ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆಯ ಹೊನ್ನೆ ಮರಡುವಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಾಹಸ ಸಮನ್ವಯ ಕೇಂದ್ರ, ಆಶ್ರಯದಲ್ಲಿ ಅಕ್ಟೋಬರ್ ಎಂಟು ಮತ್ತು 9ರಂದು ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಈ ಸಂಬಂಧ ಆಯೋಜಿಸಿದ್ದ ಕಥಾ ಗೋಷ್ಠಿಯನ್ನು ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯ ಮಾರ್ಷಲ್ ಶರಾಮ್ ಉದ್ಘಾಟಿಸಿದರು
ಶರಾವತಿ ಹಿನ್ನಿರಿನ ನಡುಗಡ್ಡೆಯಲ್ಲಿ ಕಥಾ ಗೋಷ್ಠಿ ನಡೆದಿದ್ದು ಮಲೆನಾಡಿನ ಮುಳುಗಡೆಯ ಕಥೆ ವ್ಯಥೆ ಇಲ್ಲಿಯ ಸಾಮಾಜಿಕ ಸಮಸ್ಯೆ ರೈತಪಿ ಜನರು ಎದುರಿಸುತ್ತಿರುವ ಸವಾಲುಗಳು ಹೀಗೆ ಹತ್ತು ಹಲವು ವಿಚಾರಗಳನ್ನು ಒಳಗೊಂಡಂತೆ ಕರ್ನಾಟಕದ ವಿವಿಧ ಮೂಲಗಳಿಂದ ಆಗಮಿಸಿದ್ದ ಕಥೆಗಾರರು ತಮ್ಮ ಕಥೆಯ ಮೂಲಕ ಅನಾವರಣ ಗೊಳಿಸಿದರು ತಾವು ಬರೆದ ಕಥೆಯ ವಸ್ತುವಿನ ಪ್ರದೇಶದಲ್ಲಿಯೇ ನಿಂತು ಕಥೆ ಓದುವ ವಿಶಿಷ್ಟ ಕಾರ್ಯಕ್ರಮ ನಡೆಯಿತು
ನಾಗೇಶ್ ಹೆಗಡೆ ಪರಿಸರವಾದಿ ಮಾತನಾಡಿ
ಪಶ್ಚಿಮಘಟ್ಟದ ಮಳೆಗಾಡುಗಳು ತಮ್ಮ ಜೀವ ವೈವಿಧ್ಯತೆಯಿಂದಲೇ ಹೆಸರಾಗಿದೆ ಹಾಗೆಯೇ ಮಾನವನ ಮಹಾದಾಸಿಗೆ ಅಪಾಯದ ಹಂಚಿಗೂ ಸಿಲುಕಿದೆ ಹೊಸದಾಗಿ ಪ್ರಕೃತಿಯನ್ನು ಸೃಷ್ಟಿಸುತ್ತೇವೆ ಎನ್ನುವುದು ಕಷ್ಟ ಸಾಧ್ಯ, ಇರುವಲ್ಲಿಯೇ ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕು ಎಂದರು
ಮಾರ್ಷಲ್ ಶರಾಮ್ ಅಕಾಡೆಮಿ ಸದಸ್ಯರು
ನಾವು ಬಾಳಿ ಬದುಕಿದ ಪ್ರದೇಶದ ವಿಚಾರವನ್ನು ಇಟ್ಟುಕೊಂಡು ಕಥೆಯನ್ನಾಗಿಸುವುದು ಇಲ್ಲಿಯ ಪ್ರಕೃತಿ ಪರಿಸರ ಸಾಹಿತಿಗಳಿಗೆ ಕಥಾವಸ್ತು ಆಗಿದೆ ಇಲ್ಲಿಯ ಪರಿಸರ ಜೀವವಿದ್ಯತೆ ಕಥೆಗಳಾಗಿ ಪ್ರಾಮುಖ್ಯತೆ ಪಡೆದಿದೆ ಎಂದು ತಿಳಿಸಿದರು
ಸಾಹಿತಿ ವಿ ಗಣೇಶ್ ಡಿ ಮಂಜುನಾಥ್ ಚೀ ನಾಗೇಶ್ ಶ್ರೀಧರ್ ಇತರರು ಕಥಾ ವಾಚನ ನಡೆಸಿಕೊಟ್ಟರು
ಕಾರ್ಯಕ್ರಮದಲ್ಲಿ ಭಾರತೀಯ ಸಾಹಸ ಸಮನ್ವಯ ಕೇಂದ್ರದ ಎಸ್ಎಲ್ ಏನ್ ಸ್ವಾಮಿ, ನಮಿತೊಕಾಮ್ದಾರ್ ಶ್ರೀಕಂಠ ಕೂಡಗಿ, ವಿಟಿ ಸ್ವಾಮಿ ಇತರರು ಹಾಜರಿದ್ದರು