ಶಿವಮೊಗ್ಗ: ಇದೇ ಸೆಪ್ಟೆಂಬರ್ 22ರ ಗುರುವಾರ ಹಾಗೂ 23ರ ಶುಕ್ರವಾರ ನಗರದ ಬಿ.ಹೆಚ್. ರಸ್ತೆಯ ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಪಕ್ಷ ಮಾಸದ ಪ್ರಯುಕ್ತ ಖ್ಯಾತ ಪಂಡಿತ, ವಾಗ್ಮಿ ಶ್ರೀ ಆಯನೂರು ಮಧುಸೂದನಾಚಾರ್ಯ ಅವರಿಂದ ಗರುಡ ಪುರಾಣ ಎಲ್ಲರಿಗಾಗಿ ಎಂಬ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ.

ಅಜೇಯ ಸಂಸ್ಕೃತಿ ಬಳಗ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಚುಟುಕಾದ ಉದ್ಘಾಟನಾ ಸಮಾರಂಭದ ಮೂಲಕ ಆರಂಭಿಸಲಾಗುವುದು.

ಉದ್ಘಾಟಕರಾಗಿ ಕೆಎಸ್ಎಸ್ ಐಡಿಸಿ ಮಾಜಿ ಉಪಾಧ್ಯಕ್ಷರಾದ ಎಸ್. ದತ್ತಾತ್ರಿ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ನಟರಾಜ ಭಾಗವತ್ ಪಾಲ್ಗೊಳ್ಳಲಿದ್ದಾರೆ.

ಉಪನ್ಯಾಸ ಕಾರ್ಯಕ್ರಮವು ಎರಡೂ ದಿನ ಸಂಜೆ 6.15ರಿಂದ 8.15ರವರೆಗೆ ನಡೆಯಲಿದ್ದು, ಆಸಕ್ತರೆಲ್ಲರನ್ನೂ ಅಧ್ಯಕ್ಷರಾದ ಜೆ. ರಾಮಾಚಾರ್ ಹಾಗೂ ಕಾರ್ಯದರ್ಶಿ ಆರ್. ಅಚ್ಯುತರಾವ್ ಸ್ವಾಗತಿಸಿದ್ದಾರೆ.

error: Content is protected !!