ಮನುಷ್ಯ ಜನ್ಮ ಎನ್ನುವುದು ಬಹಳ ದೊಡ್ಡದು ಮತ್ತು ಅಪರೂಪದ್ದು ಎನ್ನುವ ನಂಬಿಕೆ ತಲ ತಲಾಂತರದಿಂದಲೂ ನಮ್ಮಲ್ಲಿ ನಡೆದುಕೊಂಡು ಬಂದಿದೆ. ಸೇವೆಯ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಆಶಯ ಸಿದ್ಧಾಂತದ ಅಡಿಯಲ್ಲಿ ಅನೇಕ ಸಾಮಾಜಿಕ ಕಾರ್ಯಕರ್ತರು ಸಂಘಟನೆಗಳನ್ನು ಕಟ್ಟಿಕೊಂಡು ಮುನ್ನಡೆಯುತ್ತಾ ಬಂದಿದ್ದಾರೆ

ಅಂತಹ ಅಪರೂಪದ ಸಂಘಟನೆಯಲ್ಲಿ ಶಿವಮೊಗ್ಗ ಜಿಲ್ಲೆಯ ಗಾಜುನೂರು ಸಮೀಪ ಅಗ್ರಹಾರದಲ್ಲಿ ಮೈತಳೆದು ನಿಂತಿದೆ ಶರಣ್ಯ ಎನ್ನುವ ಸಂಸ್ಥೆ. ಕಳೆದ 23 ವರ್ಷಗಳಿಂದ ಯಾವುದೇ ಪ್ರಚಾರದ ಗೀಳಿಗೆ ಶ್ರೇಷ್ಠತೆಯ ವ್ಯಸನಕ್ಕೆ ಒಳಗಾಗದೆ ಈ ಸಂಸ್ಥೆ ಕೆಲಸ ಮಾಡುತ್ತಾ ಬಂದಿದೆ. ಅಗ್ರಹಾರದಲ್ಲಿರುವ ಗ್ರಾಮೀಣ ನೋವು ಉಪಶಮನ, ಆರೈಕೆ ಮತ್ತು ಸಂಶೋಧನಾ ಕೇಂದ್ರ ಡಿಎಸ್ಎಲ್ ಎನ್ನುವ ಟ್ರಸ್ಟ್ ಮೂಲಕ ಮುನ್ನಡೆಯುತ್ತಿದೆ

ಮನುಷ್ಯ ಜನ್ಮತ್ತಾಳಿದ ಮೇಲೆ ಬಾಲ್ಯಾವಸ್ಥೆ ಪ್ರೌಢಾವಸ್ಥೆ ಯೌವನಗಳನ್ನು ತನ್ನ ಘನತೆಗೆ ತಕ್ಕಂತೆ ಬದುಕು ನಡೆಸಿಬಿಡುತ್ತಾನೆ ಆದರೆ ಜೀವನ ಸಂಜೆ ಮತ್ತು ವೃದ್ಧಾಪ್ಯ ಬರಬರುತ್ತಾ ದೊಡ್ಡ ಸವಾಲಾಗುತ್ತಿದೆ ಅಂಥವರ ಬದುಕಿನ ಆಶಾಕಿರಣವಾಗಿ ‘ಶರಣ್ಯ’ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ

ಮನುಷ್ಯ ವೃದ್ಧಾಪ್ಯವನ್ನು ತಲುಪಿ ಆಕಸ್ಮಿಕವಾಗಿ ನಾನಾ ಕಾಯಿಲೆಗಳಿಗೆ ಒಳಪಟ್ಟು ಅನಿವಾರ್ಯವಾಗಿ ನಾನಾ ರೀತಿಯ ವೈದ್ಯಕೀಯ ಚಿಕಿತ್ಸೆಗೆ ಒಳಪಟ್ಟರೂ ಕೂಡ ರೋಗ ಉಲ್ಬಣಿಸಿದಾಗ ಅಂತವರನ್ನು ಆಸ್ಪತ್ರೆಯಿಂದ ಮನೆಗೆ ತರುತ್ತಾರೆ. ವೈದ್ಯರು ಆ ರೋಗಿ ಬಹಳ ದಿನಗಳ ಕಾಲ ಜೀವನ ನಡೆಸಲು ಸಾಧ್ಯವಿಲ್ಲ ಎಂದಾಗ ಅಂತಹ ರೋಗಿಗಳನ್ನು ಶರಣ್ಯ ಸಂಸ್ಥೆಯವರು ತಮ್ಮ ಆಶ್ರಮಕ್ಕೆ ಕರೆತಂದು ಸೇವೆ ನೀಡುತ್ತಾರೆ

