ಶಿವಮೊಗ್ಗ. ಮೇ 10 : ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಹಾಗೂ ಕೇಂದ್ರ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಗುರುತಿನ ಚೀಟಿ ಪಡೆದಿರುವ ಎಲ್ಲಾ ವಿಕಲಚೇತನರು ಹಾಗೂ ಹೊಸದಾಗಿ ಗುರುತಿನ ಚೀಟಿಯನ್ನು ಪಡೆಯಲು ಇಚ್ಚಿಸುವ ಎಲ್ಲಾ ವಿಕಲಚೇತನರು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಸಬೇಕಾಗುತ್ತದೆ.
ಅರ್ಹ ವಿಕಲಚೇತನರು ಜಾಲತಾಣ : www.swavlambancard.gov.in ನ್ನು ಭೇಟಿ ನೀಡಿ, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನೋಂದಾಯಿಸಿದ ಪ್ರತಿಯೊಬ್ಬ ವಿಶೇಷಚೇತನರಿಗೆ ರಾಜ್ಯ ವೈದ್ಯಕೀಯ ಪ್ರಾಧಿಕಾರದಿಂದ ದೃಢೀಕರಿಸಲಾಗುವ ವೈದ್ಯಕೀಯ ಪ್ರಮಾಣಪತ್ರದ ಸಮಗ್ರ ಮಾಹಿತಿಯುಳ್ಳ ಗಣಕೀಕೃತ ವಿಶಿಷ್ಟ ಗುರುತಿನ ಚೀಟಿಯನ್ನು ಅಂಚೆ ಮೂಲಕ ಫಲಾನುಭವಿಗಳ ಮನೆಗೆ ರವಾನಿಸಲಾಗುವುದು.
ಅರ್ಜಿದಾರರು ಕಡ್ಡಾಯವಾಗಿ ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಆಧಾರ್ ಕಾರ್ಡ್, ವಾಹನ ಚಾಲನ ಪರವಾನಿಗೆ, ಪಾಸ್‍ಪೋರ್ಟ್, ರೇಷನ್‍ಕಾರ್ಡ್, ಮತದಾರರ ಗುರುತಿನ ಚೀಟಿ ಇವುಗಳಲ್ಲಿ ಯಾವುದೇ ಒಂದನ್ನು ವಿಳಾಸಕ್ಕಾಗಿ ಸಲ್ಲಿಸಬೇಕು. ಈಗಾಗಲೇ ಅಂಗವೈಕಲ್ಯತೆಯ ದೃಢೀಕರಣಕ್ಕಾಗಿ ಪ್ರಮಾಣಪತ್ರ ಹೊಂದಿರುವ ವಿಶೇಷಚೇತನರು ಈ ಪತ್ರವನ್ನು ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡಬೇಕು. ಹೊಸದಾಗಿ ಅರ್ಜಿ ಸಲ್ಲಿಸುವವರು ಸರ್ಕಾರಿ ಆಸ್ಪತ್ರೆಯ ಒಪಿಡಿ ಚೀಟಿಯನ್ನು ಅಪ್‍ಲೋಡ್ ಮಾಡಬೇಕು. ವಿಶೇಷಚೇತನರ ಫೋಟೋ ಮತ್ತು ಸಹಿ ಅಪ್‍ಲೋಡ್ ಮಾಡಬೇಕು.
ಈ ಕುರಿತಾದ ಹೆಚ್ಚಿನ ವಿವರಗಳಿಗಾಗಿ ಆಯಾ ತಾಲೂಕಿನ ತಾಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯೂ.ಗಳಿಗೆ ದೂರವಾಣಿ ಕರೆ ಮಾಡಬಹುದಾಗಿದೆ. ಶಿವಮೊಗ್ಗ-ಮೊ.9980150110, ಭದ್ರಾವತಿ-ಮೊ.9880274140, ಶಿಕಾರಿಪುರ-ಮೊ.9741161346, ತೀರ್ಥಹಳ್ಳಿ-ಮೊ.9480767638, ಸಾಗರ-ಮೊ.9535247757, ಸೊರಬ-ಮೊ.9591767445, ಹೊಸನಗರ-ಮೊ.9731922693ನ್ನು ಅಥವಾ ದೂರವಾಣಿ ಸಂಖ್ಯೆ 08182-251676ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

error: Content is protected !!