ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರು ಜಿಲ್ಲಾಧ್ಯಕ್ಷರಾದಾಗಿಂದಲೂ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹೆಣ್ಣುಮಕ್ಕಳಿಗೆ ಬಾಗಿನ ಕೊಡುವ ಸಂಪ್ರದಾಯವನ್ನು ಬೆಳೆಸಿಕೊಂಡಿದ್ದು , 4 ವರ್ಷಗಳಿಂದಲೂ ಸಾಮಾಜಿಕ ಜಾಲತಾಣದ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಸೌಗಂಧಿಕಾ ರಘುನಾಥ್ ಅವರು ತಂಡ ರಚಿಸಿ ಕಾರ್ಯಕ್ರಮದ ಜವಾಬ್ಧಾರಿ ಹೊತ್ತು , ಯಾವುದೇ ಜಾತಿ ಧರ್ಮದ ತಾರತಮ್ಯವಿಲ್ಲದೆ ನಡೆಸಿಕೊಂಡು ಬರುತ್ತಿದ್ದಾರೆ.

ಸುಮಾರು 200 -300 ಹೆಣ್ಣು ಮಕ್ಕಳಿಗೆ ಬಾಗಿನ ನೀಡಲಾಯಿತು. .ವಿಶೇಷವಾಗಿ ಈ ಬಾರಿ ಎಲ್ಲ ಧರ್ಮಾದವರನ್ನು ಕೂಡಿಸಿ , ಗೌರಿ ಕೂರಿಸಿ , ಕಂಕಣಬದ್ಧರಾಗಿ ಪೂಜೆ ನೆರವೇರಿಸಿ ಏಕತೆಯನ್ನು ಸಾರಿದ್ದಾರೆ.

ಸೌಗಂಧಿಕಾ ಅವರ ತಂಡದಲ್ಲಿ ತಬಸ್ಸುಮ್ ಭಾನು , ಸುಮಾ , ಕವಿತಾ , ಸಂಧ್ಯಾ ಜಾನ್ , ರೇಷ್ಮಾ ಜಬ್ಬರ್ , ಶೀಲಾ , ಸುಕನ್ಯಾ ಒಂದು ವಾರದ ಮೊದಲಿಂದಲೇ ತಯಾರಿ ನಡೆಸಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ , ವಿಜಯಲಕ್ಷ್ಮಿ ಪಾಟೀಲ್ , ರಾಮೇಗೌಡರು , ಚಂದ್ರಶೇಖರ್ , ಕವಿತಾ , ಅನ್ನು , ತಿಮ್ಮರಾಜು , ನಾಗರಾಜ್ , ಶಮೀಮಾ ಭಾನು ಆಗಮಿಸಿದ್ದು , ಬಹಳ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಿ ಶಾಂತಿ ಹಾಗು ಏಕತೆಯನ್ನು ಸಾರುವ ಭರವಸೆಯನ್ನು ಬಿತ್ತಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರು ಅಣ್ಣನ ಸ್ಥಾನದಲ್ಲಿ ನಿಂತು ನಮಗೆಲ್ಲ ಬಾಗಿನ ಕೊಟ್ಟಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ಮಹಿಳೆಯರು , ಅವರಿಗೆ ಹೆಚ್ಚಿನ ಅಧಿಕಾರ ದೊರೆಯಲೆಂದು ಹಾರೈಸಿದ್ದು , ಸುಂದರೇಶ್ ಅವರ ಸಂಘಟನೆಗೆ ಬಲ ಬಂದಂತಾಗಿದೆ.

ಹಾಗೆಯೇ ಶಿವಮೊಗ್ಗದಲ್ಲಿರುವಷ್ಟು ಮಹಿಳಾ ಸಂಘಟನೆ ಬೇರೆಲ್ಲೂ ಕಾಣಲು ಕೂಡ ಅಸಾಧ್ಯ ಎನ್ನಬಹುದು.ಹಾಗೆಯೇ ಜಿಲ್ಲಾ ಕಾಂಗ್ರೆಸ್ ವತಿಯಿಂದ ಗೌರಿ ಗಣೇಶ ಹಬ್ಬವನ್ನು ಕೂಡಿ ನಡೆಸೋಣ ಎಂದು ಶುಭಾಶಯಗಳನ್ನು ತಿಳಿಸಿದ್ದಾರೆ.

error: Content is protected !!