ಶಿವಮೊಗ್ಗ ಅಕ್ಟೋಬರ್ 11: 2022-23 ನೇ ಸಾಲಿನ ಕೇಂದ್ರ ಪುರಸ್ಕøತ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಘಟಕಗಳಡಿ ಸೌಲಭ್ಯ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಕೃಷಿಕರು, ಮೀನುಗಾರರು, ನೋಂದಾಯಿತ ಮೀನುಗಾರಿಕೆ ಸಹಕಾರ ಸಂಘಗಳು, ಎಫ್ಎಫ್ಪಿಒಗಳು ಅಕ್ಟೋಬರ್ 31 ರೊಳಗೆ ಆಯಾ ತಾಲ್ಲೂಕುಗಳ ಮೀನುಗಾರಿಕೆ ಕಚೇರಿಗಳಿಗೆ ಅರ್ಜಿ ಸಲ್ಲಿಸಬಹುದು.
ಮೀನು ಕೃಷಿ ಕೊಳಗಳ ನಿರ್ಮಾಣ ಮತ್ತು ಹೂಡಿಕೆ ವೆಚ್ಚಕ್ಕೆ ಸಹಾಯಧನ(ಹೆಕ್ಟೇರ್ಗಳಲ್ಲಿ), ಮೀನುಮರಿ ಪಾಲನಾ ಕೊಳಗಳ ನಿರ್ಮಾಣಕ್ಕೆ ಸಹಾಯಧನ, ಬೃಹತ್ ಆರ್ಎಎಸ್ ಘಟಕ ನಿರ್ಮಾಣಕ್ಕೆ ಸಹಾಯಧನ, ಮಧ್ಯಮ ಆರ್ಎಎಸ್ ಘಟಕ ನಿರ್ಮಾಣಕ್ಕೆ ಸಹಾಯಧನ, ಸಣ್ಣ ಆರ್ಎಎಸ್ ಘಟಕ ನಿರ್ಮಾಣಕ್ಕೆ ಸಹಾಯಧನ, ಬ್ಯಾಕ್ಯಾರ್ಡ್ ಆರ್ಎಎಸ್ ಘಟಕ ನಿರ್ಮಾಣಕ್ಕೆ ಸಹಾಯಧನ, 10 ಟನ್ ಮತ್ತು 30 ಟನ್ ಸಾಮಥ್ರ್ಯದ ಐಸ್(Iಅಇ Pಐಂಓಖಿ) ಪ್ಲಾಂಟ್ ನಿರ್ಮಾಣಕ್ಕೆ ಸಹಾಯಧನ, ಮೋಟಾರ್ ಸೈಕಲ್ ಮತ್ತು ಐಎಸ್ ಬಾಕ್ಸ್ ಖರೀದಿಗೆ ಸಹಾಯಧನ, ಬ್ಯಾಕ್ಯಾರ್ಡ್ ಅಲಂಕಾರಿಕ ಮೀನು ಪಾಲನಾ ಘಟಕ ನಿರ್ಮಾಣಕ್ಕೆ ಸಹಾಯಧನ, ತ್ರಿಚಕ್ರ ವಾಹನ ಮತ್ತು ಐಸ್ ಬಾಕ್ಸ್ ಖರೀದಿಗೆ ಸಹಾಯಧನ, ಲೈವ್ ಫಿಶ್ ವೆಂಡಿಂಗ್ ಸೆಂಟರ್ಗೆ ಸಹಾಯಧನ, ಫಿಶ್ ಕಿಯೋಸ್ಕ್ ನಿರ್ಮಾಣಕ್ಕೆ ಸಹಾಯಧನ ಘಟಕಗಳಡಿ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ವಿವರಗಳಿಗೆ ತಾಲ್ಲೂಕುಗಳ ಮೀನುಗಾರಿಕೆ ಕಚೇರಿಗಳಾದ ಶಿವಮೊಗ್ಗ ಮೊ.ಸಂ: 9986040981, ಭದ್ರಾವತಿ 9743370815, ಶಿಕಾರಿಪುರ 9535386449, ಸಾಗರ ಮತ್ತು ಹೊಸನಗರ 9538044365, ಸೊರಬ 9538044365, ತೀರ್ಥಹಳ್ಳಿ 7411174772 ನ್ನು ಸಂಪರ್ಕಿಸಬಹುದೆಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.