ಜಿಲ್ಲಾ ಸ್ವೀಪ್ ಸಮಿತಿಯು 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ “ಮರೆಯದೇ ಮತ ಚಲಾಯಿಸಿರಿ, ದೇಶದ ಹೆಮ್ಮೆಯ ಪಾಲುದಾರರಾಗಿರಿ” ಎಂಬ ಧ್ಯೆಯ ವಾಕ್ಯದೊಂದಿಗೆ ನಿರಂತರವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, 2023ರ ಆಗಸ್ಟ್ ಮಾಹೆಯಿಂದ 2024 ರ ಜನವರಿ ಮಾಹೆಯವರೆಗೆ ನಡೆದ ಮತದಾರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ಸಂದರ್ಭದಲ್ಲಿ ಸಾಕಷ್ಟು ಪ್ರಚಾರವನ್ನು ಜಿಲ್ಲೆಯಾದ್ಯಂತ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೋಡಿರ್ಂಗ್ಸ್‍ಗಳನ್ನು ಅಳವಡಿಸುವ ಮೂಲಕ ಹಾಗೂ ಕರಪತ್ರಗಳಲ್ಲಿ ಮಾಹಿತಿಯನ್ನು ಮುದ್ರಿಸಿ ನೀಡಲಾಗಿರುತ್ತದೆ. ಅಲ್ಲದೇ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿಯಲ್ಲಿ ಸಿಬ್ಬಂದಿಗಳನ್ನು ಬಳಸಿಕೊಂಡು ಆಯಾ ಬೂತ್‍ನ ಮತಗಟ್ಟೆ ಮಟ್ಟದ ಅಧಿಕಾರಿಗಳ ಸಮನ್ವಯದೊಂದಿಗೆ ಮನೆ ಮನೆ ಭೇಟಿ ನೀಡಿ ಸಮೀಕ್ಷೆಯನ್ನು ನಡೆಸಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವವರನ್ನು ಗುರುತಿಸಿ, ಸೇರ್ಪಡೆ ಮಾಡಲು ಕ್ರಮವಹಿಸಲಾಗಿರುತ್ತದೆ.
ಶಾಲೆ ಕಾಲೇಜು ಹಂತದಲ್ಲಿ ಯುವ ಮತದಾರರರು ಕಡ್ಡಾಯವಾಗಿ ನೋಂದಣಿಯಾಗುವಂತೆ ಕ್ರಮವಹಿಸಲಾಗಿದೆ. ಈ ಎಲ್ಲಾ ಉಪಕ್ರಮಗಳ ಪರಿಣಾಮವಾಗಿ 2024 ರ ಲೋಕಸಭಾ ಚುನಾವಣೆಗೆ 24000 ಯುವ ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುತ್ತಾರೆ. ಅದಲ್ಲದೇ ಈ ಬಾರಿ “ರಾಷ್ಟ್ರೀಯ ಮತದಾರರ ದಿನಾಚರಣೆ”ಯನ್ನು ವಿಶಿಷ್ಟವಾಗಿ ಆಚರಿಸಲಾಗಿದ್ದು, ಯುವ ಮತದಾರರಿಗೆ ಚುನಾವಣಾ ಪ್ರಕ್ರಿಯೆ ಹಾಗೂ ಚುನಾವಣೆಯ ಮಹತ್ವದ ಅರಿವು ಮೂಡಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳು ಅಂದರೆ ಕ್ವಿಜ್, ಪ್ರಬಂಧ ಸ್ಪರ್ಧೆ, ಭಿತ್ತಿ ಚಿತ್ರಸ್ಪರ್ಧೆ ಹಾಗೂ ಚಿತ್ರಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಗಿರುತ್ತದೆ. ಯುವ ಮತದಾರರಿಗೆ ಚುನಾವಣೆಯಲ್ಲಿ ಹಾಗೂ ಮತದಾನದಲ್ಲಿ ಆಸಕ್ತಿಯನ್ನು ಮೂಡಿಸಲಾಗಿದೆ.
