ಶ್ರೀ ವಿಜಯ ಕಲಾನಿಕೇತನ (ರಿ) ಶಿವಮೊಗ್ಗ ವತಿಯಿಂದ ಡಿಸೆಂಬರ್ 15, 16 ಮತ್ತು 17 ರ ಪ್ರತಿದಿನಸಂಜೆ 6 ಗಂಟೆಗೆ ‘ನೃತ್ಯ ಮೋದ’ ಶಾಸ್ತ್ರೀಯ ನೃತ್ಯ ಮಹೋತ್ಸವ ಕಾರ್ಯಕ್ರಮವನ್ನು ರಾಜೇಂದ್ರನಗರದ ‘ಪವಿತ್ರಾಂಗಣ’ದಲ್ಲಿ ಹಮ್ಮಿಕೊಳ್ಳಲಾಗಿದೆ.
ಡಿಸೆಂಬರ್ 15 ರ ಶುಕ್ರವಾರದಂದು ಅರ್ಚನಾ ಹಾಗೂ ಚೇತನಾ ಅವರಿಂದ ‘ದ್ವಂದ್ವ ಭರತನಾಟ್ಯ’ ಹಾಗೂ ಅನುಶ್ರೀ ಪದ್ಮನಾಭ ಅವರಿಂದ ‘ಒಡಿಸ್ಸಿ ನೃತ್ಯ’, ಡಿಸೆಂಬರ್ 16 ರ ಶನಿವಾರದಂದು ಪೃಥ್ವಿ ಪಾರ್ಥಸಾರಥಿ ಅವರಿಂದ ‘ಭರತನಾಟ್ಯ’ ಹಾಗೂ ಜತಿನ್ ಅಕಾಡೆಮಿಯ ಗುರು ಅರ್ಚನಾ ಪುಣ್ಯೇಶ್ ಮತ್ತು ವೃಂದದವರಿಂದ ‘ಕೂಚಿಪುಡಿ ನೃತ್ಯ’, ಡಿಸೆಂಬರ್ 17 ರ ಭಾನುವಾರದಂದು ಶ್ರೀಮತಿ ಸಂಗೀತಾ ಅಯ್ಯರ್ ಅವರಿಂದ ‘ಭರತ ನೃತ್ಯ’ ಹಾಗೂ ಡಾ|| ಅಕ್ಷತಾ ಎಂ ಭಟ್ ಅವರಿಂದ ‘ಕಥಕ್ ನೃತ್ಯ’ ಕಾರ್ಯಕ್ರಮಗಳು ನಡೆಯಲಿವೆ.
ಮೊದಲದಿನ ದಂದು ಶ್ರೀ ಜಿ.ವಿಜಯ್ ಕುಮಾರ್ ಹಾಗೂ ಡಾ|| ಸಂಧ್ಯಾ ಕಾವೇರಿಯವರು, ಎರಡನೇ ದಿನ ಶ್ರೀ ಹೆಚ್.ಎ. ಭವೇಂದ್ರ ಕುಮಾರ್ ಹಾಗೂ ಶ್ರೀಮತಿ ಶೀಲಾ ಸುರೇಶ್ ಹಾಗೂ ಮೂರನೇ ದಿನ ಡಾ|| ಸಿ. ರಮೇಶ್ ಹಾಗೂ ಡಾ|| ಶೀಲಾ ವಿಜಯ್‍ರವರು ಕಾರ್ಯಕ್ರಮಗಳ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಡಾ|| ಕೆ.ಆರ್ ಶ್ರೀಧರ್ ಹಾಗೂ ಶ್ರೀಮತಿ ವಿಜಯಾ ಶ್ರೀಧರ್ ಈ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮಗಳು ಭಾರತೀಯ ಸಾಂಸ್ಕøತಿಕ ನಿರ್ದೇಶನಾಲಯದ ಕಲಾಸಂಸ್ಕøತಿ ವಿಕಾಸ ಯೋಜನೆಯಡಿ ಮೂಡಿಬರಲಿವೆ.