ಶಿವಮೊಗ್ಗ : ಒಬ್ಬ ಮಹಿಳೆ ಕುಟುಂಬ ಮತ್ತು ವೃತ್ತಿಯನ್ನು ಬ್ಯಾಲೆನ್ಸ್ ಮಾಡಿ ನಡೆಸಬೇಕಾಗುತ್ತದೆ. ಎರಡರ ಬಗ್ಗೆಯೂ ಯೋಚನೆ ಮಾಡಿ ನಿರ್ಧಾರವನ್ನು ಆಯ್ಕೆ ಮಾಡಬೇಕಾಗುತ್ತದೆ. ಒಬ್ಬ ಗಂಡಸು ವಕೀಲನಾಗಿ ಯಶಸ್ವಿಯಾಗಲು ಕುಟುಂಬದ ಸಹಕಾರ ಬೇಕಾಗುತ್ತದೆ. ಆದರೆ ಒಬ್ಬ ಮಹಿಳೆ ಯಶಸ್ವಿ ವಕೀಲೆಯಾಗಲು ಸಮಾಜದ ಸಹಕಾರ ಅತ್ಯಂತ ಅಗತ್ಯ ಎಂದು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಶಿವಮೊಗ್ಗ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಬಿ.ಎಂ.ಶ್ಯಾಂ ಪ್ರಸಾದ್ ಅಭಿಪ್ರಾಯ ಪಟ್ಟರು.


ಅವರು ಇಂದು ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಮಹಿಳಾ ನ್ಯಾಯವಾದಿಗಳ ಒಕ್ಕೂಟ, ಶಿವಮೊಗ್ಗ ಜಿಲ್ಲಾ ಮಹಿಳಾ ನ್ಯಾಯವಾದಿಗಳ ಸಮಿತಿ ಮತ್ತು ಶಿವಮೊಗ್ಗ ಜಿಲ್ಲಾ ನ್ಯಾಯವಾದಿಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ದಕ್ಷಿಣ ಕರ್ನಾಟಕ ಮಹಿಳಾ ನ್ಯಾಯವಾದಿಗಳ ಸಮ್ಮೇಳನವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬ ಮಹಿಳೆ ಕುಟುಂಬ ಮತ್ತು ಸಂದರ್ಭದ ಬಗ್ಗೆ ಯೋಚನೆ ಮಾಡಿ ಆಯ್ಕೆ ಮಾಡಬೇಕಾಗುತ್ತದೆ. ಯಾವುದೇ ಕೆಲಸವಾದರೂ ಸಹ ಕಷ್ಟ ಆದರೂ ಸಾಧ್ಯ. ಆದರೆ ಸಮತೋಲ ಮಾಡಬೇಕಾದದ್ದು ಅಗತ್ಯವಾಗುತ್ತದೆ. ಕುಟುಂಬ ವರ್ಗ, ಸ್ನೇಹಿತ ವರ್ಗ, ಸಮಾಜ ವರ್ಗ ಇದ್ದರು ನಮ್ಮ ಸಂದರ್ಭ ಬೇರೆ ಬೇರೆ ಇರುತ್ತದೆ. ಹಾಗಾಗಿ ಎಲ್ಲಾ ಸಂದರ್ಭಗಳನ್ನು ಎದುರಿಸಿ ಮುಂದೆ ಹೋಗಬೇಕಾಗುವುದು ಅನಿವಾರ್ಯವಾಗುತ್ತದೆ. ಒಬ್ಬ ಗಂಡಸು ವಕೀಲನಾಗಿ ಯಶಸ್ವಿಯಾಗಲು ಕುಟುಂಬದ ಸಹಕಾರ ಸಾಕಾಗುತ್ತದೆ. ಆದರೆ ಒಬ್ಬ ಮಹಿಳೆ ಯಶಸ್ವಿ ವಕೀಲೆಯಾಗಲು ಸಮಾಜದ ಸಹಕಾರ ಅತ್ಯಂತ ಅನಿವಾರ್ಯ ಮತ್ತು ಅಗತ್ಯ ಕೂಡ ಆಗಿರುತ್ತದೆ ಎಂದರು.
