ಬತ್ತಿದ ನದಿಗೆ, ತನ್ನ ತೋಟದ ಕೊಳವೆ ಬಾವಿಯ ನೀರನ್ನೇ ಹರಿಸಿ ವನ್ಯ ಜೀವಿಗಳು ಹಾಗೂ ಪ್ರಾಣಿ ಪಕ್ಷಿಗಳಿಗೆ ಬಾಯಾರಿಕೆ ನಿವಾರಿಸಿದ ರೈತ

ಈ ಬಾರಿ ಮಳೆಯ ಕೊರತೆಯಿಂದ ನದೀ ಕೆರೆ ಕಟ್ಟೆಗಳು ಬರಡಾಗುತ್ತಿವೆ ಈಗಾಗಲೇ ಸರ್ಕಾರ ಶಿವಮೊಗ್ಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಗಿದೆ ಇಂತಹ ಸಂದರ್ಭದಲ್ಲಿ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಸೂಡೂರು ಗ್ರಾಮದ ರೈತನೊಬ್ಬ ಈ ಬಾರಿಯ ಬರಗಾಲದಿಂದ ಕುಮದ್ವತಿ ನದಿಯ ಬತ್ತಿದೆ. ನದಿಗೆ, ತನ್ನ ಕೊಳವೆ ಬಾವಿಯ ನೀರನ್ನೇ ಹರಿಸಿ ಪಶುಗಳಿಗೆ ನೀರು ಪಶು ಪ್ರಾಣಿ ಪಕ್ಷಿಗಳಿಗೆ ನೀರು ದೊರಕುವಂತೆ ಮಾಡಿ ಇಲ್ಲಿನ ಗ್ರಾಮಸ್ಥರ ಮನೆಗೆದಿದ್ದಾರೆ
ಸೂಡೂರು ಸಮೀಪ ವಾಸವಾಗಿರುವ ರೈತ ಮಂಜುನಾಥ್ ಭಟ್ ಕುಮದ್ವತಿ ನದಿ ನೀರು ಬತ್ತಿದ್ದನ್ನು ಮನಗಂಡು ತನ್ನ ಜಮೀನಿನಲ್ಲಿರುವ ಕೊಳವೆ ಬಾವಿಯಿಂದ ನದಿ ದಂಡೆಯವರಿಗೆ ಪೈಪ್ಲೈನ್ ಅಳವಡಿಸಿ ನಿತ್ಯವೂ ನದಿಗೆ ನೀರು ಹರಿಸುತ್ತಿದ್ದಾರೆ ವಿದ್ಯುತ್ ಸಂಪರ್ಕದ ಸಮಸ್ಯೆ ಆದಾಗ ಡೀಸೆಲ್ ಇಂಜಿನ್ ಮೋಟರ್ ಮೂಲಕ ನೀರು ಹರಿಸುತ್ತಿದ್ದು ಕಳೆದ 30 ವರ್ಷಗಳಿಂದ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಈ ಕಾಯಕದಲ್ಲಿ ಮಂಜುನಾಥ ಭಟ್ ತೊಡಗಿಕೊಂಡಿದ್ದಾರೆ
ಪ್ರತಿನಿತ್ಯವೂ ಇಲ್ಲಿ ಕಾಡುಪ್ರಾಣಿಗಳು ಪಶು ಪಕ್ಷಿಗಳು ಇಲ್ಲಿಗೆ ನೀರು ಕುಡಿಯಲು ಬರುತ್ತವೆ ವನ್ಯಜೀವಿಗಳಿಗಾಗಿಯೇ ಈ ನೀರು ಮೀಸಲಾಗಿಟ್ಟಿದ್ದು ಪ್ರಾಣಿಗಳಿಗೆ ಬಿಸಿಲಿನ ಜಳದ ಈ ಸಂದರ್ಭದಲ್ಲಿ ಈ ನೀರು ವರದಾನವಾಗಿದೆ
ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಮಾವಿನ ಮಿಡಿ ತುಂಬಾ ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಹೊಳೆ ಸಾಲಿನಲ್ಲಿರುವ ಮಾವಿನ ಮಿಡಿ ಮರಗಳು ತನ್ನ ನದಿಯ ಅಕ್ಕಪಕ್ಕದಲ್ಲಿ ಬೇರುಗಳನ್ನು ಆಳಕ್ಕೆ ಇಳಿಸಿದ್ದು ಮಂಜುನಾಥ್ ಭಟ್ ಅವರು ಕೊಳವೆಬಾವಿಯಿಂದ ಹರಿಸುತ್ತಿರುವ ನೀರನ್ನು ಕೂಡ ಸೆಳೆದುಕೊಳ್ಳುತ್ತಿವೆ ಹಾಗಾಗಿ ಸುಮಾರು 300 ವರ್ಷಕ್ಕೂ ಹಳೆಯದಾದ ಮಿಡಿ ಮಾವಿನ ಮರಗಳಿಗೆ ಇವರು ಹರಿಸುತ್ತಿರುವ ನೀರು ಅತ್ಯಂತ ಉಪಕಾರವಾಗಿದ್ದು ಮಲೆನಾಡಿನ ಅರಸಾಳು ಹೊಳೆ ಸಾಲಿನ ಮಾವಿನ ಮಿಡಿ ಇಂದಿಗೂ ತನ್ನ ಜೀವ ಕಳೆಯನ್ನು ಉಳಿಸಿಕೊಂಡಿದೆ
ಇಂಥ ಕಡು ಬೇಸಿಗೆಯಲ್ಲಿಯೂ ಮಿಡಿಮಾವು ಉಳಿದಿರುವುದು ಇವರ ಅಂತರ್ಜಲ ಉಳಿಸುವಿಕೆಯ ಪ್ರಯತ್ನದಿಂದ.
ಯಾವುದೇ ರೀತಿಯ ಪ್ರತಿಫಲಕ್ಷೆ ಇಲ್ಲದೆ ಬರಗಾಲದಲ್ಲಿ ಭಗೀರಥನಂತೆ ಇವರು ಪರಿಸರದ ಕಾಳಜಿ ಪ್ರಾಣಿ ಪಕ್ಷಿಗಳ ಕಾಳಜಿಯನ್ನು ಇಟ್ಟುಕೊಂಡು ಮಾಡುತ್ತಿರುವ ಕಾರ್ಯಕ್ಕೆ ಎಲ್ಲರ ಗಮನ ಸೆಳೆದಿದೆ
ಮಂಜುನಾಥ ಭಟ್ ಸೂಡೂರು ನಮ್ಮ ಮಾಧ್ಯಮದೊಂದಿಗೆ ಮಾತನಾಡಿ ಬಿಸಿಲಿನ ದಗೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಾವು ಪರಿಸರ ಪ್ರಾಣಿ ಪಶು ಪಕ್ಷಿಗಳ ಬಗ್ಗೆಯೂ ಚಿಂತಿಸಬೇಕು ನನ್ನ ಜಮೀನಿಗಾಗಿ ಇರುವ ಕೊಳವೆ ಬಾವಿಯಿಂದ ಕುಮದ್ವತಿ ನದಿಗೆ ನೀರು ಹಾಯಿಸುತಿದ್ದೇನೆ ಇದರಿಂದ ಪರಿಸರಕ್ಕೂ ಪ್ರಾಣಿ ಪಕ್ಷಿಗಳಿಗೂ ಅನುಕೂಲವಾಗಿದೆ ನಮ್ಮ ಹೊಳೆ ಸಾಲಿನಲ್ಲಿರುವ ಅಪರೂಪದ ಮಿಡಿಮಾವಿನ ಮರಗಳಿಗೆ ಇಲ್ಲಿರುವ ನೀರು ಜೀವ ತುಂಬಿದಂತಾಗಿದೆ ನಾವೆಲ್ಲರೂ ಇಂತಹ ಪ್ರಯತ್ನಗಳಿಗೆ ಕೈ ಹಾಕಿದರೆ ಪರಿಸರವನ್ನು ಪ್ರಾಣಿ ಪಶುಪಕ್ಷಿ ಸಂಕುಲವನ್ನು ಉಳಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರಸಾಳು ಗ್ರಾಮ ಪಂಚಾಯಿತಿ ರವಿ ಮಾತನಾಡಿ ಶಿವಮೊಗ್ಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಗಳಿವೆ. ಸರ್ಕಾರ ಕೂಡ ಅದನ್ನು ಗಂಭೀರವಾಗಿ ತೆಗೆದುಕೊಂಡು