ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾಯಾ೯ನುಭವ ಕಾಯ೯ಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ಎರೆಹುಳು ಗೊಬ್ಬರ ತಯಾರಿಕೆ ಮತ್ತು ಆದರ ಪ್ರಯೋಜನೆಗಳ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದರು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಿವಮೊಗ್ಗ ಕೃಷಿ ವಿವಿಯ ಬೇಸಾಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಜಾತ ಅವರು ಪ್ರಸ್ತುತರಿದ್ದರು. ವಿದ್ಯಾರ್ಥಿಗಳು ಎರೆಹುಳು ಗೊಬ್ಬರ ತಯಾರಿಕೆಯ ವಿಧಾನವನ್ನು ಮಾದರಿ ತೊಟ್ಟಿಯಲ್ಲಿ ಹಂತ ಹಂತವಾಗಿ ಮಾಡಿ ಜನರಿಗೆ ತೋರಿಸಿದರು. ಸಗಣಿ, ಮಣ್ಣು, ತೋಟ ಮತ್ತು ಮನೆಯ ಸಾವಯವ ತ್ಯಾಜ್ಯ, ಹುಲ್ಲು ಮುಂತಾದವುಗಳನ್ನು ಬಳಸಿ ಎರೆಹುಳುಗಳ ಮೂಲಕ ಹೇಗೆ ಗೊಬ್ಬರ ತಯಾರಿಸಬೇಕೆಂದು ಚಾಟ್೯ ತೋರಿಸಿ ವಿವರಿಸಿದರು.

ಡಾ. ಸುಜಾತ ಅವರು ಎರೆಹುಳು ಗೊಬ್ಬರದ ತೊಟ್ಟಿಯನ್ನು 1 ಮೀ ಅಗಲ,1 ಮೀ ಆಳ ಮತ್ತು ಅವಶ್ಯಕತೆ ಇದ್ದಷ್ಟು ಉದ್ದ ಮಾಡಿಕೊಳ್ಳಬಹುದು ಎಂದು ತಿಳಿಸಿದರು. ಎರೆಹುಳುಗಳಿಗೆ ನೆರಳು ಮತ್ತು ತೇವಾಂಶ ಬಹಳ ಮುಖ್ಯ ಮತ್ತು ಅವುಗಳನ್ನು ಇರುವೆ, ಹಕ್ಕಿ ಮತ್ತು ಇಲಿಗಳಿಂದ ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿಸಿದರು. ಸಾವಯವ ಕೃಷಿಕರಿಗೆ ಹಾಗೂ ಸಣ್ಣ ರೈತರಿಗೆ ಎರೆಹುಳು ಗೊಬ್ಬರ ಲಾಭದಾಯಕ . ಎರೆಹುಳು ಗೊಬ್ಬರವನ್ನು ಪ್ಯಾಕ್ ಮಾಡಿ ಮಾರಬಹುದು. ಪ್ರತಿ ೫೦ ಕೆಜಿ ಪ್ಯಾಕ್ ನ ಬೆಲೆ ೫೦೦ ರೂ .ಮಾರುಕಟ್ಟೆಯಲ್ಲಿ ಇದಕ್ಕೆ ತುಂಬಾ ಬೇಡಿಕೆ ಇದೆ ಎಂದು ತಿಳಿಸಿದರು. ಎರೆಹುಳು ಗೊಬ್ಬರದ ಕುರಿತ ಜನರ ಅನುಮಾನಗಳನ್ನು ಸುಜಾತರವರು ಬಗೆಹರಿಸಿದರು. ಈ ಕಾರ್ಯಕ್ರಮದಲ್ಲಿ ಊರಿನ ಜನರು ಸಕ್ರಿಯವಾಗಿ ಪಾಲ್ಗೊಂಡು ಕಾಯ೯ಕ್ರಮವನ್ನು ಯಶಸ್ವಿಗೊಳಿಸಿದರು.

error: Content is protected !!