1.ನೇತ್ರದಾನ ಎಂದರೆನು
ಒಬ್ಬ ವ್ಯಕ್ತಿಯು ತನ್ನ ಮರಣದ ನಂತರ ಮಾಡುವ ಕಣ್ಣಿನ ದಾನಕ್ಕೆ ನೇತ್ರದಾನ ಎನ್ನುವರು
2.ನೇತ್ರದಾನವನ್ನು ಯರ್ಯಾರು ಮಾಡಬಹುದು ವಯಸ್ಸಿನ ಮಿತಿಯಿದೆಯೇ?
ನೇತ್ರದಾನಕ್ಕೆ ವಯಸ್ಸು ಮತ್ತು ಲಿಂಗಭೇಧವಿಲ್ಲ
3.ನೇತ್ರದಾನವನ್ನು ಯಾರು ಮಾಡಲಾಗುವುದಿಲ್ಲ?
ವ್ಯಕ್ತಿಯ ಮರಣವು ಹೆಚ್ ಐ ವಿ ಮತ್ತು ಏಯ್ಡ್ ಕಾಯಿಲೆ ಹೆಪಾಟೈಟಿಸ್ ಬಿ ಮತ್ತು ಸಿ, ವಿಷ ಸೇವಿಸಿ ಆತ್ಮಹತ್ತೆ ಮಾಡಿಕೊಂಡÀವರು ಗ್ಯಾಂಗರಿನ್ ಆದವರು ರಕ್ತದಲ್ಲಿ ಸೋಂಕು ಇದ್ದವರು, ಹೃದಯದ ಕಾಯಿಲೆ ಇದ್ದವರು ನೇತ್ರದಾನ ಮಾಡಲು ಬರುವುದಿಲ್ಲ
4.ಬಿಪಿ ಸಕ್ಕರೆ ಕಾಯಲೆ ಇರುವವರು ನೇತ್ರದಾನವನ್ನು ಮಾಡಬಹುದೇ?
ಖಂಡಿತಾ ಮಾಡಬಹುದು ಈ ಕಾಯಿಲೆಗಳಿದ್ದವರೂ ಕೂಡ ನೇತ್ರದಾನವನ್ನು ಮಾಡಬಹುದು
5.ಕಣ್ಣಿನ ತೊಂದರೆಯಿರುವವರು ಪೊರೆ ಶಸ್ತ್ರ ಚಿಕಿತ್ಸೆಯಾದವರು ದೃಷ್ಟಿ ದೋಷ ಉಳ್ಳವರು ಕನ್ನಡಕ ಧರಿಸುವವರು ನೇತ್ರದಾನ ಮಾಡಬಹುದೇ?
ಈ ಎಲ್ಲಾ ತೊಂದರೆಯಿರುವವರು ಖಂಡಿತವಾಗಿಯೂ ನೇತ್ರದಾನ ಮಾಡಬಹುದು
6. ಈ ಎಲ್ಲಾ ತೊಂದರೆಯಿರುವವರು ಖಂಡಿತವಾಗಿಯೂ ನೇತ್ರದಾನ ಮಾಡಬಹುದುನೇತ್ರದಾನವನ್ನು ಮರಣದ ನಂತರ ಎಷ್ಟು ಸಮಯದ ಒಳಗಾಗಿ ಮಾಡಬೇಕು?
ನೇತ್ರದಾನ ಮಾಡಲು ಇಚ್ಚಿಸುವವರು ಮರಣದ ನಂತರ ಆರು ತಾಸಿನ ಒಳಗೆ ದಾನ ಮಾಡಬೇಕು. ಈ ಪ್ರಕ್ರಿಯೆಗೆ ಕುಟುಂಬದವರ ಸಮ್ಮತಿ ಕಡ್ಡಾಯವಾಗಿ ಬೇಕಾಗುತ್ತದೆ.
7. ನೇತ್ರದಾನಮಾಡಲು ಇಚ್ಚೆಯುಳ್ಳ ವ್ಯಕ್ತಿಯು ಕುಟುಂಬದಲ್ಲಿ ಇದನ್ನು ತಿಳಿಸರಬೇಕೆ?
