ಶೀಘ್ರದಲ್ಲೆ ಸರ್ಕಾರದ ಅನುಮೋದನೆ ಪಡೆಯುವ ವಿಶ್ವಾಸ: ಪಲ್ಲವಿ ಜಿ
ದಿ.5 ಫೆ ರಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಒಂಗಡದ ಅಲೆಮಾರಿ ಅಭಿವೃದ್ಧಿ ನಿಗಮದ 3ನೇ ಆಡಳಿತ ಮಂಡಳಿ ಸಭೆಯಲ್ಲಿ ನಿಗಮದಲ್ಲಿ ಜಾರಿಯಲ್ಲಿರುವ ವಸತಿ ಯೋಜನೆಯ ಫಲಾಪೇಕ್ಷಿಗಳಿಗೆ ಸಿಹಿಸುದ್ದಿ.
ನಿವೇಶನ ಹೊಂದಿದ್ದು, ವಸತಿರಹಿತ ಪರಿಶಿಷ್ಟ ಜಾತಿ/ವರ್ಗದ ಅಲೆಮಾರಿ ಸಮುದಾಯಳಿಗೆ ಘಟಕ ವೆಚ್ಚ 4ಲಕ್ಷ ರೂಗಳಲ್ಲಿ ಸ್ವಂತ ಸೂರು ನಿರ್ಮಿಸಿಕೊಳ್ಳಲು 2018ನೇ ಸಾಲಿನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಕಳೆದ ಸರ್ಕಾರ ಅನುದಾನ ಕಡಿತಗೊಳಿಸಿ 2ಲಕ್ಷಕ್ಕೆ ಸೀಮಿತ ಮಾಡಿದ್ದರಿಂದ ಬಹುತೇಕರು ತಮ್ಮ ಮನೆ ಕಾಮಗಾರಿ ಸ್ಥಗಿತ ಮಾಡಿದ್ದು ನಿಗಮಕ್ಕೆ ಪಡೆಯಲಾಗಿದ್ದ 10313 ಭೌತಿಕ ಗುರಿಯ ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗದೆ ಸಂಪೂರ್ಣ ಅನುದಾನ ಬಳಕೆ ಆಗಿರುವುದಿಲ್ಲ.
ಕಟ್ಟಡ ಸಾಮಾಗ್ರಿಗಳ ಬೆಲೆ ಏರಿಕೆಯಿಂದಾಗಿ ಪ್ರಸ್ತುತ ಒದಗಿಸಲಾಗುತ್ತಿರುವ ಹಣದಲ್ಲಿ ಮನೆ ನಿರ್ಮಾಣ ಮಾಡುವುದು ಕಷ್ಟಸಾಧ್ಯವಾಗಿರುವ ಬಗ್ಗೆ ಅಧ್ಯಕ್ಷರು ಜಿಲ್ಲಾ ಪ್ರವಾಸ ಕೈಗೊಂಡಿರುವ ಸಂದರ್ಭದಲ್ಲಿ ಗಮನಿಸಿದ್ದು, ಘಟಕ ವೆಚ್ಚ 5ಲಕ್ಷಕ್ಕೆ ಹೆಚ್ಚಳ ಮಾಡಲು ಮಂಡಳಿ ಸಭೆಯಲ್ಲಿ ತೀರ್ಮಾನ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಿದೆ.
ಕಳೆದ ಜನವರಿಯಲ್ಲಿ ಸಮುದಾಯವಾರು ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಕುಂದುಕೊರತೆ ಮತ್ತು ಸರಣಿ ಸಮಾಲೋಚನೆ ಸಭೆಗಳಲ್ಲಿ ವಸತಿ ರಹಿತ ಅಲೆಮಾರಿಗಳ ಮನೆ ನಿರ್ಮಾಣದ ಘಟಕ ವೆಚ್ಚವನ್ನು ಹೆಚ್ಚಳ ಮಾಡುವಂತೆ ಮುಖಂಡರು ಒತ್ತಾಯ ಮಾಡಿದ್ದರು .