ಶಿವಮೊಗ್ಗ, ಡಿಸೆಂಬರ್ 26,: ಕಾರ್ಮಿಕ ಇಲಾಖೆಯ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ ಮತ್ತು ದಿನ ಪತ್ರಿಕೆ ವಿತರಿಸುವ ಕಾರ್ಮಿಕರುಗಳಿಗೆ ಅಪಘಾತ ಪರಿಹಾರ ಸೌಲಭ್ಯ ಯೋಜನೆ ಜಾರಿಯ ಕುರಿತು ಡಿ.28 ರಂದು ಮೀಡಿಯಾ ಹೌಸ್‍ನಲ್ಲಿ ಉಚಿತ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಗಿಗ್ ಕಾರ್ಮಿಕರು ಆಧಾರ್ ಕಾರ್ಡ್, ವೃತ್ತಿ ನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ ವೇತನ ಪಡೆದ ಬ್ಯಾಂಕ್ ಪಾಸ್ ಬುಕ್, ಇ-ಶ್ರಮ್ ನೋಂದಣಿ ಸಂಖ್ಯೆ ಇಲ್ಲವಾದಲ್ಲಿwww.eshram.gov.in ನಲ್ಲಿ ನೋಂದಾಯಿಸಿ ಪಡೆಯಬಹುದು ಮತ್ತು ಪತ್ರಿಕಾ ವಿತರಣ ಕಾರ್ಮಿಕರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಅವಶ್ಯ ದಾಖಲಾತಿಯೊಂದಿಗೆ ಬಂದು ನೋಂದಣಿ ಮಾಡಿಸುವಂತೆ ಶಿವಮೊಗ್ಗ ಉಪ ವಿಭಾಗ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!