ಹೌದು ದಾನಿಯು ಜೀವಂತವಿರುವಾಗ ಕುಟುಂಬದಲ್ಲಿ ಈ ವಿಷಯವನ್ನು ತಿಳಿಸಿದ್ದರೆ ಮರಣಾನಂತರ ಕುಟುಂಬದ ಸದಸ್ಯರು ದಾನಿಯ ಇಚ್ಚೆಯಂತೆ ನೇತ್ರದನ ಮಾಡುತ್ತಾರೆ.ತಿಳಿಸದೇ ಇದ್ದರೂ ಕೂಡ ಕುಟುಂಬದವರಿಗೆ ನೇತ್ರದಾನ ಮಾಡುವ ಬಯಕೆ ಇದ್ದಲ್ಲಿಎಲ್ಲರೂ ಸೇರಿ ಚರ್ಚಿಸಿ ಒಮ್ಮನಿಸಿನಿಂದ ನೇತ್ರದಾನ ಮಾಡಬಹುದು.
8. ನೇತ್ರದಾನ ಮಾಡಬಯಸುವ ವ್ಯಕ್ತಿಗಳು ತಮ್ಮ ಈ ಆಸೆಯನ್ನು ಮತ್ತೆ ಯಾರಿಗೆ ತಿಳಿಸಬಹುದು?
ನೇತ್ರದಾನ ಮಾಡುವ ಆಸಕ್ತಿಯುಳ್ಳವರು ಯಾವುದೇ ಹತ್ತಿರದ ಕಣ್ಣಿನ ಬ್ಯಾಂಕಿಗೆ ಹೋಗಿ ವಿಷಯವನ್ನು ತಿಳಿಸಿ ಒಂದು ಪ್ರತಿಙ ಪತ್ರದಲ್ಲಿ ತಮ್ಮ ಹೆಸರು ವಿಳಾಸ ದೂರವಾಣಿ ಸಂಖ್ಯೆಯನ್ನು ತಿಳಿಸಿ ನೇತ್ರದಾನಕ್ಕೆ ತಮ್ಮ ಹೆಸರನ್ನು ನೊಂದಾಯಿಸಬಹುದು
9. ಕುಟುಂಬದವರು ನೇತ್ರದಾನವನು ಮಾಡಲು ಯಾರನ್ನು ಸಂಪರ್ಕಿಸಬೇಕು?
ಕುಟುಂಬದವರು ಯಾವುದೇ ಕಣ್ಣಿನ ಬ್ಯಾಂಕನ್ನು ಸಂಪರ್ಕಿಸಬಹುದುಕಣ್ಣಿನ ಬ್ಯಾಂಇನ ತಂಡ ಮಾಹಿತಿಯನ್ನು ತೆಗೆದುಕೊಂಡು ತಾವು ತಿಳಿಸಿದ ವಿಳಾಸಕ್ಕೆ ಬರುತ್ತಾರೆ.
10. ನೇತ್ರದಾನ ಮಾಡಿದ ವ್ಯಕ್ತಿಯ ಮುಖದಲ್ಲಿ ಬದಲಾವಣೆ ಕಂಡುಬರುತ್ತದೆಯೇ?
ಮೃತರ ಚಹರೆಯಲ್ಲಿ ನೇತ್ರದಾನ ಮಾಡುವುದರಿಂದಯಾವುದೇ ರೀತಿಯ ಬದಲವಣೆ ಅಥವಾ ನ್ಯೂನ್ಯತೆ ಕಂಡುಬರುವುದಿಲ್ಲ.
11. ನೇತ್ರದಾನ ಮಾಡಲು ಇಚ್ಚೆ ಇದ್ದಲ್ಲಿ ಮೃತರ ಕಣ್ಣಿನ ಕಾಳಜಿಯನ್ನು ತೆರಗೆದುಕೊಳ್ಳಬೇಕೆ ಇದರಲ್ಲಿ ಅವರ ಪಾತ್ರವಿದೆಯೇ?
ಈ ವಿಷಯದಲ್ಲಿ ಕುಟುಂಬದವರ ಪಾತ್ರ ಬಹಳ ಮುಖ್ಯ. ವ್ಯಕ್ತಿಯ ಮರಣಾ ನಂತರ ಆತನ ಕಣ್ಣನ್ನು ಮುಚ್ಚಬೇಕು ಹವಾ ನಿಯಂತ್ರಣವಿದ್ದಲ್ಲಿ ಅದನ್ನು ನಿಲ್ಲಿಸಬೇಕು ಕಣ್ಣಿನ ಮೇಲೆ ನೀರಿನಿಂದ ಒದ್ದೆ ಮಾಡಿದ ಹತ್ತಿಯನ್ನು ಇಡಬೇಕು.
12. ನೇತ್ರದಾನ ಮಾಡಲು ತುಂಬಾ ಸಮಯಬೇಕೆ?
