
ಶಿವಮೊಗ್ಗ, ಏ.6 : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸ್ನೇಹಲ್ ಸುಧಾಕರ ಲೋಖಂಡೆ ಅವರು ಇಂದು ಇಂದು ಸಾಗರ ತಾಲೂಕಿನ ಆನಂದಪುರ ಹಾಗೂ ಹೊಸೂರು ಗ್ರಾ, ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಮತದಾನದ ಮಹತ್ವವನ್ನು ತಿಳಿಸಿ, ಮೇ7 ರಂದು ಕಡ್ಡಾಯವಾಗಿ ಮತದಾನ ಮಾಡಲು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಇದೇ ವೇಳೆ ಮತದಾರರಿಗೆ ವೋಟರ್ ಗೈಡನ್ನು ವಿತರಣೆ ಮಾಡಿದರು.