ಶಿವಮೊಗ್ಗ: ಸರ್ವ ಋತು ಪ್ರವಾಸಿ ತಾಟವಾಗಿ ಜೋಗ ಜಲಾಶಯ ಅಭಿವೃದ್ಧಿ ಪಡಿಸಲಾಗುವುದು ಎಂದು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಲಿಂಗನಮಕ್ಕಿ ಜಲಾಶಯಕ್ಕೆ ಗುರುವಾರ ಪೂಜೆ ಸಲ್ಲಿಸಿ ಮಾತನಾಡಿದ ಅವರು ಜೋಗ ಜಲಪಾತ ಸುಂದರ ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾಮಗಾರಿಯನ್ನು ನಡೆಸಲಾಗುತ್ತಿದೆ.
183 ಕೋಟಿ ಯೋಜನೆಯ ಕಾಮಗಾರಿ ಚಾಲನೆಯಲ್ಲಿದ್ದು ಸರ್ಕಾರದಿಂದ 30ಕೋಟಿ ಅನುದಾನ ಬಿಡುಗಡೆಯಾಗಿದ್ದು ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಜೋಗ ಜಲಾಶಯದ ವೀಕ್ಷಣೆ ಆಗಮಿಸುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳ ಜೊತೆ ಮನರಂಜನೆಯನ್ನು ಒದಗಿಸಲು ಹೈದರಾಬಾದ್ ನ ರಾಮೋಜಿ ಸಿಟಿ ಹಾಗೂ ಬಾಂಬೆ ಅಧ್ಯಯನ ಪ್ರವಾಸ ನಡೆಸಲಾಗುವುದು ಎಂದರು.
ಕಳೆದ ವರ್ಷ ಬರಗಾಲದ ಛಾಯಯಲ್ಲಿ ಡ್ಯಾಂ ಭರ್ತಿಯಾಗಿರಲಿಲ್ಲ ಈ ಭಾರಿ ಉತ್ತಮಮಳೆಯಾಗಿ ಶರಾವತಿ ಜಲಾಶಯದ ಭರ್ತಿಯಾಗಿದೆ. 5 ವರ್ಷಗಳ ನಂತರ ಭರ್ತಿಯಾಗಿದ್ದು 3 ಗೇಟ್ ಗಳ ಮೂಲಕ 10 ಸಾವಿರ
50 ಸಾವಿರ ಕ್ಯೂಸೆಸ್ ನೀರು ಬಿಡುಗಡೆಯಾದರೆ 400ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಲಿದೆ ಎಂದು ಅಧಿಕಾರಿಗಳು ವರದಿ ಸಲ್ಲಿಸಿದ್ದು ಹತ್ತು ಸಾವಿರ ಕ್ಯಾಸೆಟ್ ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದರು.
ಸಾಗರ ತಾಲೂಕಿನಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು
100 ಕ್ಕೂ ಹೆಚ್ಚು ಮನೆಗಳು ಬಿದ್ದಿದೆ ಈಗಾಗಲೇ ಸರ್ಕಾರ ನಿಯಮದ ಪ್ರಕಾರ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮಳೆಯಿಂದ ಹಾನಿಯಾದ ಮನೆಗಳಿಗೆ 1.5 ಲಕ್ಷ ಪರಿಹಾರ ನೀಡಲಾಗುತ್ತಿದ್ದು 5 ಲಕ್ಷ ಪರಿಹಾರ ನೀಡಲು ಸಂಪುಟದಲ್ಲಿ ನಿರ್ಧಾರ ಮಾಡಲಾಗುವುದು ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.