ಕೇವಲ 15ರಿಂದ 20 ನಿಮಿಷದಲ್ಲಿ ಮೃತ ವ್ಯಕ್ತಿಯ ದೇಹದಿಂದ ಪಡೆಯಬಹುದಾದ್ದರಿಂದ ಕುಟುಂಬದವರಿಗೆ ಮುಂದಿನ ಪದ್ದತಿಗಳನ್ನು ನಿರ್ವಹಿಸಲು ಯಾವುದೇ ಅಡ್ಡಿಯಾಗುವುದಿಲ್ಲ.
13. ಮೃತ ವ್ಯಕ್ತಿಯಿಂದ ಪಡೆದ ನೇತ್ರದಾನದ ನಿರ್ವಹಣೆ ಮಾಡಲು ಆಸ್ಪತ್ರೆಯವರಿಗೆ ನಿಯಾಮವಳಿಗಳಿವೆಯೇ?
ನೇತ್ರದಾನ ನಿರ್ವಹಣೆ ಕಾರ್ಯವು ಸರ್ಕಾರದ ಕಟ್ಟುನಿಟ್ಟಿನ ನಿಯಮಾಳಿಗಳ ಅನುಸಾರವೇ ನಡೆಯುತ್ತವೆ.
14. ನೇತ್ರದಾನ ಮಾಡಿದ ನಂತರ ಆ ಕಣ್ಣುಗಳನ್ನುಏನು ಮಾಡುತ್ತಾರೆ?
ಕಣ್ಣಿನ ದಾನವನ್ನು ಪಡೆದ ನಂತರ ಬಹಳ ಜಾಗರುಕತೆಯಿಂದ ಕಣ್ಣಿನ ಬ್ಯಾಂಕಿನಲ್ಲಿ ಸಂಗ್ರಹಿಸಿ ಇಡಲಾಗುವುದು.
15. ಕಣ್ಣಿನ ಕಸಿ ಮಾಡುವುದರಿಂದ ಯಾವ ರೀತಿಯ ರೋಗಿಗಳಿಗೆ ದೃಷ್ಟಿ ಮರುಕಳಿಸುತ್ತದೆ?
ಯಾವ ರೋಗಿಗಳು ಕಪ್ಪುಗುಡ್ಡೆಯ ತೊಂದರೆಯಿಂದ ದೃಷ್ಟಿಹೀನರಾಗಿರುತ್ತಾರೋ ಅಂತಹ ರೋಗಿಗಳಿಗೆ ಮಾತ್ರ ದೃಷ್ಟಿ ಮರುಕಳಿಸುತ್ತದೆ. ಕಣ್ಣಿನ ನರದ ತೊಂದರೆ, ಪೊರೆಯ ತೊಂದರೆ, ಗಗಲುಕೋಮಾ ತೊಂದರೆ, ಹುಟ್ಟುವಾಗಲೇ ಕುಂದಿಹೋದ ಕಣ್ಣುಗಳುಳ್ಳವರಿಗೆ ಈ ಕಸಿಚಿಕಿತ್ಸೆಯಿಂದ ದೃಷ್ಟಿ ಮರಳಿ ಪಡೆಯಲಾಗುವುದಿಲ್ಲ.
16. ಕಪ್ಪುಗುಡ್ಡೆಯ ತೊಂದರೆಗಳು ಎಂದರೆ ಯಾವುವು ಆ ಚಿಕಿತ್ಸೆಯ ಫಲಾನುಭವಿಗಳು ಯಾರು?
ಕಪ್ಪುಗುಡ್ಡೆಯ ಮೇಲಿನ ಕಲೆಗಳು ಗಾಯ ಕೀವಿನ ತೊಂದರೆಗಳು ಕಪ್ಪುಗುಡ್ಡೆಗೆ ಪೆಟ್ಟಾಗಿ ಹರಿದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ರಾಸಯಿನಿಕ ಸುಣ್ಗದಿಂದ ಕಪ್ಪುಗುಡ್ಡೆ ಸುಟ್ಟಿರುವವರು, ತೀವ್ರತರನಾದ ಕೆರೊಟೋಕೋನಸ್ ಎಂಬ ತೊಂದರೆಯಿರುವವರು ಈ ಕಸಿ ಚಿಕಿತ್ಸೆಯ ಫಲಾನುಭವಿಗಳು.
17. ನೇತ್ರದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳೇನು?
