ಶಿವಮೊಗ್ಗ, ಏ.7 : ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಏ.6 ರಂದು ವಿನೋಬನಗರದ ಚೇತನ ಪಾರ್ಕ್ನಲ್ಲಿ ಬೀದಿ ಬದಿ ವ್ಯಾಪಾರಿಗಳು ಹಾಗೂ ಸ್ವ ಸಹಾಯ ಸಂಘದ ಮಹಿಳೆಯರಿಗಾಗಿ ಮತದಾನ ಹಬ್ಬ ಆಚರಿಸಲಾಯತು.
ಈ ಕಾರ್ಯಕ್ರಮದಲ್ಲಿ ಮತದಾನದ ಕುರಿತು ಅವರಲ್ಲಿ ಜಾಗೃತಿ ಮೂಡಿಸಿ, ಸ್ಕಿಪ್ಪಿಂಗ್, ಗಿರ್ಗಿಟ್ಟಳೆ ಮುಂತಾದ ಹಲವು ದೇಸಿ ಕ್ರೀಡೆಗಳನ್ನು ಆಡಿಸಲಾಯಿತು. ಹಾಗೂ ಮತದಾನ ಜಾಗೃತಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಇದೇ ಸಂದರ್ಭದಲ್ಲಿ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿ ಬೇವು-ಬೆಲ್ಲ ವಿತರಿಸಲಾಯಿತು. ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಅನುಪಮಾ, ಸುಪ್ರಿಯಾ ಹಾಗೂ ಸಿಬ್ಬಂದಿಗಳಾದ ಗೀತಾ, ಉಷಾ, ಯಶಸ್ವಿನಿ, ಶಾಂತಿ, ಸ್ವಾತಿ, ಆರಿಫ್ ಹಾಜರಿದ್ದರು.