ಶಿವಮೊಗ್ಗ, ಅಕ್ಟೋಬರ್ 27 : ಶಿವಮೊಗ್ಗ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಇವರ ಸಹಯೋಗದಲ್ಲಿ 2023-24ನೇ ಸಾಲಿನಲ್ಲಿ 6-16 ವರ್ಷದವರೆಗಿನ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅ.26 ರಿಂದ ನ.04 ರವರೆಗೆ ಸಮೀಕ್ಷೆ ಹಮ್ಮಿಕೊಳ್ಳಲಾಗಿದ್ದು, ಶಾಲಾ ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿನ ಶಾಲೆ ಬಿಟ್ಟ ಮತ್ತು ಶಾಲೆಗೆ ಸೇರದ ಮಕ್ಕಳ ಮನೆಗೆ ಶಿಕ್ಷಕರುಗಳು ಭೇಟಿ ನೀಡುತ್ತಾರೆ.
ಈ ಸಂದರ್ಭದಲ್ಲಿ ಪೋಷಕರು ಮಕ್ಕಳ ಮಾಹಿತಿಯನ್ನು ನೀಡಿ ಸಹಕರಿಸುವಂತೆ ಹಾಗೂ ಈ ಬಗ್ಗೆ ದುರ್ಬಲ ಪ್ರದೇಶಗಳ ಭೇಟಿಗೆ ಪ್ರತಿ ಜನವಸತಿ/ಶಾಲಾ ಹಂತದಲ್ಲಿ ಪಂಚಾಯತ್ ರಾಜ್ ಇಲಾಖೆ/ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ/ ಆರೋಗ್ಯ ಇಲಾಖೆಯ ಸಹಕಾರದಿಂದ ತಮ್ಮ ವ್ಯಾಪ್ತಿಯಲ್ಲಿ ನಿಗದಿಪಡಿಸಿದ ಶಿಕ್ಷಕರು/ ಆಶಾ ಕಾರ್ಯಕರ್ತರು/ ಅಂಗನವಾಡಿ ಕಾರ್ಯಕರ್ತರು/ಪಿಆರ್ಪಿ ಭೇಟಿ ಮಾಡಿ ವಿಶೇಷ ದಾಖಲಾತಿ ಆಂದೋಲನ ನಡೆಸಲಾಗುವುದು. ಈ ಸಮೀಕ್ಷೆಗೆ ಶಾಲಾ ವ್ಯಾಪ್ತಿಯ ಗ್ರಾಮ ಪಂಚಾಯತಿ ಪ್ರತಿನಿಧಿಗಳು/ ಅಧಿಕಾರಿಗಳು, ಪೋಷಕರುಗಳು, ಶಿಕ್ಷಣಾಸಕ್ತರು ಹಾಗೂ ಸ್ಥಳೀಯ ಎನ್.ಜಿ.ಓ.ಗಳು ಸಹಕಾರ ನೀಡುವಂತೆ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಶಿಕ್ಷಣ ಕರ್ನಾಟಕ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.