ಆರ್ಥಿಕವಾಗಿ ಸದೃಢ ಹಾಗೂ ವಿಶ್ವಾಸಾರ್ಹವಾದ ಬ್ಯಾಂಕ್ಎ ಸ್. ಕೆ. ಮರಿಯಪ್ಪ, ಉಮಾಶಂಕರ ಉಪಾಧ್ಯ ವಿವರಣೆ


ಶಿವಮೊಗ್ಗ, ಆ. 04ಃ : ನಗರದ ಕೋಟೆ ರಸ್ತೆಯ ಸಿಟಿ ಕೋಆಪರೇಟಿವ್ ಬ್ಯಾಂಕ್‍ಗೆ ಈಗ 110ನೇ ವರ್ಷಾಚರಣೆಯ ಸಂಭ್ರಮ. ಈ ಬ್ಯಾಂಕು ಹಿಂದಿನ ಹಿರಿಯ ಸಹಕಾರಿಗಳಾದ ಎಸ್.ವಿ. ತಿಮ್ಮಯ್ಯ, ಕೃಷ್ಣ ಸಿಂಗ್, ಮಹೇಶ್ವರಪ್ಪ, ಚಂದ್ರಶೇಖರ್, ಎಸ್. ಆರ್. ತಿಮ್ಮಯ್ಯರವರ ಮಾರ್ಗದರ್ಶನದಲ್ಲಿ ನಡೆದು ಬಂದು ಆರ್ಥಿಕವಾಗಿ ಸದೃಢವಾಗಿದೆಯಲ್ಲದೇ ಅತ್ಯಂತ ವಿಶ್ವಾಸಾರ್ಹ ಬ್ಯಾಂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಂ. ಉಮಾಶಂಕರ ಉಪಾಧ್ಯ, ನಿರ್ದೇಶಕ ಮರಿಯಪ್ಪ ತಿಳಿಸಿದರು.
ನಗರದ ಮೀಡಿಯಾ ಹೌಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಟಿ ಕೋಆಪರೇಟಿವ್ ಎಂದರೆ ಮೊದಲು ಸೀಗೆಹಟ್ಟಿ, ಹೊಸಮನೆ, ಅಂಗಳಯ್ಯನ ಕೆರೆ ಹಾಗೂ ದುರ್ಗಿಗುಡಿ ಬಡಾವಣೆಗೆ ಸೀಮಿತಗೊಂಡು ಆರಂಭಗೊಂಡ ಬ್ಯಾಂಕ್ ಇಂದು ವಿಸ್ತಾರವಾಗಿ ಬೆಳೆದು ಸಧೃಢವಾಗಿ ಬೆಳೆದಿದೆ ಎಂದರು.
ಈಗ ಸಿಟಿ ಕೋಆಪರೇಟಿವ್ ಬ್ಯಾಂಕ್ ಗೆ ಎಲ್. ಎಲ್. ಆರ್. ನಗರದಲ್ಲಿ ಶಾಖೆ ತೆರೆಯಲಾಗುತ್ತಿದೆ. ರಿಸರ್ವ್ ಬ್ಯಾಂಕ್ ಮಾರ್ಗದರ್ಶನದಲ್ಲಿ ವ್ಯವಹಾರ ನಡೆಯುತ್ತಿರುವುದರಿಂದ, ಅದರ ನಿಬಂಧನೆಗೆ ಒಳಪಟ್ಟು ಸಾಲ ವಿತರಣೆಯಲ್ಲಿ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ ಎಂದ ಅವರು, ಇದರಿಂದ ಬ್ಯಾಂಕಿನ ಆರ್ಥಿಕ ಸದೃಢತೆಗೆ ಯಾವುದೇ ಧಕ್ಕೆ ಇಲ್ಲ. ಬ್ಯಾಂಕಿನ ಷೇರು ಬಂಡವಾಳ 3 ಕೋಟಿ 45 ಲಕ್ಷ ರೂ., 85 ಕೋಟಿ 32 ಲಕ್ಷ ಠೇವಣಿ, 105 ಕೋಟಿ 7 ಲಕ್ಷ ರೂ., ದುಡಿಯುವ ಬಂಡವಾಳವನ್ನ ಹೊಂದಲಾಗಿದ್ದು, ಪ್ರಸ್ತುತ 7000 ಜನ ಸದಸ್ಯರಿದ್ದಾರೆ. ಇವರ ಹಿತ ಕಾಯಲು ಬ್ಯಾಂಕು ಸದಾ ಸಿದ್ಧ ಎಂದರು.
ನಿರ್ದೇಶಕರುಗಳಾದ ರಾಜಣ್ಣ, ರೇಖಾ ಚಂದ್ರಶೇಖರ್, ರಾಕೇಶ್, ಎಸ್. ಪಿ. ಶೇಷಾದ್ರಿ, ಕೆ.ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯ ನಾಗರೀಕರಿಗೆ ಠೇವಣಿ ಮೇಲೆ ಶೇ. 7.5% ಬಡ್ಡಿದರ ನೀಡಲಾಗುತ್ತಿದೆ. ಈ ಕೊಡುಗೆ 110 ನೇ ವರ್ಷ ಅಂಗವಾಗಿ ಡಿಸೆಂಬರ್ ವರೆಗೆ ನೀಡಲಾಗುತ್ತದೆ.
1912ರಲ್ಲಿ ಸಮಾನ ಮನಸ್ಸಿನ ಸಹಕಾರಿ ಸೇರಿ ಎಸ್.ಆರ್. ಬಾಲಕೃಷ್ಣರಾವ್, ಇವರ ಅಧ್ಯಕ್ಷತೆಯಲ್ಲಿ ಹುಟ್ಟುಹಾಕಿದ ಸಹಕಾರಿ ಸಂಸ್ಥೆ ಇದು. ಈ ಸಹಕಾರಿ ಬ್ಯಾಂಕ್ 1974ರಲ್ಲಿ ನಗರದ ಹೃದಯಭಾಗವಾದ ನೆಹರು ರಸ್ತೆಯ ಶಿವಪ್ಪನಾಯಕ ಮಾರುಕಟ್ಟೆಯಲ್ಲಿ ಈ ಬ್ಯಾಂಕಿನ ಶಾಖೆಯನ್ನು ತೆರೆಯಲಾಯಿತು. ಈ ಶಾಖೆಯು ಇಂದು ಬೃಹದಾಕಾರವಾಗಿ ಬೆಳೆದು ಸರ್ವಜನಾಂಗದವರ ಆರ್ಥಿಕ ತೊಂದರೆಗಳನ್ನು ನೀಗಿಸುವಲ್ಲಿ ಗಣನೀಯ ಪಾತ್ರ ವಹಿಸಿದೆ.
ಬ್ಯಾಂಕಿನ ಎನ್.ಪಿ.ಎ ಶೇ.6% ಗೆ ತರಲಾಗಿದೆ. ಈ ಬಾರಿಯೂ ಬ್ಯಾಂಕ್ ರೂ.85 ಲಕ್ಷ ಲಾಭ ಗಳಿಸಿದ್ದು, 2010 ರಿಂದ ಡಿವಿಡೆಂಡ್ ಶೇ.10% ಘೋಷಿಸಲಾಗಿದೆ.
ಬದಲಾದ ನಿಯಮಗಳ ಪ್ರಕಾರ, ಪ್ರತಿಯೊಬ್ಬ ಷೇರುದಾರನು ಕಳೆದ ಐದು ವಾರ್ಷಿಕ ಸಾಮಾನ್ಯ ಸಭೆಗಳ ಪೈಕಿ ಯಾವುದೇ ಎರಡು ಸಭೆಗಳಲ್ಲಿ ಹಾಜರಾಗುವುದು ಕಡ್ಡಾಯ. ತಪ್ಪಿದಲ್ಲಿ ಸದರಿ ಷೇರುದಾರರಿಗೆ ಬ್ಯಾಂಕಿನ ಸಾಮಾನ್ಯ ಸಭೆಯಲ್ಲಿ ಮತ್ತು ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಇರುವುದಿಲ್ಲ