ಚುನಾವಣೆ ಘೋಷಣೆಯಾದ ನಂತರ ಸ್ವೀಪ್ ಚಟುವಟಿಕೆಯನ್ನು ತೀವ್ರತರಗೊಳಿಸಿದ್ದು, ಕಳೆದ ಲೋಕಸಭೆ ಚುನಾವಣೆಯಲ್ಲಿ ಆಯಾ ವಿಧಾನಸಭೆ ಕ್ಷೇತ್ರವಾರು ಮತದಾನದ ಪ್ರಮಾಣವನ್ನು ಹೋಲಿಸಲಾಗಿ ಶೇ.10 ಕ್ಕಿಂತ ಕಡಿಮೆ ಮತದಾನವಾದಂತಹ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ನಮ್ಮ ಜಿಲ್ಲೆಯಲ್ಲಿ 148 ಮತಗಟ್ಟೆಗಳನ್ನು ಕೇಂದ್ರೀಕರಿಸಿ ಅನೇಕ ಸ್ವೀಪ್ ಚಟುವಟಿಕೆಗಳನ್ನುವ ಹಮ್ಮಿಕೊಳ್ಳಲಾಗಿದೆ. ಏ.09,2024 ರವರೆಗೆ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಹಾಗೂ ಸ್ಥಳಾಂತರವಾಗಲು ಅವಕಾಶವಿರುವುದರಿಂದ ಈ ಬಗ್ಗೆ ಮತಗಟ್ಟೆಗಳ ಹಂತದಲ್ಲಿ ಹೆಚ್ಚಿನ ಪ್ರಚಾರ ನೀಡಲಾಗುತ್ತಿದೆ. ಯಾವೊಬ್ಬ ಅರ್ಹ ಮತದಾರರು ಮತದಾನದಿಂದ ವಂಚಿತರಾಗಬಾರದು ಎಂಬುದು ಜಿಲ್ಲಾ ಸ್ವೀಪ್ ಸಮಿತಿಯ ಮುಖ್ಯ ಧೈಯವಾಗಿರುತ್ತದೆ.
ಅಲ್ಲದೇ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ಮತದಾನ ಹೆಚ್ಚಿಸುವುದಕ್ಕಾಗಿ ಕಡಿಮೆ ಮತದಾನಕ್ಕೆ ಕಾರಣಗಳನ್ನು ಗುರುತಿಸಿ ಬೂತ್ ಮಟ್ಟದ ಕಾರ್ಯ ಯೋಜನೆಗಳನ್ನು (Micro Plan) ಸಿದ್ಧಪಡಿಸಿಕೊಳ್ಳಲಾಗಿದೆ. ಕಾರಣಗಳಿಗೆ ಅನುಗುಣವಾಗಿ ಅರಿವು ಮೂಡಿಸುವ ಹಾಗೂ ಪರಿಹಾರಾತ್ಮಕವಾದ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮವಹಿಸಲಾಗುತ್ತಿದೆ. ಇದಲ್ಲದೇ ಜಾಥಾ ರ್ಯಾಲಿಗಳು, ವಾಕಥಾನ್‍ಗಳು, ಕ್ಯಾಂಡಲ್‍ಮಾರ್ಚ್ ಈ ರೀತಿಯ ಸಮುದಾಯ ಪ್ರೇರೇಪಿತ ಚಟುವಟಿಕೆಗಳನ್ನು ಆಯೋಸುವ ಉದ್ದೇಶವನ್ನು ಸ್ವೀಪ್ ಸಮಿತಿ ಹೊಂದಿರುತ್ತದೆ.
