ಸಿರಿ ಧಾನ್ಯ ಆರೋಗ್ಯ ವೃದ್ದಿಗೆ ಪೂರಕ: ಡಾ. ಜ್ಯೋತಿ ಎಂ ರಾಥೋಡ್
ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲ್ಲಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಇಂದು ಸಾವಯವ ಕೃಷಿ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಮಾರುತಿಯವರು ಇಲಾಖಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ. ಜ್ಯೋತಿ ಎಂ ರಾಥೋಡ್ರವರು ಮಾತನಾಡಿ ವಿವಿಧ ಹಂತಗಳಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಬಗ್ಗೆ ಮಾಹಿತಿ ನೀಡಿ ಹಾಗು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಸಿರಿ ಧಾನ್ಯಗಳ ಪ್ರಾಮುಖ್ಯತೆ ಹಾಗು ಅದರ ಉಪಯೋಗ, ಸಿರಿ ಧಾನ್ಯಗಳನ್ನು ಉಪಯೋಗಿಸುವುದರಿಂದ ಆಗುವ ಲಾಭಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಗ್ರಾಮ ರಾಜ್ಯ ಟ್ರಸ್ಟ್ ಬೆಂಗಳೂರು ಮಾರುಕಟ್ಟೆ ಅಧಿಕಾರಿ ಶ್ರೀ ದತ್ತಾತ್ರೇಯ ಹೆಗ್ಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಟ್ರಸ್ಟ್ ವತಿಯಿಂದ ಸಾವಯವದಲ್ಲಿ ಬೆಳೆದ ಖರೀದಿ ಮಾಡುವುದಾಗಿ ಹಾಗು ರೈತರು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಬೇಕು ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಇಲಾಖೆ ಸಿಬ್ಬಂದಿಗಳು ಧರ್ಮ ಚಕ್ರ ಟ್ರಸ್ಟ್ ನ ಅಧ್ಯಕ್ಷರು ಇತರರು ಭಾಗವಿಸಿದ್ದರು.