ಸೊರಬ : ಮೌಲ್ಯ ವರ್ಧನೆಯಿಂದ ಆಹಾರ ಗುಣಮಟ್ಟ ಹೆಚ್ಚಿಸಿ ಪೋಷಕಾಂಶಗಳ ಸಮತೋಲನ ಕಾಪಾಡುವಲ್ಲಿ ಮತ್ತು ಆರ್ಥಿಕವಾಗಿ ಸಭಲರಾಗುವಲ್ಲಿ ಮೌಲ್ಯವರ್ಧನೆ ಅತ್ಯವ್ಯಶಕವಾಗಿದೆ ಎಂದು ತಿಳಿಸಿದರು ಅಲ್ಲದೆ, ಉದಾಹರಣೆಗೆ ಸ್ಥಳಿಯ ಬೆಳೆಯಾದ ಭತ್ತದಲ್ಲಿ ಅಕ್ಕಿಯಿಂದ ಹಪ್ಪಳ ತಯಾರಿಕೆ ಹಾಗೂ ಮುಂತಾದ ಮೌಲ್ಯವರ್ಧನೆ ಕೈಗೊಂಡು ಹೆಚ್ಚಿನ ಲಾಭಾಂಶ ಕಾಣಬಹುದು ಹಾಗೆಯೇ ಎಲ್ಲಾ ಆಹಾರ ಬೆಳೆಗಳಲ್ಲಿಯೂ ಮೌಲ್ಯವರ್ಧನೆ ಮಾಡಿ ಉತ್ಕ್ರುಷ್ಟರಾಗಬಹುದು ಎಂದು ಡಾ|| ಜ್ಯೋತಿ ರಾಥೊಡ್ ,ಗೃಹ ವಿಜ್ಞಾನಿ ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ. ತಿಳಿಸಿದರು
ಸಾವಯವ ಪ್ರಮಾಣಿಕರಣ- ಡಾ|| ನಯನ ಇ. ಡಿ ಸಾವಯವ ಪ್ರಮಾಣಿಕರಣ ಅಧಿಕಾರಿಗಳು ಶಿವಮೊಗ್ಗ, ರೈತರು ಸಾವಯವ ಕೃಷಿಕರಾಗುವ ನಿಟ್ಟಿನಲ್ಲಿ ಅದರದೆಯಾದಂತಹ ಪ್ರಮಾಣ ಪತ್ರ ಪಡೆಯುವುದು ಅವಶ್ಯಕವಾಗಿರುತ್ತದೆ. ಇದರಂತೆ ಪ್ರಮಾಣಿಕರಿಸುವ ರೂಪ ರೇಷಗಳನ್ನು ಸವಿಸ್ತಾರವಾಗಿ ಮಾಹಿತಿ ನೀಡಿ, ಸಾವಯವ ರೈತ ನೋಂದಣಿ ಮತ್ತು ಕ್ಷೇತ್ರ ಬೇಟಿ ಮುಂತಾದ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳಾದ ವಿಜಯ ಕುಮಾರ ಬಿ ವಿ, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ಬೊಮ್ಮಲಿಂಗ, ಎಸ್. ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕರುಗಳಾದ ಅಣ್ಣಪ್ಪ ಕೆ, ಯುವರಾಜ್ ಬಿ ಆರ್, ಜ್ಯೋತಿ, ಮಂಜುನಾಥ ಸಾಲಿ ಅವಿನಾಶ ಎ ಮತ್ತು ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.