ಶಿವಮೊಗ್ಗ ಡಿ.30: 2025ನೇ ಸಾಲಿಗೆ ವಿಕಲಚೇತನರ ರಿಯಾಯಿತಿ ಬಸ್ ಪಾಸ್‌ಗಳ ವಿತರಣೆ/ನವೀಕರಣಕ್ಕೆ “ಸೇವಾ ಸಿಂಧು” ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಡಿ.30 ರಿಂದ ಫೆ.28 ರವರೆಗೆ https://serviceonline.gov.in.karnataka/URL ಬಳಸಿ ಅರ್ಜಿ ಸಲ್ಲಿಸುವುದು ಕಡ್ಡಾಯ. ನಿಗದಿಪಡಿಸಿದ ದಿನಾಂಕದ ಒಳಗೆ ಪಾಸ್‌ಗಳ ವಿತರಣೆ/ನವಿಕರಿಸಬೇಕಾಗಿರುತ್ತದೆ.
ಹೊಸದಾಗಿ ವಿಕಲಚೇತನರ ಬಸ್‌ಪಾಸ್ ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ಶಿವಮೊಗ್ಗ ವಿಭಾಗ ಎಂಬ ಕೌಂಟರ್ ಆಯ್ಕೆ ಮಾಡುವುದು ಹಾಗೂ 2024ನೇ ಸಾಲಿನಲ್ಲಿ ಪಾಸ್ ಪಡೆದಿರುವ ಫಲಾನುಭವಿಗಳು ಪಾಸ್ ನವೀಕರಣಕ್ಕಾಗಿ ಘಟಕ ವ್ಯವಸ್ಥಾಪಕರ ಕೌಂಟರ್ ಆಯ್ಕೆ ಮಾಡಲು ಸೂಚಿಸಿದೆ.
ಫಲಾನುಭವಿಗಳು ಪಾಸ್ ಪಡೆಯಲು ಬರುವಾಗ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಯವರಿಂದ ದೃಢೀಕರಿಸಿದ ಮಾನ್ಯತೆ ಇರುವ ವಿಕಲಚೇತನರ ಗುರುತಿನ ಚೀಟಿ ಪುಸ್ತಕ ಅಥವಾÀ ಯುಡಿಐಡಿ ಸ್ಮಾರ್ಟ್ ಕಾರ್ಡ್, ಡಿಸೆಬಿಲಿಟಿ ಸರ್ಟಿಫಿಕೇಟ್, ಫಲಾನುಭವಿಗಳ ಇತ್ತೀಚಿನ 3 ಭಾವಚಿತ್ರ, 2024ನೇ ಸಾಲಿನಲ್ಲಿ ಪಡೆದಿರುವ ವಿಕಲಚೇತನರ ಮೂಲ ಪಾಸ್(ನವೀಕರಣಕ್ಕಾಗಿ), ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ನೀಡಬೇಕು. ಪಾಸ್ ಶುಲ್ಕ ರೂ.660 ಗಳನ್ನು ನಗದು ಮೂಲಕ ಪಾವತಿಸಬೇಕೆಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.