ಇದು ಉಲ್ಬಣ ಸ್ಥಿತಿಯಲ್ಲಿರುವ ಕ್ಯಾನ್ಸರ್, ಬೆನ್ನು ಮೂಳೆ ಮುರಿತ ನರರೋಗಗಳು, ಪಾರ್ಶುವಾಯು ಮುಂತಾದ ಯಾವುದೇ ತರಹದ ಗಂಭೀರ ಕಾಯಿಲೆಯಿಂದ ನೆರಳುತ್ತಿರುವ ಅಸಹಾಯಕ ರೋಗಿಗಳಿಗೆ ಈ ಸಂಸ್ಥೆ ಬೆಳಕಾಗಿದೆ

ಊಟ ವಸತಿ ಚಿಕಿತ್ಸೆ ಎಲ್ಲವನ್ನೂ ಉಚಿತವಾಗಿ ನೀಡುತ್ತಾರೆ. ಇವರದ್ದೆ ಆದ ಒಂದು ತಂಡ ಇಲ್ಲಿ ಕೆಲಸ ಮಾಡುತ್ತದೆ ಅಷ್ಟೇ ಏಕೆ ಶರಣ್ಯ ಆರೈಕೆ ಕೇಂದ್ರದಲ್ಲಿ ರೋಗಿಯ ಜೊತೆ ಇರಲು ಕುಟುಂಬದ ಒಬ್ಬ ಸದಸ್ಯರಿಗೆ ಅಥವಾ ಸಹಾಯಕರಿಗೆ ಉಚಿತ ಊಟ ಉಪಚಾರ ಮತ್ತು ಉಳಿಯಲು ವ್ಯವಸ್ಥೆ ನೀಡುತ್ತಾ ಬಂದಿದ್ದಾರೆ

ಯಾರಿಂದಲೂ ಒಂದೇ ಒಂದು ರೂಪಾಯಿನೂ ಸೇವೆಗೆ ಒಳಪಟ್ಟವರಿಂದ ಈ ಸಂಸ್ಥೆ ಅಪೇಕ್ಷಿಸುವುದಿಲ್ಲ ಜನರೇ ತಿಳಿದು ಏನಾದರೂ ಸಹಕಾರ ನೀಡಿದರೆ ಸಂಸ್ಥೆಯ ಈ ಉದ್ದೇಶಕ್ಕೆ ಬಳಸುತ್ತಾರೆ
10 ಎಕರೆಯ ಸುಂದರ ಪ್ರದೇಶದಲ್ಲಿ ಮೈ ತಾಳಿ ನಿಂತಿದೆ ಶರಣ್ಯ ಆರೈಕೆ ಕೇಂದ್ರ.. ಇಲ್ಲಿ ನಕ್ಷತ್ರವನ್ನು ನಿರ್ಮಾಣ ಮಾಡಲಾಗಿದೆ ಅಲ್ಲದೆ ಆಯುರ್ವೇದ ವನ ನವಗ್ರಹವನ ರಾಶಿಯ ವನಗಳು ಸಿದ್ಧವಾಗಿದ್ದು ಜೀವನ ಸಂಜೆಯಲ್ಲಿರುವ ವೃದ್ಧಾಪ್ಯದಲ್ಲಿ ಸಮಸ್ಯೆಗೊಳಗಾಗಿರುವವರಿಗೆ ಈ ಪರಿಸರದಲ್ಲಿ ತಮ್ಮ ಬದುಕಿನ ಅಂತಿಮ ದಿನವನ್ನು ಕಳೆಯಲು ಶರಣ್ಯ ಸಂಸ್ಥೆ ಸಹಕರಿಸುತ್ತಿದೆ

ಕರ್ನಾಟಕದ ಹಾಗೂ ನಮ್ಮ ಗಡಿ ಜಿಲ್ಲೆಗಳಿಂದಲೂ ಅನೇಕ ಜನ ರೋಗಿಗಳು ಶರಣ್ಯ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದಾರೆ ಈ ಸಂಸ್ಥೆಯವರು ಸಂಪೂರ್ಣ ಸೇವಾ ಮನೋಭಾವದಿಂದಲೇ ತೊಡಗಿಕೊಂಡಿದ್ದಾರೆ
ಹಸಿರಿನ ಮಧ್ಯೆ ಕಂಗೊಳಿಸುತ್ತಿರುವ ಶರಣ್ಯ ಎಷ್ಟು ರೋಗಿಗಳಿಗೆ ಬದುಕಿನ ಕೊನೆಯ ದಿನಗಳ ನೆಮ್ಮದಿಯ ಆಶಾ ತಾಣವಾಗಿ ಮೂಡಿಬರುತ್ತಿದೆ

