ರಾಜ್ಯ ಸರ್ಕಾರವು ಪ್ರವಾಸೋದ್ಯಮ ಅಭಿವೃದ್ದಿ ಪಡಿಸಲು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಮೂರು ಜಿಲ್ಲೆಗಳು ಸೇರಿ ಚಿಕ್ಕಮಗಳೂರು ಜಿಲ್ಲೆಯ ಕೈಮರದಲ್ಲಿರುವ ಸಿಲ್ವರ್ ಸ್ಕೈ ರೆಸಾರ್ಟ್ನಲ್ಲಿ ಪ್ರವಾಸೋದ್ಯಮ ಉದ್ದಿಮೆದಾರರಾದ ಹೋಂ ಸ್ಟೇ, ರೆಸಾರ್ಟ್, ಟೂರ್ ಅಪರೇಟರ್ಸ್ರ್ಸ್, ಟ್ಯಾಕ್ಸಿ ಮಾಲಿಕರು, ಟ್ರಾವಲ್ ಏಜೆಂಟ್ರವರುಗಳ ಸಮಾವೇಶವನ್ನು ಏರ್ಪಡಿಸಲಾಗಿತ್ತು ಪ್ರತಿಯೊಂದು ಜಿಲ್ಲೆಯಲ್ಲಿ ಈ ತರಹದ ಸಭೆಯನ್ನು ಮಾಡಲು ಕಷ್ಟವಾಗುವುದರಿಂದ 3 ಜಿಲ್ಲೆಗಳನ್ನು ಸೇರಿಸಿ. ಸಭೆಯಲ್ಲಿ ಚರ್ಚಿಸಲು ಕರ್ನಾಟಕ ಟೂರಿಸಂ ಸೊಸೈಟಿ, ಪ್ರವಾಸೋದ್ಯಮ ಇಲಾಖೆ ಸೇರಿ ಈ ರೀತಿಯ ಕಾರ್ಯಕ್ರಮ “ಕರ್ನಾಟಕ ಟೂರಿಸಂ ಕನೆಕ್ಟ್-2022 ‘ ಹಮ್ಮಿಕೊಂಡಿರುವುದಾಗಿ ತಿಳಿಸಿದರು, ಒಂದೇ ಕಡೆ ಪರಸ್ಪರ ಚರ್ಚಿಸಿ ಇವರ ಕುಂದುಕೊರತೆ ಮತ್ತು ಅಭಿವೃದ್ದಿ ಸಭೆಗಳನ್ನು ಆಯೋಜಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ಅಭಿಮತ ವ್ಯಕ್ತಪಡಿಸಿದರು.
ಪ್ರವಾಸೋದ್ಯಮ ಉದ್ದಿಮೆದಾರರು, ಕರ್ನಾಟಕ ಟೂರಿಸಂ ಸೊಸೈಟಿಗೆ ರೂ.500.00 ಶುಲ್ಕ ಪಾವತಿಸಿ ರಿಜಿಸ್ಟ್ರೇಶನ್ ಮಾಡಿಸಿಕೊಳ್ಳುವುದರ ಮುಖಾಂತರ ಸಂಘಟಿತರಾಗಿ ತಾವು ಸಾಂಧರ್ಬಿಕವಾಗಿ ನಿಮ್ಮ ಉದ್ಯಮದಲ್ಲಿರುವ ತೊಡಕುಗಳನ್ನು ನಿವಾರಿಸಿಕೊಂಡು ಸರ್ಕಾರದಿಂದ ಹಲವು ಯೋಜನೆಗಳ ಮೂಲಕ ಹೆಚ್ಚಿನ ಸೌಲಭ್ಯ ಪಡೆದುಕೊಳ್ಳಲು ಅವಕಾಶವಾಗುತ್ತದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಟಿ. ವೆಂಕಟೇಶ್ ಮಾತನಾಡುತ್ತಾ ಕರೋನದಿಂದ 2 ವರ್ಷಗಳ ಕಾಲ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾದ್ಯವಾಗಲಿಲ್ಲ. ಪ್ರವಾಸೋದ್ಯಮ ಅಭಿವೃಧ್ದಿಯಾಗಲು ಎಲ್ಲರು ಸಂಘಟಿತರಾಗಿ ಕೆಲಸ ಮಾಡಿದಾಗ ಹಾಗೆಯೆ ಅಭಿವೃಧ್ದಿ ಪೂರಕವಾಗಿ ಸರ್ಕಾರದಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಾವು