ದೇಶಿ ಆಹಾರ ಪದಾರ್ಥಗಳಿಗೆ ಬೇಕಿದೆ ಅಂತರಾಷ್ಟ್ರೀಯ ಮನ್ನಣೆ: ಪ್ರೊ. ದಯಾನಂದ ಅಗಸರ

ಶಂಕರಘಟ್ಟ, ಮಾ. 15: ಭಾರತೀಯ ಆಹಾರಪದ್ಧತಿ ವೈವಿಧ್ಯತೆಯಿಂದ ಮತ್ತು ಉತ್ಕೃಷ್ಟ ಗುಣಮಟ್ಟದಿಂದ ಕೂಡಿದ್ದು, ಆರೋಗ್ಯವನ್ನು ಸಮತೋಲನದಲ್ಲಿಡುತ್ತದೆ. ಹೀಗಾಗಿ ದೇಶಿಯ ಮತ್ತು ಪ್ರಾದೇಶಿಕ ಆಹಾರ ಪದಾರ್ಥಗಳನ್ನು ಅಂತರ್ರಾಷ್ಟ್ರೀಯ ಮಟ್ಟಕ್ಕೆ ಉನ್ನತೀಕರಿಸಲು ಆಹಾರ ತಂತ್ರಜ್ಞಾನ ಪರಿಶ್ರಮವಹಿಸಬೇಕೆಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.‌ ದಯಾನಂದ‌ ಅಗಸರ ಸಲಹೆ ನೀಡಿದರು.

ಕುವೆಂಪು ವಿಶ್ವವಿದ್ಯಾಲಯದ ಆಹಾರ ತಂತ್ರಜ್ಞಾನ ವಿಭಾಗ ಜ್ಞಾನಸಹ್ಯಾದ್ರಿಯ ಬಸವ ಸಭಾ ಭವನದಲ್ಲಿ “ಆಹಾರ ತಂತ್ರಜ್ಞಾನ ಮತ್ತು ಪೋಷಣೆಯಲ್ಲಿನ ಪ್ರಗತಿ” ಕುರಿತು‌ ಆಯೋಜಿಸಿರುವ‌ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ‌ ಅವರು ಮಾತನಾಡಿದರು.

ದೇಶೀಯ ಆಹಾರ ಪದಾರ್ಥಗಳು ವೈವಿಧ್ಯತೆಯಿಂದ ಕೂಡಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಮಾರುಕಟ್ಟೆ ಹೊಂದಿದೆ. ಈ ನಿಟ್ಟಿನಲ್ಲಿ ಆಹಾರ ಸಂಸ್ಕರಣೆ ಮತ್ತು ಮಾರುಕಟ್ಟೆ ಪ್ರಕ್ರಿಯೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದರು.

CFTRI ನ ಹಿರಿಯ ವಿಜ್ಞಾನಿ ಅನು ಅಪ್ಪಯ್ಯ ಮಾತನಾಡಿ, ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಸಂಸ್ಥೆಗಳು ಆಹಾರದ ಮೌಲ್ಯ ಮಾಪನವನ್ನು ಅಂತರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮಾಡಿಸುವುದು ಅತ್ಯಂತ ಅವಶ್ಯಕ ಎಂದರು.

ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಡಾ. ಸುಷ್ಮಾ, ಪ್ರೊ. ಶಿವಯೋಗಿಶ್ವರ ನೀಲಗುಂದ, ಡಾ.‌ ಸಚಿನ್, ವಿವಿಧ ವಿಭಾಗಗಳ‌ ಅಧ್ಯಾಪಕರು, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

error: Content is protected !!