ರತ್ನವ್ವ ಮ್ಯಾಗೇರಿ: ಮಾನಸಿಕವಾಗಿ ರೋಗದಿಂದ ತುಂಬಾ ಕುಗ್ಗಿ ಹೋಗಿದ್ದೆ, ಶರಣ್ಯ ಸಂಸ್ಥೆಯವರು ನನಗೆ ಆತ್ಮಸ್ಥೈರ್ಯ ತುಂಬಿದರು ನನ್ನ ಬದುಕು ಮುನ್ನಡೆಯುವಲ್ಲಿ ಇವರು ಸಹಕರಿಸಿದ್ದಾರೆ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಬಹಳ ಪ್ರೀತಿಯಿಂದ ನನಗೆ ಆರೈಕೆ ಮಾಡುತ್ತಿದ್ದಾರೆ

ಜಗನ್ನಾಥ್ ಮಹೇಂದ್ರಕರ್ : ಶಿವಮೊಗ್ಗ ಬೇರೆ ಎಲ್ಲಿಯೂ ಚಿಕಿತ್ಸೆ ಫಲಕಾರಿ ಆಗದೆ ಇರುವವರು ಇಲ್ಲಿ ಬರುತ್ತಾರೆ ಇದು ಧರ್ಮತೀತವಾದ ಸಂಸ್ಥೆ ಊಟ ವಸತಿಯನ್ನು ಉಚಿತವಾಗಿ ನೀಡುತ್ತಾರೆ ನಾನು ನನ್ನ ಜೀವನ ಸಂಜೆ ಏನು ಕಳೆಯುತ್ತಿದ್ದೇನೆ

ಮಹೇಶ್: ನಮ್ಮ ತಂದೆ ಪಾರ್ಶ್ವಾಯು ಪೀಡಿತರಾಗಿದ್ದರು ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ನಾನು ಹಾವೇರಿ ಜಿಲ್ಲೆಯವನು ನನ್ನ ತಂದೆ ಹಾಗೂ ತಾಯಿಯನ್ನು ಇಲ್ಲಿ ಕರೆದುಕೊಂಡು ಬಂದಿದ್ದೇನೆ ಪ್ರಕೃತಿಯ ನಡುವೆ ಇರುವ ಈ ಶರಣ್ಯ ಸಂಸ್ಥೆ ಇಬ್ಬರಿಗೂ ಕೂಡ ಒಳ್ಳೆಯ ಸೇವೆಯನ್ನು ನೀಡುತ್ತಿದೆ ಇಬ್ಬರಿಗೂ ಧೈರ್ಯ ತುಂಬುವ ಕೆಲಸ ಶರಣ್ಯ ಸಂಸ್ಥೆ ಮಾಡಿದೆ ಇಲ್ಲಿ ಫಿಜಿಯೋಥೆರಪಿ ಮಾಡುವಂತಹ ಅವಕಾಶವೂ ಇದೆ ಈ ವಾತಾವರಣ ತುಂಬಾ ಚೆನ್ನಾಗಿದ್ದು ಸಂಪೂರ್ಣ ಉಚಿತವಾಗಿ ನೀಡುತ್ತಿದ್ದಾರೆ ಈ ಸಂಸ್ಥೆಗೆ ನಾನು ಚಿರಋಣಿಯಾಗಿರುತ್ತೇನೆ