ಸಮಾನತೆಯ ಕಡೆಗೆ ನಮ್ಮ ನಾಡಿಗೆ ಎನ್ನುವ ಹಾಗೆ. ಸೆಪ್ಟೆಂಬರ್ 28, 29 ರಂದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೇ ಜಿಲ್ಲಾ ಮಟ್ಟದಲ್ಲೂ ಚರ್ಚೆ ಆಗುತ್ತಿದೆ ಎನ್ನುವ ರೀತಿಯಲ್ಲಿ ಕೊಂಡೊಯ್ಯಬೇಕು. ಕೆಲವು ಮಹಿಳಾ ವಕೀಲರು ಕೋರ್ಟ್ ನಲ್ಲಿ ಜೂನಿಯರ್ಸ್ ಬಂದಾಗ ಸೀನಿಯರ್ಸ್ ಕರ್ಕೊಂಡ್ ಬನ್ನಿ ಎನ್ನುವುದು ಸರಿಯಲ್ಲ ಇದನ್ನು ತಪ್ಪಿಸಿ ಎಂದು ಮನವಿ ಮಾಡಿದರು. ಯಾರೇ ಕಿರಿಯರಿದ್ದರೂ ಸರಿಯೇ ಧೈರ್ಯವಾಗಿ ಹೋಗಿ ವಾದ ಮಾಡಿ ಎಂದು ಕಿರಿಯರಿಗೆ ಧೈರ್ಯ ತುಂಬಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಉಮಾ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಮಹಿಳೆ ತನ್ನ ಛಾಪನ್ನು ಖಂಡಿತವಾಗಿಯೂ ಮೂಡಿಸಿದ್ದಾಳೆ. ಯಾವುದೇ ಮಹಿಳೆಯನ್ನು ತೆಗೆದುಕೊಂಡರು ಸಹ ಸವಾಲನ್ನು ಸ್ವೀಕರಿಸುತ್ತಾಳೆ, ಅದಕ್ಕೆ ಕಾರಣ ನಮ್ಮ ಒಳಗೆ ಇರುವ ಹೋರಾಟದ ಮನೋಭಾವ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದಕ್ಷಿಣ ಕರ್ನಾಟಕ ಮಹಿಳಾ ನ್ಯಾಯವಾದಿಗಳ ಈ ಸಮ್ಮೇಳನಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಸಮ್ಮೇಳನದ ಘೋಷವಾಕ್ಯ ಸಮಾನತೆಯ ಕಡೆಗೆ ನಮ್ಮ ನಡಿಗೆ ಎನ್ನುವಂತಹದಾಗಿದೆ. ನ್ಯಾಯಾಧೀಶರು ಯಾವಾಗಲೂ ಎರಡು ಕಿವಿಗಳನ್ನೂ ತೆಗೆದಿಟ್ಟಿಕೊಂಡಿರುತ್ತಾರೆಯೇ ಹೊರತು ಬಾಯಿಯನ್ನು ಹೆಚ್ಚಾಗಿ ತೆಗೆಯುವುದಿಲ್ಲ. ನಾನು ಕೂಡಾ ಮಹಿಳಾ ನ್ಯಾಯವಾದಿಯಾಗಿ ಕೆಲ ಕಾಲ ಕೆಲಸ ಮಾಡಿದ ಸಂದರ್ಭದಲ್ಲಿ ಸಮಸ್ಯೆಯನ್ನು ಅನುಭವಿಸಿದ ಅನುಭವ ಇದೆ ಎಂದರು.
