ಕೇಂದ್ರ ಸರ್ಕಾರದ ಸ್ವಚ್ಚ ಭಾರತ ಮಿಷನ್ ಕಾರ್ಯಕ್ರಮದ ಅಡಿಯಲ್ಲಿ ಶಿರಾಳಕೊಪ್ಪ ಪುರಸಭೆಯನ್ನು ಓಡಿಎಫ್ + ಎಂದು ಘೋಷಣೆ ಮಾಡಬೇಕಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ಆಕ್ಷೇಪಣೆ ಹಾಗೂ ಸಲಹೆ ಸೂಚನೆಗಳಿದ್ದಲ್ಲಿ ಲಿಖಿತವಾಗಿ ಶಿರಾಳಕೊಪ್ಪ ಪುರಸಭೆ ಕಚೇರಿಗೆ ಈ ಪ್ರಕಟಣೆ ದಿನಾಂಕದಿಂದ 15 ದಿನಗಳ ಒಳಗೆ ಖುದ್ದಾಗಿ ಅಂಚೆ/ಇಮೇಲ್ ಮೂಲಕವಾಗಿ ಸಲ್ಲಿಸಬೇಕು. ನಂತರ ಬಂದ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ಆರೋಗ್ಯ ಶಾಖೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.