್ದಾರೆ ಯುವ ಜನರಲ್ಲಿ ಉದ್ಯಮ ಮಾಡುವ ಹುಮ್ಮಸಿದ್ದರೂ ಬಂಡವಾಳ ಇರುವುದಿಲ್ಲ ಕೇಂದ್ರ ಸರಕಾರದ ಮುದ್ರಾಯೋಜನೆ ಅಪರೂಪದ ಅವಕಾಶವನ್ನು ದೊರಕಿಸಿಕೊಟ್ಟಿದೆ ನಮ್ಮ ಪ್ರದೇಶದ ಲಾವಣ್ಯ ಅವರು ಉದ್ಯಮದಲ್ಲಿ ಫಲವಂತಿಕೆಯನ್ನು ಕಂಡುಕೊಂಡಿದ್ದಾರೆ.