ಮಹಿಳೆಯರಿಗೆ ಕುಟುಂಬದ ಬೆಂಬಲ ಬೇಕು. ಮದುವೆಗೂ ಮುನ್ನ ನಮ್ಮ ಪ್ರಾಕ್ಟಿಸ್ ಇರುತ್ತದೆ. ಆದರೆ ಮದುವೆಯ ನಂತರ ಆ ಕುಟುಂಬದ ಒಪ್ಪಿಗೆ ಬೇಕಾಗುತ್ತದೆ. ಅದು ಆ ಕುಟುಂಬದಲ್ಲಿನ ಜನರ ಮನೋಭಾವದ ಮೇಲೆ ನಿಂತಿರುತ್ತದೆ. ನಮ್ಮ ಸಮಸ್ಯೆಗಳು ಸುಲಭವಾಗಿರಲಿಲ್ಲ. ಒಮ್ಮೆ ಚುನಾವಣೆಯನ್ನು ಎದುರಿಸಿ ಉಪಾಧ್ಯಕ್ಷೆಯಾಗಿದ್ದೆ. ಇಂತಹ ಸಾವಿರಾರು ಅನುಭವಗಳನ್ನು ಎಲ್ಲ ಸಹೋದರಿಯರು ಅನುಭವಿಸಿದ್ದೀರಿ. ಅದರಲ್ಲೂ ಮಹಿಳೆಯರು ಎರಡೆರಡು ದೋಣಿಯಲ್ಲಿ ಕಾಲಿಟ್ಟಿರುತ್ತೇವೆ. ಕುಟುಂಬ ಮತ್ತು ಪ್ರೋಫೆಷನಲ್ ವೃತ್ತಿ ಎರಡನ್ನೂ ಸಹ ನೀಡಲಾಗುವುದಿಲ್ಲ. ಅದೆಲ್ಲದನ್ನು ನಿಭಾಯಿಸಿದರೆ ಮಾತ್ರ ನಾವು ಯಶಸ್ಸು ಕಾಣಬಹುದು. ಇಂತಹ ಸಮ್ಮೇಳನಗಳು ಆಗಾಗ ಆದಲ್ಲಿ ಒಂದು ವೇದಿಕೆಗಳು ಸಿಗುತ್ತದೆ. ವಿಚಾರ ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಪುರುಷ ನ್ಯಾಯವಾದಿಗಳು ಯಾವಾಗಲೂ ಬೆಂಬಲವಾಗಿ ನಿಂತಿರುತ್ತಾರೆ. ಇವರ ಬೆಂಬಲ ನಮಗೆ ಬಹಳ ಅನುಕೂಲವಾಗುತ್ತದೆ. ನಮಗೆ ಇತಿಹಾಸ ಹೇಳಿಕೊಡುವುದು 12, 13 ನೇ ಶತಮಾನದಲ್ಲಿಯೇ ಒಬ್ಬ ಮಹಿಳೆ ನ್ಯಾಯವಾದಿಯಾಗಿದ್ದಳು ಎಂಬುದು ನಮಗೆ ತುಂಬಾ ಮಾರ್ಗದರ್ಶನವಾಗುತ್ತದೆ. ಉದಯ ಭಾರತಿ ನ್ಯಾಯಾಧೀಶೆಯಾಗಿ, ನ್ಯಾಯಮೂರ್ತಿಯಾಗಿ ಕಾರ್ಯ ನಿಭಾಯಿಸುವುದಾಗಿ ಜವಾಬ್ದಾರಿ ವಹಿಸಿದ್ದಳು. ಮಹಿಳೆಯ ಸ್ಥಿತಿಗತಿ ಸಮಾಜದಲ್ಲಿ ತುಳಿತಕ್ಕೆ ಒಳಗಾಗಿದೆ. ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸಿದ್ದಾಳೆ. ಎಲ್ಲ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ ಎಂದರು.
ಸಿವಿಲ್ ಜಡ್ಜ್ ನ್ಯಾಯಾಧೀಶ ಹುದ್ದೆಗೆ ನೇಮಕಾತಿಯಾಗಿದ್ದು ಅದರಲ್ಲಿ 22 ರಿಂದ 28 ಸ್ಥಾನಗಳಿಗೆ ಮಹಿಳೆಯರೇ ಹುದ್ದೆಯನ್ನು ಅಲಂಕರಿಸಿದ್ದಾರೆ. ಇದು ನಿಜವಾದ ಬೆಳವಣಿಗೆ. ಆದರೆ ಈ ಫ್ರೋಫೆಶನ್ ನಲ್ಲಿ ಕೋರ್ಟ್‍ನ ಅವರ ವಿಸಿಬಲ್‍ಗೆ ತೊಂದರೆ ಆಗುತ್ತಿದೆ. ಮಹಿಳೆಯರು ವಿತ್ ಫ್ಯಾಕ್ಟ್ ಅಂಡ್ ಲಾ ಬಗ್ಗೆ ತಯಾರಾಗಿ ಬರಬೇಕು. ಫೈಲ್ ಇದ್ದಲ್ಲಿ ಒಂದೆರಡು ಬಾರಿ ಅದನ್ನು ಓದಿಕೊಂಡರೆ ಸರಿಯಾಗಿ ಅರ್ಥೈಸಿಕೊಳ್ಳಬಲ್ಲಿರಿ. ಸ್ವಲ್ಪ ನಾಚಿಕೆ ಸ್ವಭಾವ ಮಹಿಳೆಯಲ್ಲಿರುತ್ತದೆ. ಆದರೆ ಅದನ್ನು ಸ್ವಲ್ಪ ಬದಿಗಿಟ್ಟು ನಾನು ಮಾಡುವುದು ಸರಿ ಎಂದು ಆತ್ಮವಿಶ್ವಾಸ ಬೆಳೆಸಿಕೊಂಡರೆ ನಾವು ಪರಿಣಿತಿಯನ್ನು ಹೊಂದಬಹುದು. ವೃತ್ತಿ ಎಂದು ನೋಡಿದರೆ ಎಲ್ಲ ಫ್ರೋಫೆಷನ್ ವೃತ್ತಿಗೂ ನೈಪುಣ್ಯತೆ ಅಗತ್ಯ. ಅದನ್ನು ಎಲ್ಲರೂ ಮೈಗೂಡಿಕೊಳ್ಳಿ ಎಂದರು.
ಜಿಲ್ಲಾ ಮಹಿಳಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಸರೋಜ ಪಿ.ಸಂಗೋಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು 20 ಜಿಲ್ಲೆಗಳಿಂದ ಈ ದಕ್ಷಿಣ ಪ್ರಾಂತೀಯ ಮಹಿಳಾ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಇದೊಂದು ದಾಖಲೆಯಾಗಿ ಉಳಿಯುತ್ತದೆ. 2005ರಲ್ಲಿ ಹಿರಿಯ ವಕೀಲರಾದ ದಿ.ಮಂಜುಳಾ ದೇವಿ ನೇತೃತ್ವದಲ್ಲಿ ಸಮ್ಮೇಳನ ಆಯೋಜಿಸಿದ್ದೆವು. ಅವರ ನೆನಪಿಗಾಗಿ ವೇದಿಕೆಗೆ ಅವರ ಹೆಸರನ್ನೇ ಇಟ್ಟಿದ್ದೇವೆ. ಮಹಿಳಾ ವಕೀಲರ ಸಮಸ್ಯೆಗಳನ್ನು ಹೇಳಲು ಒಂದು ವೇದಿಕೆಯ ಅವಶ್ಯಕತೆ ಇದೆ. ಈ ವೇದಿಕೆಯನ್ನು ಬಳಸಿಕೊಂಡು ನಮ್ಮ ಸಮಸ್ಯೆಗಳನ್ನು ಗಮನಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಇದು ಎಲ್ಲಾ ಮಹಿಳಾ ವಕೀಲ ವೃಂದಕ್ಕೆ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಅಧ್ಯಕ್ಷರಾದ ಹೇಮಲತಾ ಮಹಿಷಿ, ಮಾಜಿ ಅಧ್ಯಕ್ಷರಾದ ಶೀಲ ಅನೀಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ.ಆರ್.ರಾಘವೇಂದ್ರ ಸ್ವಾಮಿ, ಕರ್ನಾಟಕ ರಾಜ್ಯ ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಅಧ್ಯಕ್ಷರಾದ ಸಂಧ್ಯಾ ಬಸವರೆಡ್ಡಿ ಮದಿನೂರು, ಕಾರ್ಯದರ್ಶಿ ರೇಣುಕಮ್ಮ ಹೆಚ್.ಎಂ., ನ್ಯಾ.ಮರುಳ ಸಿದ್ಧರಾಧ್ಯ, ಸಂಪನ್ಮೂಲ ವ್ಯಕ್ತಿ ಹೆಚ್.ಡಿ.ಆನಂದ್‍ಕುಮಾರ್, ಹಿರಿಯ ವಕೀಲರಾದ ಬಸಪ್ಪಗೌಡ, ಶಿವಮೂರ್ತಿ, ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮತ್ತಿತರರು ಇದ್ದರು.

error: Content is protected !!