ಇದರ ಜೊತೆಗೆ ಹಿರಿಯನಾಗರಿಕರು, ಹಾಗೂ ವಿಶೇಷಚೇತನರಿಗೂ ಸಹ ಮತದಾನ ಪ್ರಕ್ರಿಯೆಯಲ್ಲಿ ಸಹಜವಾಗಿ ಭಾಗವಹಿಸುವ ದೃಷ್ಟಿಯಿಂದ ಅನೇಕ ಉಪಕ್ರಮಗಳನ್ನು ಅಂದರೆ ಮತಗಟ್ಟೆಗಳಲ್ಲಿ ರ್ಯಾಂಪ್, ವೀಲ್ಚೇರ್, ಭೂತಗನ್ನಡಿಗಳು, ಬೈಲ್ ಪತ್ರಿಕೆಗಳನ್ನು ವ್ಯವಸ್ಥೆ ಮಾಡಲಾಗಿದೆ. ನಮ್ಮ ಜಿಲ್ಲೆಯ ವಿಕಲಚೇತನರ ಕಲ್ಯಾಣಾಧಿಕಾರಿಗಳು, ವಿಕಲಚೇತನ ಮತದಾರರಿಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳಾಗಿದ್ದು, ಇವರ ಮೂಲಕ ವಾಕ್ ಮತ್ತು ಶ್ರವಣ ದೋಷವಿರುವ ಮತದಾರರನ್ನು ಗುರುತಿಸಲಾಗುತ್ತಿದ್ದು, ಅಂತಹವರಿಗೆ ಅನುಕೂಲಾಗುವಂತೆ ಸಂಕೇತ ಭಾಷೆ ಬಲ್ಲವರನ್ನು ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಸಮಾಜದ ದುರ್ಬಲ ವರ್ಗಗಳೆಂದು ಗುರುತಿಸಲ್ಪಟ್ಟ ಬುಡಕಟ್ಟು ಜನಾಂಗಗಳು, ತೃತೀಯ ಲಿಂಗಿಗಳು, ಸೆಕ್ಸ್ ವರ್ಕರ್ಸ್ ಇವರೆಲ್ಲರೂ ಸಹ ಮತದಾನದಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಇವರುಗಳು ವಾಸವಾಗಿರುವ ಸ್ಥಳದಲ್ಲಿ ಮತದಾನ ಉತ್ತೇಜಿಸಲು ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ. ಈ ರೀತಿ ಜಿಲ್ಲೆಯ ಎಲ್ಲಾ ಅರ್ಹ ಮತದಾರರು ಮತದಾನದ ದಿನದಂದು ಮತಗಟ್ಟೆಗಳಿಗೆ ಬಂದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ.

ಮುಖ್ಯ ಚುನಾವಣಾಧಿಕಾರಿಯವರ ಕಛೇರಿಯ ನಿರ್ದೇಶನದಂತೆ ದಿನಾಂಕ:28.04.2024 ರಂದು ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮವನ್ನು ಬೂತ್‍ಮಟ್ಟ, ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಆ ದಿನ ಆಯಾ ಹಂತದ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳು ಆ ವ್ಯಾಪ್ತಿಯ ಮತದಾರರ ಸೇರ್ಪಡೆಗೊಳಿಸಲು ಆ ದಿನ ಹಬ್ಬದ ರೀತಿ ಆಚರಿಸಲಾಗುವುದು.
ಬೇಸಿಗೆಯಲ್ಲಿ ಮತದಾನದ ದಿನಾಂಕ ನಿಗದಿಯಾಗಿರುವುದರಿಂದ Queue Management Planಮತ್ತು Heatwave plan ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಈ ಬಾರಿ 3 ಕ್ಕಿಂತ ಹೆಚ್ಚು ಬೂತ್‍ಗಳಿರುವ ಸ್ಥಳಗಳಲ್ಲಿ ಮತದಾರರಿಗೆ ಸಹಾಯಕವಾಗುವಂತೆ Voter Assistance Booth ಗಳ ವ್ಯವಸ್ಥೆ ಮಾಡಲಾಗುವುದು. ಮತಗಟ್ಟೆಗೆ ಬರಲು ಆಗದಂತಹ ಅಂಗವಿಕಲರು ಹಾಗೂ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ 12-B ಸಲ್ಲಿಸುವ ಮೂಲಕ ಅಂಚೆ ಮತಪತ್ರದ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿ, ಚುನಾವಣಾ ಆಯೋಗವು ಅವಕಾಶ ನೀಡಿದೆ.
ಜಿಲ್ಲಾ ಸ್ವೀಪ್ ಸಮಿತಿಯ ಧ್ಯೇಯ ಈ ಬಾರಿ ಶತ ಪ್ರತಿಶತ ಮತದಾನ ಮಾಡುವಂತೆ ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯುವುದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಮತದಾರರು ಮತಗಟ್ಟೆಗೆ ಬಂದು ತಮ್ಮ ಅಮೂಲ್ಯ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಚುನಾವಣಾ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಸ್ವೀಪ್ ಸಮಿತಿ ಮೂಲಕ ಕೋರಿದೆ.

  • ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ, ಜಿಲ್ಲಾ ಪಂಚಾಯತ್ ಶಿವಮೊಗ್ಗ.

error: Content is protected !!