ಶಿವಮೊಗ್ಗ ಅಕ್ಟೋಬರ್ 25 : 2022 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅ.28 ರ ಬೆಳಗ್ಗೆ 11 ಗಂಟೆಗೆ ಜಿಲ್ಲೆಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ನಾಡಗೀತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾ ಚೇತನ ಹಾಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ಹಾಡಲು ಸರ್ಕಾರ ತೀರ್ಮಾನಿಸಿದ್ದು, ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಲು ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಕಾರ್ಯಕ್ರಮದ ಸ್ಥಳ, ಕಲಾತಂಡ ಮುಖ್ಯಸ್ಥರು ಮತ್ತು ನೋಡಲ್ ಅಧಿಕಾರಿಗಳ ವಿವರ ಈ ಕೆಳಕಂಡಂತೆ ಇದೆ.
ಜಿಲ್ಲಾಧಿಕಾರಿಗಳ ಕಚರಿ ಆವರಣ, ಅರುಣ್‍ಕುಮಾರ್ ಮತ್ತು ತಂಡ(9844444820), ನೋಡಲ್ ಅಧಿಕಾರಿ ಎಸ್.ಬಿ.ದೊಡ್ಡಗೌಡರ್, ಉಪವಿಭಾಗಾಧಿಕಾರಿಗಳು(9964358612). ತುಂಗಾತೀರ, ರಾಮೇಶ್ವರ ದೇವಸ್ಥಾನ ಪಕ್ಕ, ತೀರ್ಥಹಳ್ಳಿ ಸಂದೇಶ ಜವಳಿ ಮತ್ತು ತಂಡ(9448120959, ಅಮೃತ್, ತಹಶೀಲ್ದಾರ್ ತೀರ್ಥಹಳ್ಳಿ(7892894607). ಜೋಗ ಜಲಪಾತ ಎದುರು, ಜೋಗ, ಸಾಗರ, ವಸುಧಾ ಶರ್ಮ ಮತ್ತು ತಂಡ ಸಾಗರ(9686275363), ಪಲ್ಲವಿ, ಉಪವಿಭಾಗಾಧಿಕಾರಿಗಳು, ಸಾಗರ(7019667299) ಮತ್ತು ರಾಮಕೃಷ್ಣ ಹೆಚ್.ಎಸ್. ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ. ನರಸಿಂಹಸ್ವಾಮಿ ದೇವಸ್ಥಾನ ಎದುರು, ಭದ್ರಾವತಿ, ಭದ್ರಾವತಿ ವಾಸು ಮತ್ತು ತಂಡ(7483514159) ಪ್ರದೀಪ್ ತಹಶೀಲ್ದಾರರು, ಭದ್ರಾವತಿ(9916201135), ರಮೇಶ್, ಭದ್ರಾವತಿ ತಾ.ಪಂ ಇಓ. ಬಿದನೂರು ಕೋಟೆ ಎದುರು, ನಗರ, ಹೊಸನಗರ, ಲಲಿತಾ ಕಾರ್ಗಡಿ ಮತ್ತು ತಂಡ(9449640623), ರಾಜೀವ್, ತಹಶೀಲ್ದಾರ್ ಹೊಸನಗರ(9986624119), ಪ್ರವೀಣ್, ಹೊಸನಗರ ತಾ.ಪಂ ಇಓ. ಕುವೆಂಪು ಮನೆ, ಕುಪ್ಪಳಿ, ತೀರ್ಥಹಳ್ಳಿ, ಶಶಿಕುಮಾರ್ ಕಾರಂತ್ ಮತ್ತು ತಂಡ, ತೀರ್ಥಹಳ್ಳಿ(8296735841), ಶೈಲ, ಇಓ, ತಾ.ಪಂ ತೀರ್ಥಹಳ್ಳಿ(9480876130), ಕಡಿದಾಳ್ ಪ್ರಕಾಶ್ ಸಮಕಾರ್ಯದರ್ಶಿ, ಕುವೆಂಪು ಪ್ರತಿಷ್ಟಾನ, ಕುಪ್ಪಳಿ. ಶಾಹಿ ಗಾರ್ಮೆಂಟ್ಸ್, ಶಿವಮೊಗ್ಗ ಮಹೇಂದ್ರ ಘೋರೆ ಮತ್ತು ತಂಡ, ಶಿವಮೊಗ್ಗ(7760254622), ಗಣಪತಿ, ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಮೊಗ್ಗ(9448716248). ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಶಿವಮೊಗ್ಗ, ಪ್ರಹ್ಲಾದ್ ದೀಕ್ಷಿತ್ ಮತ್ತು ತಂಡ (9611427586),ಡಾ.ಶಿವಕುಮಾರ್.ಕೆ.ಹೆಚ್, ಮುಖ್ಯ ಆಡಳಿತಾಧಿಕಾರಿಗಳು ಸಿಮ್ಸ್(9448357490). ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ, ಸಮನ್ವಯ ಕಾಶಿ ಮತ್ತು ತಂಡ(9945387650), ಅನುರಾಧ ರಿಜಿಸ್ಟ್ರಾರ್ ಕುವೆಂಪು ವಿಶ್ವವಿದ್ಯಾಲಯ(9844488360). ಸಹ್ಯಾದ್ರಿ ಕಾಲೇಜು, ಶಿವಮೊಗ್ಗ, ಪಾರ್ಥ ಚಿರಂತನ್ ಮತ್ತು ತಂಡ(8618361574 ), ಡಾ.ರಾಜೇಶ್ವರಿ, ಪ್ರಾಂಶುಪಾಲರು, ಸಹ್ಯಾದ್ರಿ ವಿಜ್ಞಾನ ಕಾಲೇಜು, ಉಲ್ಲಾಸ್ ಯುವ ಅಧಿಕಾರಿ, ನೆಹರು ಯುವ ಕೇಂದ್ರ(8075142711).
ದೇಶೀಯ ವಿದ್ಯಾಶಾಲೆ, ಪೆಸಿಟ್, ಜವಾಹರಲಾಲ್ ನೆಹರು ತಾಂತ್ರಿಕ ಕಾಲೇಜು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಇತರೆ ವಿದ್ಯಾಲಯಗಳಲ್ಲಿಯೂ ಸಹ ಕಾರ್ಯಕ್ರಮ ನಡೆಸಿ ಯಶಸ್ವಿಗೊಳಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ ತಿಳಿಸಿದ್ದಾರೆ.

error: Content is protected !!