ಮೃತ “ಎ” ತರಗತಿ ಷೇರುದಾರ ಸದಸ್ಯರ ವಾರಸುದಾರರಿಗೆ ಈ ಹಿಂದೆ ನೀಡುತ್ತಿದ್ದ ಕ್ಷೇಮನಿ„ ಪರಿಹಾರದ ಮೊಬಲಗನ್ನು ರೂ.5,000/- ದಿಂದ ರೂ.7,000/- ಕ್ಕೆ ಪರಿಷ್ಕರಿಸಿದೆ. ಕ್ಷೇಮಾಭಿವೃದ್ಧಿ ಸೌಲಭ್ಯ ಹೊಂದಿದ “ಎ” ತರಗತಿ ಸದಸ್ಯರಿಗೆ ರೂ.25,000/- ಅಪಘಾತ ವಿಮೆ ಇದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸುವ ಸಲುವಾಗಿ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಈ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದೆ. ಬ್ಯಾಂಕಿನಲ್ಲಿ ಸಾಲ ಪಡೆದು ಉತ್ತಮವಾಗಿ ಸಾಲ ಮರುಪಾವತಿ ಮಾಡಿದ ಉತ್ತಮ ಸಾಲಗಾರರಿಗೆ ಸನ್ಮಾನವನ್ನು ಮಾಡಲಾಗುತ್ತಿದೆ.

ಬ್ಯಾಂಕಿನ 2021-22 ನೇ ಸಾಲಿನ 110ನೇ ಸರ್ವಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಆದ 07 ರ ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಶಿವಮೊಗ್ಗ ನಗರದ ಎಸ್.ಪಿ.ಎಂ. ರಸ್ತೆಯಲ್ಲಿರುವ ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನದ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ
error: Content is protected !!