ಇದು ಆ ಶಾಸಕರ ಕೀಳು ಅಭಿರುಚಿಯನ್ನು ತೋರಿಸುತ್ತದೆ. ತಮ್ಮ ಹೇಳಿಕೆ ಮೂಲಕ ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗೆ ಅವಮಾನ ಮಾಡಿರುವ ಈ ಕಾಂಗ್ರೆಸ್ ಶಾಸಕರು ತಕ್ಷಣ ತಮ್ಮ ಹೇಳಿಕೆಯನ್ನು ಹಿಂಪಡೆಯುವುದರ ಜೊತೆಗೆ ರಾಜ್ಯದ ಜನರ ಕ್ಷಮೆಯನ್ನೂ ಕೇಳಬೇಕು.
ಅನೇಕ ಸನ್ನಿವೇಶಗಳಲ್ಲಿ ದೇಶದ ಹಿತವನ್ನು ಬಲಿ ಕೊಟ್ಟಿದ್ದು ಕಾಂಗ್ರೆಸ್ ಎಂಬುದನ್ನು ಅವರು ಮರೆಯಬಾರದು. ದೇಶಕ್ಕಾಗಿಯೇ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿರುವ ಮೋದೀಜಿ ಅವರಿಗೆ ಹಾಗೂ ನಮ್ಮ ಪಕ್ಷಕ್ಕೆ ಇಂತಹ ಕೀಳು ರಾಜಕೀಯ ಮಾಡುವ ಅಗತ್ಯವಾಗಲಿ, ಅನಿವಾರ್ಯತೆಯಾಗಲೀ ಇಲ್ಲ ಅನ್ನುವುದು ಅವರಿಗೆ ತಿಳಿಯಲಿ.