ದಿನಾಂಕ ೯-೧೨-೨೦೨೩ ರಂದು ಸಾಗರದ ತಾಳಗುಪ್ಪದ ಮತ್ತುಗದಲ್ಲಿ ಕನ್ನಡ ಪಶುವೈದ್ಯಕೀಯ ಸಾಹಿತ್ಯ ಪರಿಷತ್ (ರಿ) ನ ವಾರ್ಷಿಕ  ಸಭೆ ನಡೆಯಿತು. ಸಂಶೋಧಕ,  ಸಾಹಿತಿ ಡಾ: ಬಸವರಾಜ್ ನಲ್ಲಿಸರರವರು  ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪಶುವೈದ್ಯರು ವಿಜ್ಞಾನವನ್ನು ಅಧ್ಯಯನ ಮಾಡಿದ್ದರೂ ಸಹ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡು ಸುಮಾರು ೩೦ ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಬರೆದಿರುವುದು  ಶ್ಲಾಘನೀಯವೆಂದರು.  ಡಾ: ರಮಾನಂದರವರ  “ನಿರಂತರ”, ಡಾ: ಮಿರ್ಝಾ ಬಷೀರ್‍ ರವರ “ಗಂಗೆ ಬಾರೆ ಗೌರಿ ಬಾರೆ” , ಡಾ: ಗವಿಸ್ವಾಮಿಯವರ ” ಯಾರ ದಯದಲ್ಲಿ ಎಷ್ಟು ನೋವಿದೆಯೋ” ಮತ್ತು ಡಾ:ಬಿ.ಕೆ.ರಮೇಶ್‍ರವರ “ಮೆಲುಕು” ಹಾಗೂ ಗೋಮಾಳ” ಕೃತಿಗಳ ವಿಮರ್ಶೆಯನ್ನು ಡಾ: ಪಿ., ರವಿಕುಮಾರ್, ಡಾ: ಗಣೇಶ ಹೆಗಡೆ , ಡಾ: ಸುನಿಲ್ ಕುಮಾರ್ ಮತ್ತು ಪರಿಷತ್ತಿನ ಕಾರ್ಯದರ್ಶಿ ಡಾ:ಕೆ.ಜಿ. ಮಹೇಶ್ವರಪ್ಪ ಮಾಡಿದರು.  ಪರಿಷತ್ತಿನ ಅಧ್ಯಕ್ಷರಾದ ಡಾ: ಎಸ್.ಬಿ.ರವಿಕುಮಾರ್ ಮಾತನಾಡುತ್ತಾ  ಕತೆಗಾರರು ಕಥಾ ಹಂದರಕ್ಕಾಗಿ ಹುಡುಕಬೇಕು.  ಆದರೆ ಪಶುವೈದ್ಯರು ತಮ್ಮ ದೈನಂದಿನ ವೃತ್ತಿಯ ದೆಸೆಯಿಂದಾಗಿ  ಗ್ರಾಮೀಣ ಪ್ರದೇಶದ ಬಡವರ, ದನಿಯಿಲ್ಲದವರ , ಶೋಷಿತರ, ಮಹಿಳೆಯರ ಜೀವನದಲ್ಲಿ ಇಣುಕಿನೋಡುವ ಅವಕಾಶ ಪಡೆದಿದ್ದಾರೆ. ಹಾಗಾಗಿ ತಾವು ಕಂಡ ಬಡವರ ಜೀವನದ ಘಟನೆಗಳನ್ನು ಸ್ವಲ್ಪ ಕಲ್ಪನೆ ಬೆರೆಸಿ ಆಕರ್ಷಕವಾಗಿ ಹೇಳುವ ನೈಪುಣ್ಯತೆಯನ್ನು ಸಾಧಿಸಿದರೆ ಅದ್ಭುತ ಸಾಹಿತ್ಯ ಕೃತಿಗಳನ್ನು ರಚಿಸಬಹುದು, ಇದಕ್ಕೆ ಡಾ. ಮಿರ್ಜಾ ಬಷೀರ್‌, ಡಾ. ರಮಾನಂದ ಹಾಗೂ ಡಾ. ಗವಿಸ್ವಾಮಿಯವರ ಕೃತಿಗಳ ಜನಪ್ರಿಯತೆಯೇ ಸಾಕ್ಷಿ ಎಂದು ಹೇಳಿದರು. ರು. ಡಾ: ಶ್ರೀನಿವಾಸ ರೆಡ್ಡಿಯವರು ಸಮಾಜದ ಮೇಲೆ  ಸಾಮಾಜಿಕ ಜಾಲತಾಣಗಳ ಪ್ರಭಾವ ಮತ್ತು ಅದರ ಸದ್ಭಳಕೆಯ ಬಗ್ಗೆ ಮಾತನಾಡಿದರು. ಪರಿಷತ್ತಿನ ಖಜಾಂಚಿ ಡಾ: ಎನ್.ಬಿ.ಶ್ರೀಧರ ವಂದನಾರ್ಪಣೆ ಮಾಡಿದರು.

ಖ್ಯಾತ ಹಾಸ್ಯ ಕಲಾವಿದ ಮತ್ತು ಪಶುವೈದ್ಯ ಡಾ: ಬಸವರಾಜ ಬೆಣ್ಣಿಯವರ ಹಾಸ್ಯ ಸಂಜೆ ಮತ್ತು ಡಾ: ಅರವಿಂದ್ ಇವರ ರಸಸಂಜೆ ಕಾರ್ಯಕ್ರಮದಲ್ಲಿ ಎಲ್ಲರ ಮನರಂಜಿಸಿತು.

error: Content is protected !!