ಶಿವಮೊಗ್ಗ, ಸೆಪ್ಟಂಬರ್ 06, ಸಾರಿಗೆ ಇಲಾಖೆಯು ಶಿವಮೊಗ್ಗ ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಜನಸ್ಪಂದನ ಸಭೆ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.
ಸಾರಿಗೆ ಇಲಾಖೆಗೆ ಸಂಬಂದಿಸಿದ ಸಾರ್ವಜನಿಕರ ಕುಂದುಕೊರತೆಯ ಅಹವಾಲುಗಳನ್ನು ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತರಾದ ಎನ್.ಜಿ ಗಾಯತ್ರಿದೇವಿ ಸ್ವೀಕರಿಸಿದರು.
ರಸ್ತೆಗಳಿಗೆ ಸಂಬಂದಿಸಿದ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು, ನಗರ ಸಭೆ ಮತ್ತು ಪಿಡಬ್ಲ್ಯೂಡಿ ಅವರ ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹರಿಸುತ್ತೇವೆ ಹಾಗೂ ರೋಡ್ ಸೇಫ್ಟಿ ಕುರಿತು ತಿಂಗಳಿಗೆ ಎರಡು ಮೀಟಿಂಗ್ ನಡೆಸಲಾಗುವುದು ಎಂದು ತಿಳಿಸಿದರು.
ಆಟೋಚಾಲಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಬಸ್ ನಿಲ್ದಾಣಗಳಲ್ಲಿ ಬೇರೆ ಆಟೋದವರು ಬಾಡಿಗೆ ಹೋಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುತ್ತೇವೆ. ಹಾಗೂ ಆಟೋ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು, ಮೀಟರ್ ಗಿಂತ ಹೆಚ್ಚು ಹಣ ಕೇಳಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.
ನಗರದಲ್ಲಿ ಪ್ರಿ ಪೇಡ್ ಕೌಂಟರ್ ಗಳನ್ನು ತೆರೆಯಲು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸುತ್ತೇವೆ. ಆಟೋ ಚಾಲಕರು ಎಲೆಕ್ಟ್ರಿಕ್ ವಾಹನ ಕಡೆಗೆ ಗಮನ ಹರಿಸಿ, ಶಿವಮೊಗ್ಗದಲ್ಲಿ ಸರಿ ಹೊಂದುವಂತೆ ಮೀಟರ್ ಮೇಲೆ ವಿಧಿಸುವ ಮಿನಿಮಮ್ ಬೆಲೆ ಪರಿಶೀಲಿಸುವುದಾಗಿ ಹೇಳಿದರು.
ಪೋಷಕರ ಮನವಿ ಅಲಿಸಿದ ಗಾಯತ್ರಿದೇವಿ ಅವರು ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಮಕ್ಕಳನ್ನು ಕರೆದೊಯ್ಯುವ ಶಾಲಾ ವಾಹನಗಳು ಅಗತ್ಯಕಿಂತ ಹೆಚ್ಚು ಮಕ್ಕಳನ್ನು ಕರೆದೊಯ್ದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದರು.
ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಶಬ್ದ ಮಾಲಿನ್ಯ ಉಂಟು ಮಾಡುವ ಸೈಲೆನ್ಸರ್ ಹೊಂದಿದ ಬೈಕ್ ಓಡಿಸುವವರು ಹಾಗೂ ವಿಲಿಂಗ್ ಮಾಡುವ ಯುವಕರು ಕಂಡು ಬಂದರೆ ಸಾರ್ವಜನಿಕರೂ ಫೋಟೋವನ್ನು ತೆಗೆದು ಕಳುಹಿಸಿಕೊಡಿ ಅವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿದರು.
ವಾಹನಗಳ ರಿಜಿಸ್ಟೇಶನ್ ಮಾಡಿಸುವವರು ಕಡ್ಡಾಯವಾಗಿ ಆನ್ಲೈನ್ ಮೂಲಕವೆ ಅರ್ಜಿ ಸಲ್ಲಿಸಬೇಕು. ಲೈಸೆನ್ಸ್, ಎಲ್.ಎಲ್.ಆರ್, ಅಹವಾಲು ಆಲಿಸಿ ಎಲ್.ಎಲ್.ಆರ್ ಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಿ ಹಾಗೂ ಅಂಗವಿಲತೆಯುಳ್ಳವರು ಅಂಕವಿಕಲರ ಸರ್ಟಿಫಿಕೇಟ್ ಜೊತೆಗೆ ಕಚೇರಿಗೆ ಬಂದು ಅರ್ಜಿ ಸಲ್ಲಿಸಬೇಕು ಎಂದರು ಹೇಳಿದರು.
ಜನ ಸ್ಪಂದನ ಕಾರ್ಯಕ್ರಮದಲ್ಲಿ ಸಾರಿಗೆ ಪ್ರಾದೇಶಿಕ ಅಧಿಕಾರಿ ಜಿ.ಪಿ ಗಂಗಾಧರ, ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಪಿ.ಎಂ ಮಲ್ಲೇಶಪ್ಪ, ಅಧೀಕ್ಷಕರು, ಸಾರ್ವಜನಿಕರೂ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.