ಶಿವಮೊಗ್ಗ, ನವೆಂಬರ್ 16, :ರಾಜ್ಯಾದ್ಯಂತ ಹಾಗೂ ಹೊರ ರಾಜ್ಯಗಳಲ್ಲಿ ಕ್ರಿಯಾತ್ಮಕ ಸಾಂಸ್ಕøತಿಕ ಚಟುವಟಿಕೆಗಳ ಮೂಲಕ ನಾಡಿನ ಭಾಷಾ ಸಂವರ್ಧನೆ, ಕಲೆ, ಸಾಹಿತ್ಯ, ಸಂಗೀತ, ಜಾನಪದ, ನೃತ್ಯ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕಾರ್ಯ ನಿರ್ವಹಿಸುತ್ತಿರುವ ನೊಂದಾಯಿತ ಸಂಘ-ಸಂಸ್ಥೆಗಳನ್ನು ಪ್ರೋತ್ಸಾಹಿಸಲು 2023-24 ನೇ ಸಾಲಿನ ಸಾಮಾನ್ಯ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಧನಸಹಾಯ ನೀಡಲು ಸೇವಾಸಿಂಧು ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಸಂಘ ಸಂಸ್ಥೆಗಳು ಅರ್ಜಿಯನ್ನು Sevasindhu.karnataka.gov.in ಮುಖಾಂತರ ದಿ: 14-11-2023 ರಿಂದ 13-12-2023 ರವರೆಗೆ ಸಲ್ಲಿಸಬಹುದು. ಸರ್ಕಾರದ ಆದೇಶ ಸಂಖ್ಯೆ ಕಸಂವಾ 154: ಕಸಧ 2022 ದಿ: 23-06-2023 ಹಾಗೂ ತಿದ್ದುಪಡಿ ಆದೇಶ ದಿನಾಂಕ: 02-01-2023 ರಲ್ಲಿನ ಮಾರ್ಗಸೂಚಿಯನ್ನು ಸೇವಾಸಿಂಧು ಪೋರ್ಟಲ್ ಹಾಗೂ ಇಲಾಖೆಯ ವೆಬ್‍ಸೈಟ್ www.kannadasiri_karnataka.gov.in ನಲ್ಲಿ ಅಳವಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 08022279954/9986837037/8792662814/8792662816/08022213530 ನ್ನು ಹಾಗೂ ಆಯಾ ಜಿಲ್ಲೆಯ ವ್ಯವಸ್ಥಾಪಕರು, ಸೇವಾ ಸಿಂಧು ಇವರನ್ನು ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!