ಶಿವಮೊಗ್ಗದ ಕೇಂದ್ರ ಸಂವಹನ ಇಲಾಖೆ ವತಿಯಿಂದ ನಗರದ ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನದ ಕುರಿತು ಆಯೋಜಿಸಲಾದ ವಿಶೇಷ ಛಾಯಾಚಿತ್ರ ಪ್ರದರ್ಶನ ಇಂದು ಸಮಾರೋಪ ಗೊಂಡಿತು. ಪ್ರದರ್ಶನ ಮೂರು ದಿನಗಳ ಕಾಲ ಹಲವು ವಿದ್ಯಾರ್ಥಿಗಳ ಗಮನ ಸೆಳೆಯಿತು.

ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ಭಾರತೀಯ ಸೇನೆಯ ನಿವೃತ್ತ ಯೋಧರಾದ ಶ್ರೀ. ರಾಜಶೇಖರ . ಜೆ ಅವರನ್ನು ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ಅವರು, ದೇಶ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ವಾಗಿದ್ದು ಈ ಅವಕಾಶವನ್ನು ಯಾರೂ ಕಳೆದುಕೊಳ್ಳಬಾರದು. ಪದವಿ ಬಳಿಕ ಸೇನೆಯಲ್ಲಿ ಸೇವೆ ಸಲ್ಲಿಸುವ ಹತ್ತು ಹಲವು ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಭಾರತೀಯ ಸೇನೆಯ ಯೋಧರ ಮನೋಸ್ಥೈರ್ಯ ಹಾಗೂ
ಶೌರ್ಯವನ್ನು ನೆನೆಯುವಲ್ಲಿ ವಿಜಯ ದಿನ ಆಚರಣೆ ಮಹತ್ವ ದ್ದಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಡಾ. ರಜನಿ ಎ ಪೈ, ನಿರ್ದೇಶಕರು, ಮಾನಸ ಟ್ರಸ್ಟ್, ಶಿವಮೊಗ್ಗ, ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಐ ಕ್ಯೂ ಎ ಸಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

error: Content is protected !!