ಸರ್. ಎಂ ವಿ ಅಭಿಮಾನಿ ಬಳಗ ತಾಲೂಕು ಬ್ರಾಹ್ಮಣ ಸೇವಾ ಸಂಘ ಹಾಗೂ ಅನೇಕ ಸಂಘ ಸಂಸ್ಥೆಗಳ ವತಿಯಿಂದ ನಿರ್ಮಾಣ ಮಾಡಿದಂತಹ ಸರ್. ಎಂ ವಿಶ್ವೇಶ್ವರಯ್ಯನವರ ಪುತ್ತಳಿಯನ್ನು ಮೈನ್ ಮೆಡ್ಲಿ ಸ್ಕೂಲ್ ಆವರಣದಲ್ಲಿ ಅನಾವರಣ ಗೊಳಿಸಿ ಮಾತನಾಡಿದರು
ಸರ್ ಎಂ ವಿ ಅವರು ಪ್ರಪಂಚದಲ್ಲಿರುವ ಮೇಧಾವಿಗಳಲ್ಲಿ ಪ್ರಥಮ ಸ್ಥಾನದಲ್ಲಿ ಇದ್ದಾರೆ ಇಡೀ ಪ್ರಪಂಚಕ್ಕೆ ಅವರ ಕೊಡುಗೆ ಅಮೂಲ್ಯವಾದದ್ದು ಶಾಲೆಯ ಮಕ್ಕಳೆಲ್ಲರೂ ಅವರು ನಡೆದು ಬಂದಂತಹ ದಾರಿ ಎನ್ನು ಅರ್ಥೈಸಿಕೊಳ್ಳಬೇಕು ವಿಶ್ವೇಶ್ವರಯ್ಯನವರ ಮಾದರಿಯಲ್ಲಿ ವಿದ್ಯೆಯನ್ನು ಕಲಿತು ವಿದ್ಯಾರ್ಥಿಗಳು ಜೀವನದಲ್ಲಿ ಬಹಳ ಉತ್ತುಂಗಕ್ಕೆ ಬೆಳೆಯಲಿ ಎಂಬ ದೃಷ್ಟಿಯಿಂದ ಈ ಜಾಗದಲ್ಲಿ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ ಬೇರೆ ಎಲ್ಲಾ ಇಂಜಿನಿಯರ್ಸ್ಗಳಿಗೆ ಸರ್ ಎಂ ವಿ. ಯವರು ಮಾದರಿಯಾಗಿದ್ದರು ಅವರ ಕಾಲದಲ್ಲಿ ಕೇವಲ ಸೇತುವೆ ಕೈಗಾರಿಕೆ ಡ್ಯಾಮ್ಗಳಷ್ಟೇ ನಿರ್ಮಾಣ ಮಾಡದೆ ಮಹಾನ್ ರಾಷ್ಟ್ರಭಕ್ತರಾಗಿ ಇಡೀ ರಾಷ್ಟ್ರವನ್ನು ನಿರ್ಮಾಣ ಮಾಡಿದಂತಹ ಕೊಡುಗೆ ಅವರಿಗೆ ಸಲ್ಲುತ್ತದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷರಾದ ವೆಂಕಟೇಶ್ ರಾವ್ ಅವರು ಮಾತನಾಡಿ ಹಲವಾರು ವರ್ಷಗಳ ಹಿಂದೆ ನಮ್ಮ ಸಂಘದ ಮಾಜಿ ಅಧ್ಯಕ್ಷರಾದ ರವಿಶಂಕರ್ ಅವರ ನೇತೃತ್ವದಲ್ಲಿ ಪುತ್ತಳಿಯನ್ನು ತಾಲೂಕ್ ಬ್ರಾಹ್ಮಣ ಸೇವಾ ಸಂಘದ ವತಿಯಿಂದ ಮಾಡಿಸಲಾಗಿತ್ತು ನಮ್ಮ ಗಾಯತ್ರಿ ದೇವಸ್ಥಾನದಲ್ಲೇ ಪ್ರತಿ ವರ್ಷ ಸರಿ ಎಂ. ವಿ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿತ್ತು ಆದರೆ ಅದನ್ನು ನಗರ ಭಾಗದಲ್ಲಿ ಇಡಲು ಸೂಕ್ತವಾದಂತಹ ಸಮಯ ಜಾಗ ಬಂದಿರಲಿಲ್ಲ ಈಶ್ವರಪ್ಪನವರ ಸಹಾಯದಿಂದ ಪುತ್ತಳಿ ಸರ್ ಎಂ.ವಿ ಅವರ ಜನ್ಮದಿನದೊಂದೇ ಅನಾವರಣಗೊಳ್ಳುತ್ತಿದ್ದು ಬಹಳ ಸಂತೋಷವಾಗಿದೆ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರಿನ ನಾಮಫಲಕವನ್ನು ಆದಷ್ಟು ಬೇಗ ರಸ್ತೆ ಮಾರ್ಗದಲ್ಲಿ ಹಾಕಿಸಬೇಕು ಎಂದು ಮನವಿ ಮಾಡಿದರು
ಜಿಲ್ಲಾ ಬ್ರಾಹ್ಮಣ ಮಹಾಸಭಾಧ್ಯಕ್ಷರಾದ ನಟರಾಜ್ ಭಗವತ್ ಅಂಕಣಕಾರರಾದ ಸುಂದರ್ ರಾಜ್ ಕೆ ಎಸ್ ಎಸ್ ಐ ಡಿ ಸಿ ಮಾಜಿ ಉಪಾಧ್ಯಕ್ಷರಾದ ದತ್ತಾತ್ರಿ ಕರ್ನಾಟಕ ಬ್ಯಾಂಕ್ ಎಜಿಎಂ ಹಾಯವಧನ ಉಪಾಧ್ಯಾಯ ತಾಲೂಕು ಬ್ರಾಹ್ಮಣ ಸೇವಾ ಸಂಘದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿಶಂಕರ್ ಉಪಸ್ಥಿತರಿದ್ದರು