ಶಿವಮೊಗ್ಗ ಸೆಪ್ಟಂಬರ್ 06 : ಭಾರತ ಸರ್ಕಾರದ ಆಹಾರ್, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಸೆಪ್ಟಂಬರ್-2022ರ ಮಾಹೆಯಿಂದ ಪಡಿತರವನ್ನು ಪಡೆಯುವ ಎಲ್ಲಾ ಅಂತ್ಯೋದಯ ಹಾಗೂ ಆದ್ಯತಾ ಪಡಿತರದಾರರು ಎರಡು ಬಾರಿ ಆಧಾರ್ ಬಯೋ ನೀಡಬೇಕಾಗಿದ್ದು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಹಾಗೂ ರಾಷ್ಟ್ರೀಯ ಆಹಾರ ಭದ್ರತೆ ಆಡಿಯಲ್ಲಿ ಪಡಿತರ ಪಡೆಯುವುದು ಕಡ್ಡಾಯವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 1967 ಅಥವಾ 14445 ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