ಶಿವಮೊಗ್ಗ, ಮೇ 17: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಮೇ 18 ರಂದು ಬೆಂಗಳೂರಿನ ಜಿ.ಕೆ.ವಿಕೆ ಕೇಂದ್ರವೂ ಸೇರಿದಂತೆ ರಾಜ್ಯದ ಎಲ್ಲಾ 15 ಕೇಂದ್ರಗಳಲ್ಲಿ ಕೃಷಿ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುವುದು.
ಮಾನಸಗಂಗೋತ್ರಿಯ ವಾಕ್ ಮತ್ತು ಶ್ರವಣದೋಷ ಸಂಸ್ಥೆಯು ಬಿಎಎಸ್‍ಎಲ್‍ಎಫ್ ಕೋರ್ಸ್, ಆಯುಷ್ ಕೋರ್ಸ್‍ಗಳಿಗೆ ಸೇರಿದಂತೆ ದ್ವಿತೀಯ ಪಿ.ಯು.ಸಿ. ನಂತರದ ಇತರೆ ವೃತ್ತಿಪರ ಕೋರ್ಸ್‍ಗಳಿಗೆ ಮೇ-18 ರಂದು ಪರೀಕ್ಷೆಗಳಿಗೆ ಹಾಜರಾಗಲಿರುವ ಅಭ್ಯರ್ಥಿಗಳಿಗೆ ಮೇ 19 ರಂದು ಬೆಂಗಳೂರು ಜಿ.ಕೆ.ವಿ.ಕೆ ಕೇಂದ್ರದಲ್ಲಿ ಮಾತ್ರ ಮಧ್ಯಾಹ್ನ 2.00 ರಿಂದ ಕೃಷಿ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಡಲಾಗುವುದು. ಮೇ 18ರಂದು ಕೃಷಿ ಪ್ರಾಯೋಗಿಕ ಪರೀಕ್ಷೆಯ ಹೊರತಾಗಿ ಬೇರೆ ಪರೀಕ್ಷೆಗಳನ್ನು ಬರೆದಿರುವವರು ಕಡ್ಡಾಯವಾಗಿ ಅಂತಹ ದಾಖಲೆ ಅಥವಾ ಪುರಾವೆ ಒದಗಿಸಿದವರಿಗೆ ಮಾತ್ರ ಅನುಮತಿ ನೀಡಲಾಗುವುದು.
ಮೇ 19ರಂದು ಕೃಷಿ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಮೇ 13 ರಿಂದ 15ರ ಒಳಗೆ ಕೃಷಿ ಸಂಬಂಧಿತ ದಾಖಲೆಗಳನ್ನು ಯಾವುದೇ ಕೇಂದ್ರದಲ್ಲಿ ಈಗಾಗಲೇ ಪರಿಶೀಲನೆ ಮಾಡಿಸಿಕೊಂಡು, ಕೃಷಿ ಪ್ರಾಯೋಗಿಕ ಪರೀಕ್ಷೆಗೆ ಅರ್ಹವಾಗಿರುವುದಕ್ಕೆ ಪ್ರಮಾಣೀಕೃತ ದಾಖಲೆನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಇಲ್ಲವಾದಲ್ಲಿ ಕೃಷಿ ಪ್ರಾಯೋಗಿಕ ಪರೀಕ್ಷೆಗೆ ಅಭ್ಯರ್ಥಿಗಳು ಅನರ್ಹರಾಗಿರುತ್ತಾರೆ. ಮೇ 19 ರಂದು ರಾಜ್ಯದ ಇತರೆ ಯಾವುದೇ ಕೃಷಿ ಪ್ರಾಯೋಗಿಕ ಕೇಂದ್ರಗಳಲ್ಲಿ ಕೃಷಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದಿಲ್ಲ ಮತ್ತು ಅಂದು ಯಾವುದೇ ಕೃಷಿ ಸಂಬಂಧಿತ ದಾಖಲಾತಿಗಳ ಪರಿಶೀಲನೆಯನ್ನು ನಡೆಸುವುದಿಲ್ಲವೆಂದು ವಿವಿಯ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !!