ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ವತಿಯಿಂದ ಶಿವಮೊಗ್ಗದ ನವಿಲೆಯ ಕೃಷಿ ಮಹಾವಿದ್ಯಾಲಯ ಆವರಣದ ಡಾ. ಎಂ. ಎಸ್. ಸ್ವಾಮಿನಾಥನ್ ಸಭಾಂಗಣದಲ್ಲಿ ಸರಣಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಹಾಗೂ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಟಿ. ಎಸ್. ನಾಗಾಭರಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಕನ್ನಡ ಭಾಷೆಯನ್ನು ನಾವು ಪ್ರೀತಿಸಿ ಕನ್ನಡವನ್ನು ಎತ್ತಿ ಹಿಡಿಯಬೇಕು . ಕರ್ನಾಟಕದಲ್ಲೇ ಇದ್ದು ಕನ್ನಡ ಬಳಸದೆ ಇರುವವರನ್ನು ಪ್ರಶ್ನಿಸಬೇಕು, ಕನ್ನಡ ಮಾತನಾಡದಿದ್ದ ಪಕ್ಷದಲ್ಲಿ ಅವರು ಇಲ್ಲಿ ನೆಲಸಲು ಯೋಗ್ಯರಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಗುರು ಕೇಂದ್ರಿತ ಶಿಕ್ಷಣ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಇಂದಿನ ಅಗತ್ಯವಾಗಿದೆ ಬಿ.ಎಸ್ಸಿ. ಕೃಷಿ ಪದವಿಗಳಲ್ಲ ಕನ್ನಡ ಭಾಷೆಯ ವಿಷಯವನ್ನು ಅಂಕಪಟ್ಟಿಯಲ್ಲಿ ಪರಿಗಣಿಸುವ ಬಗ್ಗೆ ಶೀಘ್ರದಲ್ಲಿ ಕೃಷಿ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.

ಇಂದು ಮನುಷ್ಯ ಯಾಂತ್ರಿಕೃತವಾಗಿ ಬದುಕುತ್ತಿದ್ದು, ಹೆಚ್ಚು ಮೊಬೈಲ್ ಬಳಸುವುದರಿಂದ ಮನುಷ್ಯ ಇಂದು ತನ್ನ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಇದರ ಹಿಂದೆ ದೊಡ್ಡಹುನ್ನಾರವೇ ಅಡಗಿದ್ದು ಮೊಬೈಲ್ ಬಳಕೆಯಿಂದ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದು ಯುವ ಜನತೆ ಇದರಿಂದ ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿದರು. ನಾವು ಬದುಕಿನಲ್ಲಿ ಮುಂದೆ ಏನಾಗಬೇಕು ಎಂಬುದನ್ನು ನಾವೇ ನಿರ್ಧರಿಸುವಂತಾಬೇಕು ಮತ್ತು ಯಾರೊ ಹೇಳಿದ್ದಾರೆ ಅಂದ ಮಾತ್ರಕ್ಕೆ ಅದನ್ನು ಆಯ್ಕೆ ಮಾಡಬಾರದು ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ 14 ಪುಸ್ತಕಗಳನ್ನು ಬಿಡುಗಡೆ ಮಾಡಿರುವುದು ಶ್ಲಾಘನೀಯವಾಗಿದ್ದು, ಈ ಪುಸ್ತಕಗಳನ್ನು ವಿದ್ಯಾರ್ಥಿಗಳು ಹಾಗೂ ಎಲ್ಲಾ ಆಸಕ್ತರು ಪ್ರತಿ ದಿನ ಕನಿಷ್ಠ ಒಂದು ಅಧ್ಯಾಯವನ್ನಾದರೂ ಓದಿ ಪುಸ್ತಕದ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.