ಡಾ ತಾನಾಜಿ ವೈದ್ಯರು ಶರಣ್ಯ ಸಂಸ್ಥೆ: ಕ್ಯಾನ್ಸರ್, ಪಾರ್ಶುವಾಯ, ಹೆಡ್ ಇನ್ಜುರಿ ಆದಂತಹ ರೋಗಿಗಳಿಗೆ 80 ಹಾಸಿಗೆ ಆಸ್ಪತ್ರೆಯನ್ನು ಆರಂಭ ಮಾಡಬೇಕು ಎಂದುಕೊಂಡಿದ್ದು ಸದ್ಯಕ್ಕೆ 20 ಹಾಸಿಗೆ ಆಸ್ಪತ್ರೆಯನ್ನು ನಾವು ನಡೆಸುತ್ತಿದ್ದೇವೆ ಬೇರೆ ಎಲ್ಲಿಯೂ ಶೂಶ್ರಷೆ ಸಿಗದೇ ಇದ್ದವರಿಗೆ ಇಲ್ಲಿ ನಾವು ಅಂಥವರ ಆರೈಕೆ ಮಾಡಿ ಸಹಕಾರ ನೀಡುತ್ತಿದ್ದೇವೆ ಇಲ್ಲಿ ಸೇವೆಯ ಮೂಲ ಮಂತ್ರ, ಜೀವನ ಸಂಜೆಯ ಕೊನೆಯ ದಿನಗಳಲ್ಲಿ ಗೌರವಿತ ಬದುಕು ನಡೆಸಲು ಸಹಕರಿಸುತ್ತಿದ್ದೇವೆ. ಇಲ್ಲಿ ಸೇವೆಯ ಮೂಲ ಮಂತ್ರ, ಜೀವನ ಸಂಜೆಯ ಕೊನೆಯ ದಿನಗಳಲ್ಲಿ ಗೌರವಯುತ ಬದುಕು ನಡೆಸಲು ಸಹಕರಿಸುತ್ತಿದ್ದೇವೆ ಈ ಸಂಸ್ಥೆಯು ಯಾವುದೇ ರೀತಿಯ ಪ್ರತಿಫಲ ಅಪೇಕ್ಷೆಯನ್ನು ಹೊಂದದೆ ಸೇವೆಯನ್ನು ಮಾಡುತ್ತಾ ಬಂದಿದೆ ಈ ಸಂಸ್ಥೆಯು ಒದಗಿಸಿದ ಸೇವೆಯನ್ನು ಹಲವಾರು ರೋಗಿಗಳು ಉಪಯೋಗಿಸಿಕೊಳ್ಳುತ್ತಿದ್ದಾರೆ

ಬಿ ಎನ್ ಮಂಜುನಾಥ್ ಜಂಟಿ ಕಾರ್ಯದರ್ಶಿ ಶರಣ್ಯ ಆರೈಕೆ ಕೇಂದ್ರ:ಇದೊಂದು ಪುಣ್ಯ ಕ್ಷೇತ್ರವೇ ಆಗಿದೆ ಸೇವೆಯಲ್ಲಿ ಪರಮಾತ್ಮನು ಕಾಣುತ್ತೇವೆ ರಾಶಿ ನಕ್ಷತ್ರ ಮತ್ತು ಆಯುರ್ವೇದ ಗುಣವನ್ನು ನಿರ್ಮಾಣ ಮಾಡಿದ್ದೇವೆ. ಶರಣ್ಯ ಸಂಸ್ಥೆಗೆ ಬರುವ ರೋಗಿಗಳಿಗೆ ಇಲ್ಲಿ ಓಡಾಟ ಮಾಡಿಸುವ ಮೂಲಕ ಅವರಿಗೆ ಜೀವನ್ಮುಖಿ ಸ್ಪೂರ್ತಿ ತುಂಬಿದಂತಾಗುತ್ತದೆ

ಡಿ ಎಲ್ ಮಂಜುನಾಥ್ ಮ್ಯಾನೇಜಿಂಗ್ ಟ್ರಸ್ಟಿ, ಶರಣ್ಯ ಸಂಸ್ಥೆ : ಇದನ್ನು ಭಗವಂತನ ಸೇವೆ ಎಂದುಕೊಂಡು ಮಾಡುತ್ತಿದ್ದೇವೆ ಕ್ಯಾನ್ಸರ್ ರೋಗಿಗಳಿಗೆ ಜೀವನ ಸ್ಪೂರ್ತಿ ನೀಡುವ ಕೆಲಸ ಮಾಡುತ್ತಿದ್ದೇವೆ 10 ಎಕರೆ ಜಾಗದಲ್ಲಿ ಈ ಸಂಸ್ಥೆ ತನ್ನ ಕಟ್ಟಡವನ್ನು ಹೊಂದಿದ್ದು ಸುಂದರ ಪರಿಸರದಲ್ಲಿ ನಮ್ಮ ಕಾಯಕ ಮುನ್ನಡೆಯುತ್ತಿದೆ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ ಈ ರೀತಿಯ ಸೇವೆಯನ್ನು ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟ ಆ ಭಗವಂತನಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ

error: Content is protected !!