ಸಿದ್ದರಿದ್ದೇವೆ. ಬೇರೆ ಬೇರೆ ದೇಶಗಳಲ್ಲಿ ಪ್ರವಾಸೋದ್ಯಮದಿಂದ ಇಡೀ ದೇಶದ ಆರ್ಥಿಕತೆ ನಿಂತಿದೆ. ನಮ್ಮ ರಾಜ್ಯದಲ್ಲಿ ಸಾಕಷ್ಟು ಪ್ರವಾಸಿ ತಾಣಗಳು ಇವೆ ಅವುಗಳನ್ನು ಅಭಿವೃದ್ದಿಪಡಿಸಲು ಈಗಾಗಲೆ ಕಾರ್ಯೋನ್ಮುಖರಾಗಿದ್ದೇವೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಹೋಂ ಸ್ಟೇ ಮಾಲಿಕರು ರೆಸಾರ್ಟ್, ಹೋಟೆಲ್, ಟ್ರಾವೆಲ್ ಏಜೆಂಟ್ರವರುಗಳು ಸಂವಾದದಲ್ಲಿ ಭಾಗವಹಿಸಿ ಎಲ್ಲಾ ಪ್ರವಾಸಿ ತಾಣಗಳಲ್ಲಿ ಪ್ರವೇಶ ಶುಲ್ಕ ಬೇರೆಬೇರೆಯಾಗಿದ್ದು ಅದನ್ನು ಒಂದೇ ವಿಧಾನದಲ್ಲಿ ವಿಧಿಸಬೇಕು ಹಾಗೂ ಸರಳೀಕೃತಗೊಳಿಸಬೇಕು ಹಾಗೂ ಹೋಂ-ಸ್ಟೇಗಳಿಗೆ ಕಮಿರ್ಷಿಯಲ್ ಟ್ಯಾಕ್ಸ್ ಹಾಗೂ ವಿದ್ಯುಚ್ಛಕ್ತಿಯನ್ನು ಕಮರ್ಷಿಯಲ್ ಚಾರ್ಜ್ಸ್ನಲ್ಲಿ ವಿಧಿಸುತ್ತಿರುವುದರಿಂದ ತುಂಬಾ ನಷ್ಟವಾಗುತ್ತದೆ ಮತ್ತು ಫಾರೆಸ್ಟ್ ಚೆಕ್ಪೋಸ್ಟ್ ಏರಿಯಾಗಳಲ್ಲಿ ಹಲವಾರು ನಿರ್ಬಂಧಗಳನ್ನು ಸರಿಪಡಿಸಲು ಮತ್ತು ಸ್ವಚ್ಚತೆ ಬಗ್ಗೆ ಆದ್ಯತೆ, ಶೌಚಾಲಯಗಳ ಕೊರತೆ ಹೀಗೆ ಹಲವಾರು ಕುಂದುಕೊರತೆಗಳ ಬಗ್ಗೆ ಚರ್ಚಿಸಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಸಮಜಾಯಿಷಿ ನೀಡಿ ಪ್ರಮಾಣಿಕವಾಗಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಮೂರು ಜಿಲ್ಲೆಗಳಿಂದ ಇನ್ನೂರಕ್ಕೂ ಹೆಚ್ಚು ಜನ ಈ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮದಲ್ಲಿ ಟೂರಿಸಂ ಮತ್ತು ಹಾಸ್ಪಿಟಾಲಿಟಿ ಅಡ್ವೈಜರ್ರಾದ ಹೆಚ್.ಟಿ. ರತ್ನಾಕರ್, ಸಿಲ್ವರ್ಸ್ಕೈ ರೆಸಾರ್ಟ್ನ ಮ್ಯಾನೇಜಿಂಗ್ ಪಾರ್ಟ್ನರ್ ಎಂ.ಪಿ. ಚೇತನ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಸಂಘದ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಛೇರ್ಮನ್ ಪ್ರದೀಪ್ ವಿ.ಯಲಿ, ಸಹ-ಕಾರ್ಯದರ್ಶಿ ಜಿ. ವಿಜಯಕುಮಾರ್ ರವರು ಭಾಗವಹಿಸಿದ್ದರು.