ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಸಿಡಾಕ್ ದಾವಣಗೆರೆ ಸಹಯೋಗದೊಂದಿಗೆ ಒಂದು ದಿನದ ಉದ್ಯಮಶೀಲತಾ ತಿಳುವಳಿಕೆ ಶಿಭಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶ್ರೀ ಆರ್. ಪಿ ಪಾಟೀಲ್, ಜಂಟಿ ನಿದೇಶಕರು, ಸಿಡಾಕ್, ದಾವಣಗೆರೆ ಸಿಡಾಕ್ನ ಕಾರ್ಯವೈಖರಿ ಬಗ್ಗೆ, ಸಿಡಾಕ್ನಲ್ಲಿ ಲಭ್ಯವಿರುವ ತರಬೇತಿಗಳ ಬಗ್ಗೆ ಹಾಗೂ ಸದೃಡ ಉದ್ಯಮಿಯಾಗಲು ಕೇವಲ ಹುಟ್ಟಿನಿಂದ ಬರಬೇಕಾಗಿಲ್ಲ ಅದನ್ನು ತರಬೇತಿಯ ಮೂಲಕವೂ ಪಡೆಯಬಹುದು. ದೇಶದ ಆರ್ಥಿಕತೆಗೆ ಉದ್ದಿಮೆದಾರರ ಕೊಡುಗೆ ಅತ್ಯಂತ ಮಹತ್ವದ್ದಾಗಿರುತ್ತದೆ. ಉದ್ದಿಮೆದಾರರಾಗಬೇಕೆಂದು ಆಗಮಿಸಿದ ಎಲ್ಲಾ ಶಿಬಿರಾರ್ಥಿಗಳಿಗೂ ಅಭಿನಂದನೆ ಸಲ್ಲಿಸಿ ಯಶಸ್ವಿ ಉದ್ದಿಮೆದಾರರಾಗಲು ಪ್ರೋತ್ಸಾಹಿಸಿದರು.
ಮುಖ್ಯ ಅಥಿತಿಗಳಾದ ಶ್ರೀ ಗಣೇಶ್ ಆರ್. ಜಂಟೀ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಮೊಗ್ಗ ರವರು ಮಾತನಾಡಿ “ಉದ್ಯಮಿಯಾಗು ಉದ್ಯೋಗ ನೀಡು” ಎಂಬ ಕರ್ನಾಟಕ ಸರ್ಕಾರದ ಘೋಷಣೆಯಂತೆ ಸರ್ಕಾರದಿಂದ ಹಲವಾರು ಉಪಯುಕ್ತ ಯೋಜನೆಗಳು ಇದ್ದು, ಶಿಭಿರಾರ್ಥಿಗಳು ಇವುಗಳ ಪೂರ್ಣಪ್ರಮಾಣದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಇನ್ನೋರ್ವ ಮುಖ್ಯ ಅಥಿತಿಗಳಾದ ಡಾ. ಪವಿತ್ರ ಕೆ.ಎಸ್ ಮನೋವೈದ್ಯರು ಮಾತನಾಡಿ ಉದ್ಯೋಗ ನಡೆಸುವವರು ಯಾವುದೇ ಸಮಯದಲ್ಲೂ ಕೂಡ ಧೃತಿಗೆಡದೆ ಎಷ್ಟೇ ಕಷ್ಟ-ನಷ್ಟಗಳು ಬಂದರೂ ಛಲಬಿಡದೆ ಉದ್ಯಮವನ್ನು ಮುನ್ನೆಡೆಸಿಕೊಂಡು ಹೋಗುವ ಮನೋಸ್ಥೈರ್ಯದಿಂದಿರುವುದು ಬಹಳ ಮುಖ್ಯ ಎಂದು ತಿಳಿಸಿ ಶಿಭಿರದಲ್ಲಿ ಹೆಣ್ಣಮಕ್ಕಳು ಕೂಡಾ ಗಮನಾರ್ಹ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದನ್ನು ಪ್ರಶಂಶಿಸಿ, ಬರುವ ದಿನಗಳಲ್ಲೂ ಕೂಡಾ ಹೆಣ್ಣುಮಕ್ಕಳು ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗದೆ ಸ್ವತ: ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕೆಂದು ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಯಲ್ಲಿ ನವ ಉದ್ಯಮಿಗಳು ಯಾವುದೇ ತೆರನಾದ ಸಮಸ್ಯೆಗಳು ಇದ್ದಲ್ಲಿ ನಮ್ಮ ಸಂಘವು ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ತಿಳಿಸಿ ಸರ್ಕಾರದ ಯೋಜನೆಗಳಲ್ಲಿ ಒಂದಾದ “ಉದ್ಯಮಿಯಾಗು ಉದ್ಯೋಗ ನೀಡು” ಇದನ್ನು ಸಹಕಾರಗೊಳಿಸಬೇಕೆಂದು ತಿಳಿಸಿದರು.
ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ದಿ ಸಮಿತಿ ಛೇರ್ಮನ್ರಾದ ಶ್ರೀ ಗಣೇಶ್ ಎಂ. ಅಂಗಡಿಯವರು ಪ್ರಸ್ತಾವಿಕ ಮಾತನಾಡಿ ನಮ್ಮ ಸಂಘವು ಹಲವಾರು ಸಮಾಜಮುಖಿ ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇತ್ತೀಚೆಗೆ ಸಂಘದ ವತಿಯಿಂದ ಡಿ.ವಿ.ಎಸ್ ಸಂಸ್ಥೆಯೊಂದಿಗೆ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಉದ್ಯೋಗ ವಂಚಿತರು, ಜೀವನೋಪಾಯಕ್ಕೆ ಚಿಂತಿಸದೆ ಉದ್ಯಮಿಯಾಗಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ರಮೇಶ್ ಸಿ.ಎಲ್ ರವರು ತರಬೇತಿ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ಪ್ರಯೋಜಕರಾದ ಕೆನರಾ ಬ್ಯಾಂಕಿನ ಮಾರ್ಕೆಟಿಂಗ್ ಆಫೀಸರ್ ಆದ ಶ್ರೀ ರಿತೇಶ್ ಬಾಗಡೆಯವರು ಶಿಭಿರಾರ್ಥಿಗಳಿಗೆ ಬ್ಯಾಂಕ್ನಿಂದ ಆರ್ಥಿಕ ಸವಲತ್ತುಗಳು ಮತ್ತು ಸಹಾಯಧನ ಪಡೆಯುವ ಬಗ್ಗೆ ಮಾಹಿತಿ ನೀಡದರು.
ಸಿಡಾಕ್ನ ಶ್ರೀ ಜಿ.ಕೆ ಅವಿನಾಶ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷರಾದ ಶ್ರೀ ಗೋಪಿನಾಥ್ ಬಿ.ಸ್ವಾಗತಿಸಿದರು. ಶ್ರೀ ವಸಂತ್ ಹೋಬಳಿದಾರ್ ಕಾರ್ಯಕ್ರಮ ವಂದನಾರ್ಪಣೆ ಸಲ್ಲಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಶ್ರೀ ವಾಸುದೇವ ಜೆ.ಆರ್. ಮಾಜಿ ಅಧ್ಯಕ್ಷರಾದ ಶ್ರೀ ಎ,ಆರ್. ಅಶ್ವಥ್ನಾರಾಯಣ ಶೆಟ್ಟಿ, ಜಂಟೀ ಕಾರ್ಯದರ್ಶಿ ಜಿ. ವಿಜಯಕುಮಾರ್, ನಿರ್ದೇಶಕರುಗಳಾದ ಶ್ರೀ ಎಸ್.ಎಸ್. ಉದಯಕುಮಾರ್, ಇ. ಪರಮೇಶ್ವರ್, ಪ್ರದೀಪ್ ವಿ ಯಲಿ, ಮಂಜೇಗೌಡ ಬಿ. ಜಗದೀಶ್ ಮಾತನವರ್, ರಮೇಶ್ ಹೆಗಡೆ, ಹಾಗೂ ಇತರರು ಉಪಸ್ಥಿತರಿದ್ದರು ತರಬೇತಿ ಶಿಭಿರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದರು.