
ಸ್ಮಾರ್ಟ್ ಸಿಟಿ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಅನುಷ್ಠಾನ ಮಾಡಿರುವ ವಿವಿಧ ಯೋಜನೆಗಳ ಲೋಕಾರ್ಪಣೆಯು ಜನವರಿ 29ರಂದು ಆಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸುವರು.
ಜನವರಿ 29ರ ಬೆಳಗ್ಗೆ 11.30ಕ್ಕೆ ಎಲ್.ಎಲ್.ಆರ್ ರಸ್ತೆಯ ಗೌರವ ಲಾಡ್ಜ್ ಎದುರಿನಲ್ಲಿರುವ “ಹೂವು ಮತ್ತು ಹಣ್ಣು ವಾಣಿಜ್ಯ ಮಳಿಗೆಗಳ ಸಂಕೀರ್ಣ” ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಶಿವಪ್ಪನಾಯಕ ವೃತ್ತದಲ್ಲಿರುವ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಉದ್ಘಾಟನೆ ಆಗಲಿದೆ.
ಜನವರಿ 29ರ ಮಧ್ಯಾಹ್ನ 12.30ಕ್ಕೆ ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಬೈಸಿಕಲ್ ಯೋಜನೆ (Public Bicycle Sharing) ಯನ್ನು ತುಂಗಾ ರಿವರ್ ಫ್ರೆಂಟ್ ಗೇಟ್ ನಂ. 09 ಬಿ.ಬಿ. ರಸ್ತೆಯಲ್ಲಿರುವ ಬಿಸಿಎಂ ಹಾಸ್ಟೆಲ್ ಪಕ್ಕದಲ್ಲಿ ಉದ್ಘಾಟನೆ ನಡೆಯಲಿದೆ. ಜನವರಿ 29ರ ಮಧ್ಯಾಹ್ನ 1ಕ್ಕೆ ತುಂಗಾ ರಿವರ್ ಫ್ರೆಂಟ್ ಪ್ರಾಜೆಕ್ಟ್ ಯೋಜನೆ ಲೋಕಾರ್ಪಣೆ ಆಗಲಿದ್ದು, ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಶಿವಮೊಗ್ಗ ಜಿಲ್ಲಾಧಿಕಾರಿ, ಜಿಪಂ ಸಿಇಒ
ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.