ಅಂಬೇಡ್ಕರ್ ಅವರ ಸಂಶೋಧನೆಗಳು ಜಗತ್ತಿಗೆ ಮಾದರಿ-ಪ್ರೊ.ಎಚ್.ಟಿ.ಪೋತೆ

ಡಾ.ಬಿ.ಆರ್.ಅಂಬೇಡ್ಕರ್ ಅವರು ಆಳವಾದ ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳ ಮೂಲಕ. ತಲಸ್ಪರ್ಶಿಯಾಗಿರುವ ಸಂಶೋಧನೆಗಳನ್ನು ದೇಶದ ಅಭಿವೃದ್ಧಿಗೆ ಮಾರ್ಗದರ್ಶಿಯಾಗಿವೆ. ಅಸಮಾನತೆ, ಅನ್ಯಾಯ, ಅನಾಚಾರ, ಅದಕ್ಷತೆಯಿಂದ ಮುಕ್ತವಾಗಿ ಅಭಿವೃದ್ಧಿ ಪಥದಲ್ಲಿ ಸಾಗಲು ಜಗತ್ತಿಗೆ ಮಾದರಿಯಾಗಿವೆಂದು ಪ್ರೊ.ಎಚ್.ಟಿ.ಪೋತೆ ಅವರು ಅಭಿಪ್ರಾಯಪಟ್ಟರು. ಅವರು ಕುವೆಂಪುವಿಶ್ವವಿದ್ಯಾಲಯದ ಹಿರೇಮಠ ಸಭಾಂಗಣದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆ ಮತ್ತು ಸಂಶೋಧನಾ ನೆಲೆಗಳು ಎಂಬ ರಾಜ್ಯಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಪರೀಕ್ಷಾಂಗ ಕುಲಸಚಿವರಾದ ಪ್ರೊ.ಎಸ್.ಎಂ.ಗೋಪಿನಾಥ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ.ಸಿ.ಎಸ್.ದ್ವಾರಕನಾಥ್, ಸಂಪನ್ಮೂಲವ್ಯಕ್ತಿಗಳಾದ ಡಾ.ಅನಸೂಯಾ ಕಾಂಬ್ಳೆ, ಡಾ. ಸುಜಾತ ಚಲವಾದಿ ಭಾಗವಹಿಸಿದ್ದರು. ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು ಪ್ರಾಸ್ತಾವಿಕ ಮಾತಾಡಿದರು.. ಎಂ.ಸಂಪತ್ ಕುಮಾರ್, ಓಬಳೇಶ್ ಟಿ. ಮಂಜುನಾಥಯ್ಯ, ಆರ್.ರವಿಕುಮಾರ್ ಇದ್ದರು. ರಾಜ್ಯದ ವಿವಿಧ ಜಿಲ್ಲೆಗಳ ಸಂಶೋಧಕರು ಭಾಗವಹಿಸಿದ್ದರು.

Leave a Reply

error: Content is protected !!