ಶಿವಮೊಗ್ಗ, ಮಾರ್ಚ್ 28: ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ಮಾ.31 ರ ಭಾನುವಾರದಂದು 2023-24 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ನಗರದ “ರವೀಂದ್ರನಗರ ಗಣಪತಿ ದೇವಸ್ಥಾನದ ಹತ್ತಿರ, ಭಾರತೀಯ ಸಭಾ ಭವನದ ಎದುರು ಆರ್.ಎಂ.ಎಲ್.ನಗರ, ವಿನೋಬನಗರ ಪೊಲೀಸ್ ಠಾಣೆ ಎದುರು ಪೊಲೀಸ್ ಚೌಕಿ, ಅಭಿಷ್ಠವರ ಗಣಪತಿ ದೇವಸ್ಥಾನದ ಹತ್ತಿರ ವಿನೋಬನಗರ, ಗುಡ್‍ಲಕ್ ಸರ್ಕಲ್ ಹತ್ತಿರ ಸ್ವಾಮಿವಿವೇಕಾನಂದ ಬಡಾವಣೆ, ಗೋಪಾಳ ಕೊನೆ ಬಸ್ ನಿಲ್ದಾಣದ ಹತ್ತಿರ, ಗುಂಡಪ್ಪ ಶೆಡ್ ಪಾರ್ಕ್ ಹತ್ತಿರ, ದೇವರಾಜ್ ಅರಸ್ ಬಡಾವಣೆ ಪೆಟ್ರೋಲ್ ಬಂಕ್ ಹತ್ತಿರ, ಸೀಗೆಹಟ್ಟಿ ಸ.ಹಿ.ಪ್ರಾ.ಶಾಲೆ ಆವರಣ” ಈ ಎಲ್ಲಾ ಕಡೆಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್‍ಗಳನ್ನು ತೆರೆಯಲಾಗಿದೆ.
ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!