ನಮ್ಮ ನಾಡಿನ ಹೆಮ್ಮೆಯ ಕಿತ್ತೂರು ಸಾಮ್ರಾಜ್ಯದ ವೀರವನಿತೆ “ರಾಣಿ ಚೆನ್ನಮ್ಮ” ತನ್ನ ವೀರತ್ವದ ಹೋರಾಟದ ಮೂಲಕ ಬ್ರಿಟಿಷರ ಜಂಗಾಬಲ ಅಡಗಿಸಿದ ಧೀರ ಸ್ವಾತಂತ್ರ್ಯ ಹೋರಾಟಗಾರ್ತಿಯ ಇತಿಹಾಸ ಜಗತ್ತಿಗೆ ಪ್ರಚುರಪಡಿಸಲು ರಾಜ್ಯ ಸರ್ಕಾರ ಅದ್ದೂರಿಯಾಗಿ ನಡೆಸಲು ಉದ್ದೇಶಿಸಿರುವ ಐತಿಹಾಸಿಕ “ಕಿತ್ತೂರು ಉತ್ಸವ-2022” ರ ಅಂಗವಾಗಿ ರಾಜ್ಯದಾದ್ಯಂತ ವೀರಜ್ಯೋತಿ ಯಾತ್ರೆಯು ತೆರಳುತ್ತಿದ್ದು, ಇಂದು ರಾಜ “ಶಿವಪ್ಪ ನಾಯಕ” ನ ಕರ್ಮಭೂಮಿಯಾದ ಶಿವಮೊಗ್ಗಕ್ಕೆ “ವೀರ ಜ್ಯೋತಿ” ಯು ಆಗಮಿಸಿದ ಸಂದರ್ಭದಲ್ಲಿ ಸೂಡಾದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಎಸ್.ಎಸ್. ಜ್ಯೋತಿಪ್ರಕಾಶ್ ಅವರು ನಗರದ ನಿರೀಕ್ಷಣಾ ಮಂದಿರದಲ್ಲಿ ಹಾಜರಿದ್ದು, ಸಮಾಜದ ಪ್ರಮುಖ ಮುಖಂಡರೊಂದಿಗೆ ಬರಮಾಡಿಕೊಂಡು ಪೂಜೆ ನೆರವೇರಿಸಿ ಮುಂದಿನ ಜಿಲ್ಲೆಗೆ ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಶ್ರೀ ಆಯನೂರು ಮಂಜುನಾಥ್ ಅವರು, ಅಖಿಲ ಭಾರತ ವೀರಶೈವ ಲಿ೦ಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಶ್ರೀ ರುದ್ರಮುನಿ ಸಜ್ಜನ್ ಅವರು, ಮಾಜಿ ಶಾಸಕರ ವೇದಿಕೆಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಅವರು ಸೇರಿದಂತೆ ಸಮುದಾಯದ ಹಲವಾರು ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

error: Content is protected !!