ಪರಿಹರಿಸುವ ಪ್ರಯತ್ನ ಮಾಡುತ್ತಿದೆ ಆದರೆ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಜುನಾಥ ಭಟ್ ಎನ್ನುವ ಗ್ರಾಮಸ್ಥರು ತಮ್ಮ ಕೊಳವೆ ಬಾವಿಯ ನೀರನ್ನು ಕುಮದ್ವತಿ ನದಿಗೆ ಹಾಯಿಸಿ ಪ್ರಾಣಿ ಪಕ್ಷಿಗಳಿಗೆ ನೀಡುತ್ತಿರುವ ಸಹಕಾರ ಮಾದರಿಯಾಗಿದೆ ಎಂದರು
ಸ್ಥಳೀಯರಾದ ರವಿ ಮಾತನಾಡಿ ನಮ್ಮ ಊರಿನವರಾದ ಮಂಜುನಾಥ ಭಟ್ ಪರೋಪಕಾರದ ಮೂಲಕವೇ ಗಮನ ಸೆಳೆದಿದ್ದಾರೆ ತಮ್ಮ ಎರಡು ಕೊಳವೆಬಾವಿಗಳನ್ನು ಕುಮದ್ವತಿ ನದಿಗೆ ನೀರು ಉಣಿಸಲು ಬಳಸುತ್ತಿದ್ದು ಇದರಿಂದ ವನ್ಯಜೀವಿಗಳು , ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗಿದೆ ಶೆಟ್ಟೆಹಳ್ಳಿ ಅಭಯಾರಣ್ಯದ ಪ್ರಾಣಿ ಪಕ್ಷಿಗಳು ನೀರಿಗಾಗಿ ಇಲ್ಲಿ ಬರುತ್ತಿದ್ದು ಅವುಗಳಿಗೆ ಇವರ ಪ್ರಯತ್ನ ವರದಾನವಾಗಿದೆ ಎಂದು ತಿಳಿಸಿದರು
ಅರಸಾಳುವಿನ ವಲಯ ಅರಣ್ಯಾಧಿಕಾರಿ , ರಾಜೇಂದ್ರ ಪ್ರಸಾದ್ ಮಾತನಾಡಿ ಮಂಜುನಾಥ್ ಭಟ್ ಅವರು ಬೇಸಿಗೆಯ ಈ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳಿಗೆ ವನ್ಯಜೀವಿಗಳಿಗೆ ಕುಡಿಯುವ ನೀರನ್ನು ಕುಮದ್ವತಿ ನದಿಯ ಪಾತ್ರಕ್ಕೆ ಬಿಟ್ಟು ಸಹಕರಿಸುತ್ತಿದ್ದಾರೆ ಅರಣ್ಯ ಇಲಾಖೆಯ ಕೆಲಸದ ಜೊತೆಯಲ್ಲಿ ಅವರು ಕೈಜೋಡಿಸಿದ್ದಾರೆ ನದಿಗೆ ನೀರು ಬಿಡುವ ಇವರ ಪ್ರಯತ್ನ ಮಾದರಿಯಾಗಿದೆ ಇಲಾಖೆಯ ಕೆಲಸಕ್ಕೆ ಇವರ ಕಾಯಕವೂ ಪೂರಕವಾಗಿದ್ದು ಎಲ್ಲರ ಗಮನ ಸೆಳೆದಿದೆ ಎಂದರು

ಪ್ರತಿದಿನ ಮಂಜುನಾಥ ಭಟ್ ಬೆಳಿಗ್ಗೆ ನಾಲ್ಕು ಗಂಟೆಯಿಂದ 11 ಗಂಟೆಯವರೆಗೆ ತಮ್ಮ ಎರಡು ಕೊಳವೆ ಬಾವಿಗಳಿಂದ ಕುಮದ್ವತಿ ನದಿಗೆ ನೀರು ಉಳಿಸುತ್ತಿರುವುದು ವಿಶೇಷವಾಗಿದ್ದು ಕಳೆದ 30 ವರ್ಷಗಳಿಂದ ಬೇಸಿಗೆ ಸಂದರ್ಭದಲ್ಲಿ ಇವರು ನೀಡುತ್ತಿರುವ ಸಹಕಾರ ಪ್ರಾಣಿಗಳಿಗೆ ಮಿಡಿಮಾವಿನ ಮರಗಳಿಗೆ ಜೀವ ಕಳೆ ತುಂಬಿದೆ.