ನೇತ್ರದಾನ ಮಾಡಿದರೆ ಮುಂದಿನ ಜನ್ಮದಲ್ಲಿ ಕುರುಡನಾಗಿ ಹುಟ್ಟಬೇಕಾಗುತ್ತದೆ. ನೇತ್ರದಾನ ಮಾಡಿದರೆ ಮುಕ್ತಿ ಸಿಗುವುದಿಲ್ಲ ನೇತ್ರದಾನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ ಎಂಬ ತ್ಪ್ಪು ಕಲ್ಪನೆಗಳಿವೆ.
18. ನೇತ್ರದಾನ ಮಾಡಲು ಇಚ್ಚೆ ಇದ್ದವರು ಆಸ್ಗಪತ್ರೆಯಲ್ಲಿ ಮರಣವನ್ನು ಹೊಂದಿದರೆ ಏನು ಮಾಡಬೇಕು?
ನೇತ್ರದಾನವನ್ನು ಆಸ್ಪತ್ರೆಯಲ್ಲಿಯೇ ಮಾಡಬಹುದು ನೇತ್ರದಾನ ಮಾಡುತ್ತೇವೆ ಎಂದು ಕಣ್ಣಿನ ಬ್ಯಾಂಕಿಗೆ ವಿಷಯ ತಿಳಿಸಿದರೆ ಕಣ್ಣಿನ ಬ್ಯಾಂಇನ ತಂಡದವರು ನೇರವಾಗಿ ಮೃತರಿರುವ ಅಸ್ಪತ್ರೆಗೆ ಬಂದು ದಾನವನ್ನು ಸ್ವೀಕರಿಸುತ್ತಾರೆ.
19. ಭಾರತದಲ್ಲಿ ನೇತ್ರದಾನವನ್ನು ಪಡೆಯಲು ಕಾದಿರುವ ರೋಗಿಗಳ ಸಂಖ್ಯೆ ಎಷ್ಟಿದೆ?
ಒಂದು ಮಿಲಿಯನ್ಗಿಂತಲೂ ಹೆಚ್ಚಿನ ದೃಷ್ಟಿಹೀನರು ಭಾರತದಲ್ಲಿದ್ದಾರೆ. ಇವರೆಲ್ಲರೂ ಕೂಡ ನೇತ್ರದಾನ ಪಡೆದು ಕಸಿ ಚಿಕಿತ್ಸೆ ಮಾಡಿಸಿಕೊಳ್ಳುವ ಅಗತ್ಯವಿದೆ.
20. ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಯಾವಾಗ ನಡೆಯುತ್ತದೆ. ಮತ್ತು ಇದರ ಉದ್ದೇಶಗಳೇನು?
ಭಾರತದಲ್ಲಿ ನೇತ್ರದಾನ ಪಾಕ್ಷಕ ಕಾರ್ಯಕ್ರಮವು ಪ್ರತೀ ವರ್ಷ ಆಗಷ್ಟ್ 25ರಿಂದ ಸೆಪ್ಟಂಬರ್ 8ನೇ ತಾರೀಖಿನವರೆಗೆ ನಡೆಯುತ್ತದೆ. 2022 ನೇ ಸಾಲಿನಲ್ಲಿ ಭಾರತದಾದ್ಯಂತ 37 ಪಾಕ್ಷಿಕ ಕಾರ್ಯಕ್ರಮ ನಡೆಯುತ್ತಿದೆ. ಈಕಾಯಕ್ರಮ ಉದ್ದೇಶ ಸಮಾಜದಲ್ಲಿ ಹೆಚ್ಚಿನ ಜನರಿಗೆ ನೇಢತ್ರದಾನ ಮತ್ತು ಅದರ ಮಹತ್ವದ ಬಗ್ಗೆ ವಿಷಯ ತಿಳಿಸಲು ಜಾಗೃತಿ ಕಾಯಕ್ರಮಗಳನ್ನು ವಿವಿಧ ರೀತಿಯಲ್ಲಿ ನಡೆಸಿ ಹೆಚ್ಚಿನ ಜನರು ನೇತ್ರದಾನ ಮಾಡಲು ಪ್ರತಿಙÉ ಮಾಡಲು ಪ್ರೋತ್ಸಹಿಸಿದಂತಾಗುತ್ತದೆ.
ಡಾ. ರೂಪಶ್ರೀ ಬಿ.ವಿ. ಕಾರ್ನಿಯಾ ಕನ್ಸಲ್ಟೆಂಟ್. ಶಂಕರ ಕಣ್ಣಿನ ಆಸ್ಪತ್ರೆ. ಶಿವಮೊಗ್ಗ