ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರ ನೇತೃತ್ವದಲ್ಲಿ

ಕಾರ್ಯಕ್ರಮದಲ್ಲಿ ಮನೆ ಮನೆಗೆ ತೆರಳಿ , ವಿಧವಾ ವೇತನ , ವೃದ್ದಾಪ್ಯ ವೇತನ , ಪಡಿತರ ಚೀಟಿ ,ಕಾರ್ಮಿಕ ಕಾರ್ಡ್ , ಆಧಾರ್ ಕಾರ್ಡ್ , ಗುರುತಿನ ಚೀಟಿ ಮುಂತಾದ ಸೇವೆಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಅದರ ಸೌಲಭ್ಯ ವಂಚಿತರಾದವರಿಗೆ ಸೌಲಭ್ಯ ದೊರಕಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಮಾತನಾಡಿ ಕಾಂಗ್ರೆಸ್ ಸರಕಾರವಿದ್ದಾಗ ಸಾಕಷ್ಟು ಯೋಜನೆಗಳನ್ನು ತಂದಿದ್ದು , ಆ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಹಾಗು ಆ ಯೋಜನೆಗಳ ಉಪಯೋಗವನ್ನು ಮನೆಮನೆಗೆ ಮುಟ್ಟಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಿದೆ.

ಕೊರೊನ ಬಂದಂತಹ ಸಮಯದಲ್ಲಿ ಸಾಕಷ್ಟು ಜನ ಪಡಿತರ ಚೀಟಿ , ಆಧಾರ್ ಕಾರ್ಡ್ ವೃದ್ದಾಪ್ಯ ವೇತನ , ವಿಧವಾ ವೇತನವಿಲ್ಲದೆ ಒದ್ದಾಡಿದ್ದನ್ನು ಮನಗಂಡು ಆರಂಬಿಸಲಾಗಿದೆ. ಈ ಕಾರ್ಯಕ್ರಮವನ್ನು ಇನ್ನುಳಿದ 32 ವಾರ್ಡಿನಲ್ಲೂ ಅನುಕ್ರಮವಾಗಿ ನಮ್ಮ ತಂಡವು ನಡೆಸಲಿದೆ .ಇದರ ಉಪಯೊಗ ಪಡೆದುಕೊಳ್ಳಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ಸಿನ ಪ್ರಮುಖರಾದ ಶ್ರೀಧರ್ , ಜ್ಞಾನಪ್ರಕಾಶ್ , ಸೌಗಂಧಿಕಾ , ಕುಮಾರಸ್ವಾಮಿ ಹಾಗು ವಾರ್ಡಿನ ಪ್ರಮುಖರಾದ ಜ್ಯೋತಿ ಅರಳಪ್ಪ , ವಿ ರಾಜು , ವಿಜೇಶ್ ಕೃಷ್ಣಪ್ಪ , ಮಂಜುನಾಥ್ , ಸಾಮಾಜಿಕ ಜಾಲತಾಣದ ಆಕಾಶ್ ,ಪ್ರವೀಣ್ ,ರಾಮು ಶ್ರೀನಿವಾಸ್ ,ಅಕ್ಷಯ್ , ವೆಂಕಟೇಶ್ , ಮಂಜುಳಾ , ಸರೋಜಾ , ನಾಗೇಶ್ ಮುಂತಾದವರಿದ್ದರು.

error: Content is protected !!