ಶಿವಮೊಗ್ಗ, ಸೆ. 23: ನಗರದ ಪ್ರತಿಷ್ಟಿತ ಡಯಾನಾ ಬುಕ್ ಗ್ಯಾಲರಿಯಲ್ಲಿ ಸಾಹಿತ್ಯಕ ವಾತಾವರಣ ಇದೆ. ಇದು ಪುಸ್ತಕ ವ್ಯಾಪಾರವನ್ನು ಮೀರಿದ ಅನುಭಾವ. ಹೀಗಾಗಿ ಇಲ್ಲಿ ಕೆಲ ಕಾಲ ಕಳೆಯುವುದು ವಿಶಿಷ್ಟ ಅನುಭೂತಿ. ಹೀಗಾಗಿ ಈ ಡಯಾನಾ ಬುಕ್ ಗ್ಯಾಲರಿಯಲ್ಲಿ ಮುಂದಿನ ದಿನಗಳಲ್ಲಿ ಸಾಹಿತ್ಯಕ – ಸಾಂಸ್ಕøತಿಕ ವೇದಿಕೆ ಸೃಷ್ಟಿಯಾಗಲಿ ಎಂದು ಹೆಸರಾಂತ ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ ಆಶಿಸಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಶಿವಮೊಗ್ಗೆಗೆ ಬಂದಿದ್ದ ಅವರು, ನಗರದ ಡಯಾನಾ ಬುಕ್ ಗ್ಯಾಲರಿಗೆ ಭೇಟಿ ನೀಡಿ, ಸೇರಿದ್ದ ಪುಸ್ತಕ ಪ್ರಿಯರನ್ನು ಉದ್ದೇಶಿಸಿ ತಮ್ಮ ಇಂಗಿತ ವ್ಯಕ್ತಪಡಿಸಿದ ಅವರು, ಡಯಾನಾ ಬುಕ್ ಗ್ಯಾಲರಿ ಮೂಲಕ ಶಿವಮೊಗ್ಗೆಗೆ ಬರಲು ನನಗೊಂದು ಕಾರಣ ಸಿಕ್ಕಿದೆ ಎಂದು ಮುಕ್ತ ಕಂಠದಿಂದ ಪ್ರಶಂಸಿಸಿದರು.
ಡಾ. ಯು. ಆರ್. ಅನಂತಮೂರ್ತಿ, ಭೈರಪ್ಪ ಸೇರಿದಂತೆ ಅನೇಕ ಹಿರಿಯ ಕಿರಿಯ ಲೇಖಕರು, ಕನ್ನಡದ ಚಿಂತಕರು ಈ ಬುಕ್ ಗ್ಯಾಲರಿಗೆ ಬಂದು ತಮ್ಮ ತಮ್ಮ ವಿಚಾರಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಈ ಪರಂಪರೆ ನಿಲ್ಲಬಾರದು ಎಂದ ಅವರು, ನಾಡಿನ ಕಲಾವಿದರು, ಲೇಖಕರು ಇಲ್ಲಿಗೆ ಬಂದು ಸಂವಾದ ನಡೆಸುವಂತಾಗಬೇಕು. ಸೇರುವ ಜನರ ಸಂಖ್ಯೆಗಿಂತ, ಮಂಡಿಸುವ ವಿಚಾರಗಳು ಮುಖ್ಯವಾಗಬೇಕು. ಈ ನಿಟ್ಟಿನಲ್ಲಿ ಗ್ಯಾಲರಿಯಲ್ಲಿ ನಿತ್ಯ ಚಟುವಟಿಕೆಗಳು ನಡೆಯುವಂತಾಗಬೇಕು ಎಂದು ಆಶಿಸಿದರು.
ಡಯಾನ ಬುಕ್ ಗ್ಯಾಲರಿಯ ಭೇಟಿಯಿಂದ ನನ್ನ ಶಿವಮೊಗ್ಗ ಭೇಟಿ ಪರಿಪೂರ್ಣವಾಯಿತು ಎಂದ ಅವರು, ಹಾಗೆ ನೋಡಿದರೆ, ನಾನು ಯಾವುದೇ ಊರಿಗೆ ಹೋದರು, ಅಲ್ಲಿಯ ಪುಸ್ತಕ ಮಳಿಗೆಗೆ ಭೇಟಿ ನೀಡುವ ಪರಿಪಾಠ ರೂಢಿಸಿಕೊಂಡಿದ್ದೇನೆ. ಅತ್ಯಂತ ಆಸ್ಥೆಯಿಂದ ಈಶ್ವರ್‍ರವರು, ಪುಸ್ತಕ ಮಳಿಗೆಯನ್ನು ರೂಪಿಸಿದ್ದಾರೆ. ಇದರ ಪ್ರಯೋಜನ ಓದುಗರಿಗೆ ದಕ್ಕಿ, ಪುಸ್ತಕ ಸಂಸ್ಕøತಿ ಉಳಿದು ಬೆಳೆಯುಂತಾಗಲಿ ಎಂದರು.
ಈ ಸಂದರ್ಭದಲ್ಲಿ ಡಯಾನಾ ಬುಕ್ ಗ್ಯಾಲರಿಯ ಮಾಲೀಕರಾದ ಕೆ. ಎಲ್. ಈಶ್ವರ್, ಕೆ. ಎಲ್. ಶಿವಾನಂದ್, ಈ. ಅಂಕಿತ, ಕಮಲಾ ನೆಹರೂ ಕಾಲೇಜಿನ ಪ್ರಾಚಾರ್ಯ ಡಾ. ಹೆಚ್. ಎಸ್. ನಾಗಭೂಷಣ, ಚಾರ್ಟ್‍ರ್ಡ್ ಅಕೌಂಟೆಂಟ್ ಶರತ್, ಪೆÇ್ರ. ವಿಜಯ ಕುಮಾರ್, ನೃಪತುಂಗ ಮೊದಲಾದವರು ಉಪಸ್ಥಿತರಿದ್ದರು.
ವಿಶ್ವೇಶ್ವರ ಭಟ್‍ರವರು ಡಯಾನಾ ಬುಕ್ ಗ್ಯಾಲರಿಯ ನಾಲ್ಕೂ ಅಂತಸ್ತುಗಳಿಗೆ ಭೇಟಿ, ಪುಸ್ತಕಗಳ ಜೋಡಣೆ ಹಾಗೂ ಅಚ್ಚುಕಟ್ಟಾದ ವ್ಯವಸ್ಥೆ ಬಗ್ಗೆ ಮೆಚ್ಚುಗೆ ನಡೆಸಿದರಲ್ಲದೆ, ಪುಸ್ತಕ ಪ್ರಿಯರೊಂದಿಗೆ, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.

error: Content is protected !!