ಶಿವಮೊಗ್ಗ : ಜಾನುವಾರು ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ, ಶಿವಮೊಗ್ಗ ಮತ್ತು ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇದರ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮವಾದ “ಅನುತ್ಪಾದಕತೆಯಿಂದ ಉತ್ಪಾಕತೆಯೆಡೆಗೆ” ಇದರ ಅಂಗವಾಗಿ ಹೊಸನಗರದ ನಗರ ಮತ್ತು ಸುತ್ತಮುತ್ತಲಿನ ಹಲವಾರು ಜಾನುವಾರುಗಳನ್ನು ಪರೀಕ್ಷಿಸಿ ಅವುಗಳಲ್ಲಿ ಆಯ್ಕೆ ಮಾಡಿಕೊಂಡ ರಾಸುಗಳಿಗೆ ದಿನಾಂಕ 30-8-2017 ರಿಂದ ಪ್ರಾರಂಭಿಸಲಾಗಿತ್ತು.

ಸತತವಾಗಿ ನಡೆಸಿದ 10 ಅನುಸರಣೆಯಿಂದ ಶೇ: 65 ರಷ್ಟು ರಾಸುಗಳು ಗರ್ಭಧರಿಸಿದ್ದು, ಇನ್ನುಳಿದವುಗಳನ್ನು ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಬೇಕೆಂದು ಪ್ರಧಾನ ಸಂಶೋಧಕ ಮತ್ತು ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ:ಎನ್.ಬಿ.ಶ್ರೀಧರ ತಿಳಿಸಿದರು. ಇದೇ ಸಂದರ್ಭದಲ್ಲಿ ನಗರ, ರಿಪ್ಪನ್ ಪೇಟೆ ಮತ್ತು ಹೊಸನಗರದಲ್ಲಿ ವಿವಿಧ ಅನುತ್ಪಾದಕ ರಾಸುಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಈ ಕಾರ್ಯಕ್ರಮದ ಪ್ರಯೋಜನವನ್ನು ರೈತರು ಹೆಚ್ಚಿನ ರೀತಿಯಲ್ಲಿ ಪಡೆಯಬೇಕೆಂದು ಕರೆ ನೀಡಲಾಯಿತು.
ಅಲ್ಲದೇ ಸಸ್ಯಜನ್ಯ ವಿಷಬಾಧೆಯ ಕಾರಣದಿಂದ ಮೃತಪಟ್ಟಿವೆ ಎಂದು ಸಂದೇಹಿಸಿದ ವಿವಿಧ ರಾಸುಗಳು ಮೇಯುವ ಪ್ರದೇಶಗಳಲ್ಲಿ ಸಂಶಯಿತ ಸಸ್ಯಗಳನ್ನು ಸಂಗ್ರಹಿಸಲಾಯಿತು. ನಿಗೂಢ ಕಾಯಿಲೆಗಳಿಂದ ಬಳಲುತ್ತಿವೆ ಎಂದು ಸಂಶಯಿಸಲಾದ ಜಾನುವಾರುಗಳಿಗಳಿಂದ ವಿವಿಧ ಮಾದರಿಗಳನ್ನು ಸಂಶೋಧನೆಗೆ ಸಂಗ್ರಹಿಸಲಾಯಿತು.
ರೈತರು ಜಾನುವಾರುಗಳ ಕಾಯಿಲೆಗೆ ತುರ್ತು ಪ್ರಥಮ ಚಿಕಿತ್ಸೆಗೆ ಬಳಸಬಹುದಾದ ಔಷಧ ಸಸ್ಯಗಳ ಬಗ್ಗೆ ಮಾಹಿತಿ ನೀಡಿ, ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಪಶು ಔಷಧವನ ನಿರ್ಮಿಸಲಾಗುತ್ತಿದ್ದು, ಅದರ ಪ್ರಯೋಜನವನ್ನು ರೈತರು ಪಡೆಯಬೇಕೆಂದು ಕೋರಿಕೊಳ್ಳಲಾಯಿತು.
ಜಾನುವರು ವಿಶೇಷ ತಪಾಸಣಾ ಕಾರ್ಯಕ್ರಮದಲ್ಲಿ ವಿಷಯ ತಜ್ಞರಾದ ಡಾ: ಎನ್.ಬಿ.ಶ್ರೀಧರ ಇವರೊಡನೆ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ:ಎನ್.ಬಿ.ಶ್ರೀಧರ ಇವರು ಇದೇ ರೀತಿಯ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಸಹ ಕಾಲ ಕ್ರಮೇಣ ವಿಸ್ತರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಹೊಸನಗರದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ: ರಾಮಚಂದ್ರ, ಮುಖ್ಯ ಪಶುವೈದ್ಯಾಧಿಕಾರಿ ಡಾ: ನಾಗರಾಜ, ಕೆ.ಎಂ. ಮತ್ತು ಶ್ರೀ ಕೆ.ಎನ್.ಕೃಷ್ಣಮೂರ್ತಿ ಮತ್ತಿತರು ಸಹಕರಿಸಿ

error: Content is protected !!