ಕೃಷಿ ಇಲಾಖೆ ಶಿವಮೊಗ್ಗ ಮತ್ತು ಧರ್ಮಚಕ್ರ ಟ್ರಸ್ಟ್ ಇವರ ಸಹಯೋಗದೊಂದಿಗೆ ಆಯೋಜಿಸಿದ್ದಸಾವಯವ ಸಿರಿ ಯೋಜನೆಯಡಿ ಜಿಲ್ಲೆಗಳಲ್ಲಿನ ಸಾವಯವ ಕೃಷಿಯಲ್ಲಿ ಸಾಮಥ್ರ್ಯಾಭಿವೃದ್ದಿ ಚಟುವಟಿಕೆಯ ಅಂಗವಾಗಿ ಇಂದು ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಟಾನ ತೀರ್ಥಹಳ್ಳಿ ಹಮ್ಮಿಕೊಳ್ಳಲಾಗಿತ್ತು.
ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಟಾನದ ಅರುಣ್ ಮಾತನಾಡಿ ಸಾವಯವ ಮತ್ತು ಸಿರಿಧಾನ್ಯ ಉತ್ಪಾದಕರ ಮಾರುಕಟ್ಟೆದಾರರ ಕಾರ್ಯಾಗಾರದಲ್ಲಿ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕೆಂದು ಸಾವಯವ ಕೃಷಿಯಿಂದ ಕೃಷಿ ಭೂಮಿ ಫಲವತ್ತತೆಯಿಂದ ಕೂಡಿರುತ್ತದೆ ರಸಾಯಿನಿಕ ಉಪಯೋಗದಿಂದ ಭೂಮಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶಿವಮೊಗ್ಗ ಕೃಷಿ ವಿಜ್ಞಾನ ಕೆಂದ್ರದ ವಿಜ್ಞಾನಿ ಜ್ಯೋತಿ ಎಂ ರಾಥೋಡ್ ಮಾತನಾಡಿ ಭತ್ತದ ಕೊಯ್ಲೋತ್ತರ ನಿರ್ವಹಣೆ ಮತ್ತು ಮೌಲ್ಯವರ್ಧನೆಯ ಬಗ್ಗೆ ತರಬೇತಿಯನ್ನು ನೀಡಿದರು.ಹಾಗು ಸಿರಿಧಾನ್ಯಗಳ ಮಹತ್ವ ಮತ್ತು ಮೌಲ್ಯವರ್ಧನೆ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಗ್ರಾಮರಾಜ್ಯ ಬೆಂಗಳೂರು ಮಾರುಕಟ್ಟೆ ಅಧಿಕಾರಿ ದತ್ತಾತ್ರೇಯ ಹೆಗಡೆ ಮಾತನಾಡಿ ಸಾವಯವ ಬೆಳೆಗಳ ಮಾರುಕಟ್ಟೆ ವ್ಯವಸ್ಥೆಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿಯನ್ನು ನೀಡಿದರು.
ತರಬೇತಿಯ ನಂತರ ಕ್ಷೇತ್ರ ಭೇಟಿ ಹಾಗು ದೇಸಿ ಭತ್ತದ ತಾಕುಗಳ ವೀಕ್ಷಣೆಯನ್ನು ಮಾಡಲಾಯಿತು ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಿಬ್ಬಂದಿಗಳು ಹಾಗು ಇತರರು ಉಪಸ್ಥತರಿದ್ದರು.