ಪೌಷ್ಟಿಕ ಕೈತೋಟದ ತರಬೇತಿ ಕಾರ್ಯಕ್ರಮವನ್ನು, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ ಸರ್ಕಾರಿ ಕಿರಿಯ ಶಾಲೆ ಬೇಗೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ತರಬೇತಿ ಸಂಘಟಕರಾದ ಡಾ. ಜ್ಯೋತಿ ಎಂ. ರಾಠೋಡ್ ವಿಜ್ಞಾನಿ, (ಗೃಹ ವಿಜ್ಞಾನಿ), ಕೆ.ವಿ.ಕೆ ಶಿವಮೊಗ್ಗ, ಇವರು ಮಾತನಾಡುತ್ತ ಕೈತೋಟ ನಿರ್ವಹಣೆ ಬಿಡುವಿನ ವೇಳೆಗೆ ಉತ್ತಮ ಹವ್ಯಾಸವಾಗಿದ್ದು. ಕೈತೋಟ ನಿರ್ಮಾಣದಿಂದ ಕ್ರಿಯಾಶೀಲತೆಯು ಉಜ್ವಲಗೊಳ್ಳುತ್ತದೆ. ಅಲ್ಲದೇ ದೇಹದ ಮತ್ತು ಮನಸ್ಸಿನ ಆರೋಗ್ಯವನ್ನು ಉತ್ತಮಪಡಿಸಬಹುದು. ಪೌಷ್ಟಿಕ ಆಹಾರದ ಕೊರತೆಯನ್ನು ನೀಗಿಸಬಹುದು. ರಾಸಾಯನಿಕ ಔಷಧಿಗಳನ್ನು ಸಿಂಪಡಿಸದೆ ಸಾವಯವ ಪದ್ದತಿಯಲ್ಲಿ ಬೆಳೆದ ಕಾಯಿ ಪಲ್ಲೆಗಳನ್ನು ಪಡೆಯಬಹುದು. ತಾಜಾ ಮತ್ತು ಒಳ್ಳೆಯ ಗುಣಮಟ್ಟದ ಕಾಯಿ ಪಲ್ಯ ಹಾಗೂ ಹಣ್ಣುಗಳನ್ನು ವರ್ಷಪೂರ್ತಿ ಸೇವಿಸಬಹುದು.
ಕೈತೋಟದಲ್ಲಿ ಮತ್ತು ಶಾಲೆಯಲ್ಲಿರುವ ಕಸವನ್ನು ಉಪಯೋಗಿಸಿ ಎರೆಹುಳು ಗೊಬ್ಬರವನ್ನು ತಯಾರಿಸಬಹುದು ಮತ್ತು ಗೊಬ್ಬರವಾಗಿ ಉಪಯೋಗಿಸಬಹುದು. ಚೆನ್ನಾಗಿ ಕೈತೋಟ ಮಾಡಿದರೆ ಗ್ರಾಮದ ಜನರಿಗೆ ಉತ್ತಮ ಮಾರ್ಗದರ್ಶನ ಕೊಡಬಹುದು. ಶಾಲೆಯಲ್ಲಿರುವ ಮಕ್ಕಳಿಗೆ ಕೈತೋಟದ ಬಗ್ಗೆ ಆಸಕ್ತಿ ಮೂಡಿಸಬಹುದು ಹಾಗೂ ಒಂದು ಹವ್ಯಾಸವಾಗಿ ತೆಗೆದುಕೊಳ್ಳಬಹುದು
ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ಅವರ ವಯಸ್ಸು, ತೂಕ, ಲಿಂಗ ಹಾಗೂ ಕಾರ್ಯ ಚಟುವಟಿಕೆಗಳಿಗೆ ಅನುಗುಣವಾಗಿ ಅವಶ್ಯವಿರುವ ಆಹಾರವನ್ನು ಎಲ್ಲಾ ರೀತಿಯ ಆಹಾರ ಗುಂಪುಗಳನ್ನು ಒಳಗೊಂಡಂತೆ ಸೂಕ್ತ ಪ್ರಮಾಣದಲ್ಲಿ ಸೇವಿಸುವ ಆಹಾರವೇ ಸಮತೋಲನ ಆಹಾರವೆಂದು ಹೇಳಿ ಸಮತೋಲನ ಆಹಾರದ ಬಗ್ಗೆ ತಿಳಿಸಿಕೊಟ್ಟು ಹಸಿರು ಸೊಪ್ಪುಗಳಲ್ಲಿ ಕಬ್ಬಿಣದ ಲವಣಗಳು ಅಧಿಕ ಪ್ರಮಾಣದಲ್ಲಿ ಇವೆ ಎಂದು ಮಾಹಿತಿ ನೀಡಿದರು.
ತರಬೇತಿಯಲ್ಲಿ ಡಾ. ಪೂಜಾ. ಜಿ. ಕೆ. ಹಿರಿಯ ಸಂಶೋಧನಾ ಸಹಾಯಕರು, ಆರ್ಯ ಯೋಜನೆ, ಕೆ.ವಿ.ಕೆ ಶಿವಮೊಗ್ಗ ಹಾಗೂ ಬೇಗೂರು ಶಾಲೆಯ ಪ್ರಾಧ್ಯಾಪಕರುಗಳಾದ ಪ್ರಸನ್ನ.ಪಿ.ಜೆ, ಮಮತಾ.ಹೆಚ್.ಬಿ, ಗೀತಾ.ಜಿ.ವಿ, ಮಹೇಶ್ವರಪ್ಪ.ಎ.ಬಿ, ರವಿಕುಮಾರ್.ಕೆ ಮತ್ತು ಧನಂಜಯಪ್ಪ.ಜಿ.ಬಿ ಉಪಸ್ಥಿತರಿದ್ದರು.
ಹಾಗೂ ಶಾಲೆಯ ವಿಧ್ಯಾರ್ಥಿಗಳು ತರಬೇತಿಯ ಸದುಪಯೋಗ ಪಡೆದುಕೊಂಡರು