ನಾಡಿನ ಖ್ಯಾತ ಪಶುವೈದ್ಯಕೀಯ ವಿಜ್ಞಾನಿ, ಸಾಹಿತಿ, ಚಿಂತಕ, ಬರಹಗಾರ ಡಾ: ಎನ್.ಬಿ.ಶ್ರೀಧರ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರಿಗೆ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಇವರು ಉತ್ತಮ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸಾಧನೆಗಾಗಿ “ “ಶ್ರೇಷ್ಟ ಶಿಕ್ಷಕ” ಪ್ರಶಸ್ತಿ ನೀಡಿ ವಿಶ್ವವಿದ್ಯಾಲಯದ 19 ನೇ ಸಂಸ್ಥಾಪನೆಯ ದಿನದಂದು ಸನ್ಮಾನಿಸಿದೆ.

ಇವರು ಪಶುವೈದ್ಯಕೀಯ ರಂಗದಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಷಯವನ್ನು ಬೋಧನೆ ಮಾಡಿದ್ದು , 200 ಕ್ಕೂ ಹೆಚ್ಚಿನ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಜಾನುವಾರುಗಳಲ್ಲಿ ಬರುವ ಅನೇಕ ರೀತಿಯ ಸಸ್ಯಜನ್ಯ ಶಿಲೀಂದ್ರ ವಿಷಜನ್ಯ ಮತ್ತಿತರ ನಿಗೂಢ ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸಿ ಅವುಗಳಿಗೆ ಕಾರಣ ಮತ್ತು ಚಿಕಿತ್ಸೆಯನ್ನು ಪತ್ತೆ ಮಾಡಿ ಸಹಸ್ರಾರು ಜಾನುವಾರುಗಳ ಉಳಿವಿಗೆ ಕಾರಣರಾಗಿರುವುದನ್ನು ಮತ್ತು ರೈತರ ಮಾಹಿತಿಗಾಗಿ ಅನೇಕ ತಾಂತ್ರಿಕ ಮಾಹಿತಿಗಳನ್ನು ವಿವಿಧ ಮಾಧ್ಯಮಗಳ ಮೂಲಕ ನೀಡಿದ್ದು ಬಂಜೆತನದಿಂದ ಬಳಲುತ್ತಿರುವ ಎಷ್ಟು ರಾಸುಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಉತ್ಪಾದಕವಾಗಿ ಮಾಡಿದ್ದು ಹಾಗೂ ಇತ್ತೀಗಷ್ಟೆ ಇವರಿಗೆ ಭಾರತೀಯ ಪಶುವೈದ್ಯಕೀಯ ಔಷಧಶಾತ್ರಜ್ಞರ ಮತ್ತು ವಿಷಶಾಸ್ತ್ರಜ್ಞರ ಸಂಘವು ರಾಷ್ಟ್ರೀಯ ¥sóÉಲೊ ಪ್ರಶಸ್ತಿ ನೀಡಿರುವುದನ್ನು ಮತ್ತು ಕರ್ನಾಟಕ ಪಶುವೈದ್ಯ ಸಂಘವು ಜೀವ ಮಾನದ ಶ್ರೇಷ್ಟ ಪಶುವೈದ್ಯ ಪ್ರಶಸ್ತಿ ನೀಡಿರುವುದನ್ನು ಈ ಸಂದರ್ಭದಲ್ಲಿ ನೆನೆಯಬಹುದಾಗಿದೆ.

error: Content is protected !!