ಕುಲಪತಿಗಳಾದ ಡಾ. ಆರ್. ಸಿ. ಜಗದೀಶರವರು ಮಾತನಾಡುತ್ತಾ ವಿಶ್ವವಿದ್ಯಾಲಯದಲ್ಲಿ ಕನ್ನಡಕ್ಕೆ ಹೆಚ್ಚೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದೇವೆ. ನಾವು ಆಂಗ್ಲ ಭಾಷೆಯಲ್ಲಿ ಕಲಿತರೂ ಅರ್ಥಮಾಡಿಕೊಳ್ಳುವುದು ನಮ್ಮ ಮಾತೃಭಾಷೆಯಲ್ಲಿ ಎಂಬುದನ್ನು ನಾವು ಮನಗಾಣಬೇಕಾಗಿದೆ. ಅದೇ ರೀತಿ ಕನ್ನಡ ಪದಕ್ಕೆ ಸಂವಾದಿಯಾಗಿರುವಂತಹ ಅರ್ಥಗಳನ್ನು ಆಂಗ್ಲಭಾಷೆಯಲ್ಲಿ ನಮ್ಮ ಭಾವನೆಯನ್ನು ವ್ಯಕ್ತಪಡಿಸಲು ಕಷ್ಟವಾಗುತ್ತದೆ . ಇಂದು ತಂತ್ರಜ್ಞಾನದ ಬಗ್ಗೆ ಆಂಗ್ಲ ಭಾಷೆಯಲ್ಲಿ ಓದಿ ಅರ್ಥವಾಗದೆ ಕನ್ನಡದಲ್ಲಿ ಓದಿದಾಗ ಆ ತಂತ್ರಜ್ಞಾನ ನನಗೆ ಅರ್ಥವಾಗುತ್ತದೆ ಹಾಗೂ ಬಿಡುಗಡೆಯಾದ ಪುಸ್ತಕಗಳನ್ನು ವಿದ್ಯಾರ್ಥಿಗಳು ರೈತರು ಓದಿ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ನಿರ್ದೇಶಕರಾದ ಡಾ. ಎಂ. ಹನುಮಂತಪ್ಪ ಅವರು ವಿಶ್ವವಿದ್ಯಾಲಯ ಸಂವಹನ ಕೇಂದ್ರದ ಪ್ರಕಟಣೆ ಕಿರು ಪರಿಚಯ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಉಮೇಶ್, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶಿವಮೊಗ್ಗ ಇವರು ಕನ್ನಡ ಯುವ ಬರಹಗಾರರಿಗೆ, ಕಲಾವಿದರಿಗೆ ನಮ್ಮ ಇಲಾಖೆಯಿಂದ ಉತ್ತೇಜನ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶ್ವ ವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಶ್ರೀ ಪೂಜಾರ್, ಕುಲಸಚಿವರು ಡಾ. ಆರ್. ಲೋಕೇಶ ಸಂಶೋಧನಾ ನಿರ್ದೇಶಕರಾದ ಡಾ. ಮೃತ್ಯುಂಜಯ ಸಿ. ವಾಲಿ, ವಿಸ್ತರಣಾ ನಿರ್ದೇಶಕರಾದ ಡಾ. ಬಿ. ಹೇಮ್ಲಾ ನಾಯಕ್, ವಿಶ್ವವಿದ್ಯಾಲಯ ಗ್ರಂಥಪಾಲಕರಾದ ಡಾ. ಡಿ. ತಿಪ್ಪೇಶ, ಕೃಷಿ ಮಹಾವಿದ್ಯಾಲಯ ಡೀನ್(ಕೃಷಿ) ಡಾ. ಬಿ.ಎಂ. ದುಶ್ಯಂತ ಕುಮಾರ್, ವಿಶೇಷಾಧಿಕಾರಿ ಡಾ. ಕೆ.ಸಿ. ಶಶಿಧರ ಡಾ. ಜಯಲಕ್ಷ್ಮಿ ನಾರಾಯಣ ಹೆಗಡೆ ಇನ್ನತರರು ಭಾಗವಹಿಸಿದ್ದರು.

error: Content is protected !!